ಬಾದಾಮಿಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಸಿದ್ದರಾಮಯ್ಯ

Published : Oct 23, 2019, 10:42 AM IST
ಬಾದಾಮಿಯಲ್ಲಿ ಅಧಿಕಾರಿಗಳ ವಿರುದ್ಧ ಗರಂ ಆದ ಸಿದ್ದರಾಮಯ್ಯ

ಸಾರಾಂಶ

ಬಾದಾಮಿಯಲ್ಲಿ ನೆರೆ ಪೀಡಿತ ಪ್ರದೇಶ ಭೇಟಿ ವೇಳೆ ಮಾಜಿ ಸಿಎಂ  ಸಿದ್ದರಾಮಯ್ಯ ಅಧಿಕಾರಿಗಳ ವಿರುದ್ಧ ಗರಂ| ತಾಲೂಕಿನ ನೋವಿನಕೊಪ್ಪ ಗ್ರಾಮದ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ್ರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ| ಹೀಗಾಗಿ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗರಂ|

ಬಾಗಲಕೋಟೆ[ಅ.23]:  ಸ್ವಕ್ಷೇತ್ರ ಬಾದಾಮಿಯಲ್ಲಿ ನೆರೆ ಪೀಡಿತ ಪ್ರದೇಶ ಭೇಟಿ ವೇಳೆ ಮಾಜಿ ಸಿಎಂ  ಸಿದ್ದರಾಮಯ್ಯ  ಅವರು ಅಧಿಕಾರಿಗಳ ವಿರುದ್ಧ ಫುಲ್ ಗರಂ ಆದ ಪ್ರಸಂಗ ನಡೆದಿದೆ. ಹೌದು, ಸಿದ್ದರಾಮಯ್ಯ ಜಿಲ್ಲೆಯ ಬಾದಾಮಿ ತಾಲೂಕಿನ ನೋವಿನಕೊಪ್ಪ ಗ್ರಾಮದ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿದ್ರೂ ಅಧಿಕಾರಿಗಳು ಮಾತ್ರ ಸ್ಥಳಕ್ಕೆ ಬಂದಿಲ್ಲ, ಹೀಗಾಗಿ ಸ್ಥಳಕ್ಕೆ ಬಾರದ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು.

ಈ ವೇಳೆ ಸಿಟ್ಟಾದ ಸಿದ್ದರಾಮಯ್ಯ ಅವರು ಅಧಿಕಾರಿಗಳೇನು ಕತ್ತೆ ಕಾಯ್ತಿದಾರಾ, ಏಯ್ ಎಲ್ಲಿದ್ದಾರಯ್ಯ  ಅಧಿಕಾರಿಗಳು ಎಂದ ರೇಗಾಡಿದ್ದಾರೆ.  ಸಂತ್ರಸ್ತರು ಸಿದ್ದರಾಮಯ್ಯ ಅವರ ಬಳಿ ಸಮಸ್ಯೆಗಳನ್ನು  ಹೇಳಿಕೊಂಡಾಗ ಸ್ಥಳದಲ್ಲಿ ಅಧಿಕಾರಿಗಳು ಇರಲಿಲ್ಲ ಹೀಗಾಗಿ ಸಿದ್ದರಾಮಯ್ಯ ಬಹಳ ಕೆಂಡಾಮಂಡಲರಾಗಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆಮೇಲೆ ಬಂದ  ತಹಶೀಲ್ದಾರ್ (ಗ್ರೇಡ್ 2 ) ವಸ್ತ್ರದ ಅವರು ವಿರುದ್ಧ ಸಿದ್ದರಾಮಯ್ಯ ಫುಲ್ ಗರಂ ಆಗಿ ಇಷ್ಟೊತ್ತು ಏನ್ಮಾಡಿತ್ತಿದ್ದಿ, ನನಗಿಂತ ಮುಂಚೆ ಬಂದು ಇಲ್ಲಿ ಇರಬೇಕಾ ಬೇಡಾ  ಎಂದು ವಸ್ತ್ರದ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.  ಈ ವೇಳೆ ಪ್ರತಿಕ್ರಿಯೆ ನೀಡಿದ ತಹಶೀಲ್ದಾರ್ ರಸ್ತೆ ಬಂದಾಗಿತ್ತು ಅದನ್ನು ಕ್ಲಿಯರ್ ಮಾಡಿಸೋಕೆ ಹೋಗಿದ್ದೇ ಅಂತ ಹೇಳಿದ್ದಾರೆ. ಮಲಪ್ರಭಾ ನದಿ ಪ್ರವಾಹಕ್ಕೆ ಕೊಚ್ಚಿ ಹೋದ ಗೋವನಕೊಪ್ಪ ಸೇತುವೆಯನ್ನು  ಸಿದ್ದರಾಮಯ್ಯ ವೀಕ್ಷಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು,  ರಸ್ತೆ ಕಾಮಗಾರಿ ಶೀಘ್ರವೇ ಮುಗಿಸ್ಬೇಕು. ಈ ಸಂಬಂಧ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರ ಜೊತೆಗೆ ಮಾತನಾಡ್ತೇನೆ ಎಂದು ಹೇಳಿದ್ದಾರೆ. ಇನ್ನು ಗೋವನಕೊಪ್ಪ ಸಂತ್ರಸ್ತರ ಸಮಸ್ಯೆ ಆಲಿಸೋವಾಗ ಸಿದ್ದರಾಮಯ್ಯ ಎಸ್ ಕೆ ಗ್ರಾಪಂ ಪಿಡಿಓ ಆಲೂರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.  ಚೇರ್ಮನ್ ಹೇಳಿದ್ರೂ ಕೇಳಬೇಡಾ. ಜನರ ಸಮಸ್ಯೆಗೆ ಸ್ಪಂದಿಸಿ, ಜನರ ಕೆಲಸ ಮಾಡಿಕೊಡು. ಇಲ್ಲವಾದ್ರೆ ಸಸ್ಪೆಂಡ್ ಆಗ್ತೀಯಾ ನೋಡು ಎಂದ ಹೇಳಿದ್ದಾರೆ. 
 

PREV
click me!

Recommended Stories

ಬರೋಬ್ಬರಿ 12 ದಿನವಾದ್ರೂ ಹಿಪ್ಪರಗಿ ಬ್ಯಾರೇಜ್ ದುರಸ್ಥಿಗೆ ಹರಸಾಹಸ, ನೀರು ಸೋರಿಕೆಯಾಗಿ ಅರ್ಧದಷ್ಟು ಪೋಲು!
ಕಬ್ಬು ಕಟಾವು ಕಾರ್ಮಿಕರ ಟ್ರ್ಯಾಕ್ಟರ್ ಅಪಘಾತ; ಇಂದು ಅಕ್ಕ-ತಮ್ಮ ಸಾವು, ಮೃತರ ಸಂಖ್ಯೆ 5ಕ್ಕೆ ಏರಿಕೆ!