ಸರ್ಕಾರಿ ಆದೇಶ ಪಾಲಿಸ್ತೀರಾ ಇಲ್ಲ ಮನೆಗೆ ಹೋಗ್ತಿರಾ : ಸೋಮಣ್ಣ ವಾರ್ನಿಂಗ್

By Kannadaprabha News  |  First Published Nov 7, 2019, 10:11 AM IST

ವಸತಿ ಸಚಿವ ಸೋಮಣ್ಣ ಅವರು ಸರ್ಕಾರಿ ಅಧಿಕಾರಿಗೆ ವಾರ್ನಿಂಗ್ ನೀಡಿದ ಘಟನೆ ನಡೆದಿದೆ. ಟಿಪ್ಪು ಜಯಂತಿ ವಿಚಾರವಾಗಿ ಖಡಕ್ ಸೂಚನೆ ನೀಡಿದ್ದಾರೆ. 


ಬಾಗಲಕೋಟೆ (ನ.07): ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಂಬಂಧ ಮೈಸೂರಿನ ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ವಸತಿ ಸಚಿವ ವಿ.ಸೋಮಣ್ಣ ಫೋನ್ ನಲ್ಲೇ ಗರಂ ಆದ ಪ್ರಸಂಗ ಬುಧವಾರ ನಡೆದಿದೆ. 

ಬಾಗಲಕೋಟೆಯ ತೋಟಗಾರಿಕೆ ವಿವಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಸಚಿವ ಸೋಮಣ್ಣ ಪಾಲ್ಗೊಂಡಿದ್ದರು. ಈ ವೇಳೆ ಮೈಸೂರಿನಿಂದ ಅಧಿಕಾರಿಯೊಬ್ಬರಿಂದ ಬಂದ ಕರೆಯನ್ನು ಸ್ವೀಕರಿಸಿದ ಸೋಮಣ್ಣ ನೋಡನೋಡುತ್ತಲೇ ಗರಂ ಆದರು. 

Tap to resize

Latest Videos

ಟಿಪ್ಪು ಜಯಂತಿ ಆಚರಣೆಯ ವಿಷಯದಲ್ಲಿ ಸರ್ಕಾರದ ಆದೇಶ ಏನಿದೆಯೋ ಅದನ್ನು ಪಾಲಿಸಿ ಎಂದು ಎಚ್ಚರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಗಾಗಲೇ ಟಿಪ್ಪು ಜಯಂತಿ ಆಚರಣೆ ವಿಚಾರವಾಗಿ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಸರ್ಕಾರದಿಂದ ರದ್ದು ಮಾಡಲಾಗಿದೆ. ಇನ್ನು ಕರ್ನಾಟಕ ಹೈ ಕೋರ್ಟ್ ಸಹ ಟಿಪ್ಪು ಜಯಂತಿ ಆಚರಣೆ ನಿಷೇಧಕ್ಕೂ ಯಾವುದೇ ತಡೆ ಇಲ್ಲ ಎಂದಿದೆ. 

click me!