ಮಲಪ್ರಭೆ ಉಕ್ಕೇರಿ ಮುಳುಗುತ್ತಿರುವ ಐತಿಹಾಸಿಕ ಪಟ್ಟದಕಲ್ಲು ಗ್ರಾಮ

By Web DeskFirst Published Oct 22, 2019, 12:14 PM IST
Highlights

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮತ್ತೆ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ನೆರೆಯಿಂದ ಊರು ಬಿಡುವ ಪರಿಸ್ಥಿತಿಯೂ ಕೂಡ ಎದುರಾಗಿದೆ. 

ಬಾಗಲಕೋಟೆ (ಅ.22): ರಾಜ್ಯದಲ್ಲಿ ಭಾರೀ ಪ್ರಮಾಣದಲ್ಲಿ ಚಿತ್ತಿ ಮಳೆಯು ಅಬ್ಬರಿಸುತ್ತಿದೆ. ಮತ್ತೆ ಉತ್ತರದ ಜಿಲ್ಲೆಗಳು ಮಳೆಯಿಂದ ತತ್ತರಿಸುತ್ತಿವೆ. 

ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕು ಹರಿಯುತ್ತಿದ್ದು,  ಐತಿಹಾಸಿಕ ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ಗ್ರಾಮ ದ್ವೀಪವಾಗಿದೆ. ಮಲಪ್ರಭಾ ನದಿಯಲ್ಲಿ ಪ್ರವಾ ಹೆಚ್ಚಾಗಿ ಗ್ರಾಮ ನಡುಗಡ್ಡೆಯಾಗಿದೆ. 

ಪಟ್ಟದಕಲ್ಲು ಗ್ರಾಮವು ಸಂಪೂರ್ಣ ಮುಳುಗುವ ಭೀತಿಯಲ್ಲಿದ್ದು, ಇದರಿಂದ ಜನರು ಸರಕು, ಪ್ರಾಣಿಗಳೊಂದಿಗೆ ಗ್ರಾಮವನ್ನು ತೊರೆಯುತ್ತಿದ್ದಾರೆ.  ಸುರಕ್ಷಿತ ಪ್ರದೇಶಗಳತ್ತ ತೆರಳುತ್ತಿದ್ದಾರೆ. ಇದರಿಂದ ಸಂಪೂರ್ಣ ಗ್ರಾಮವೇ ಖಾಲಿ ಖಾಲಿಯಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಎರಡು ತಿಂಗಳ ಹಿಂದಷ್ಟೇ ಪ್ರವಾಹದಿಂದ ತತ್ತರಿಸಿದ್ದ ಜನರು ಇದೀಗ ಮತ್ತೆ ಬೀದಿಗೆ ಬೀಳುವಂತಾಗಿದೆ. ಎತ್ತರದ ಪ್ರದೇಶಗಳತ್ತ ತೆರಳುತ್ತಿದ್ದು ಸಂಕಷ್ಟಕ್ಕೆ ತುತ್ತಾಗಿದ್ದಾರೆ.

click me!