ಬಾಗಲಕೋಟೆ ವಿವಿ ಅಕ್ರಮ ನೇಮಕಾತಿ: ಕಾರಜೋಳ ಅಸಮಾಧಾನ

By Web Desk  |  First Published Nov 6, 2019, 3:52 PM IST

ತೋಟಗಾರಿಕೆ ವಿವಿಯಲ್ಲಿ ನಡೆದ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಅವ್ಯವಹಾರಕ್ಕೆ ಕಾರಜೋಳ ಗರಂ|ತೋಟಗಾರಿಕೆ ಸಚಿವ ವಿ. ಸೋಮಣ್ಣ ಎದುರೇ ಅಸಮಾಧಾನ ತೋಪ೯ಡಿಸಿದ ಕಾರಜೋಳ|ಸಿಕ್ಕಿಂ ಬೋಗಸ್ ವಿವಿಯ ಸರ್ಟಿಫಿಕೇಟ್ ಪಡೆದು ತೋಟಗಾರಿಕೆ ವಿವಿಯಲ್ಲಿ ನೇಮಕ| ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದಕ್ಕೂ ಫುಲ್ ಗರಂ ಆದ ಸಚಿವರು|


ಬಾಗಲಕೋಟೆ[ನ.6]: ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದಲ್ಲಿ ನಡೆದ ನೇಮಕಾತಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅಸಮಾಧಾನಗೊಂಡಿದ್ದಾರೆ. 

ಬುಧವಾರ ನಡೆದ ನಗರದ ತೋಟಗಾರಿಕೆ ವಿವಿಯಲ್ಲಿ ನಡೆದ ಸಭೆಯಲ್ಲಿ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಯಲ್ಲಿ ನಡೆದ ಅವ್ಯವಹಾರಕ್ಕೆ ಡಿಸಿಎಂ ಕಾರಜೋಳ ಅವರು ಫುಲ್ ಗರಂ ಆಗಿದ್ದಾರೆ. ತೋಟಗಾರಿಕೆ ಸಚಿವ ವಿ. ಸೋಮಣ್ಣ ಎದುರೇ ಅಸಮಾಧಾನ ತೋಪ೯ಡಿಸಿದ ಕಾರಜೋಳ ಅವರು ಸಿಕ್ಕಿಂ ಬೋಗಸ್ ವಿವಿಯ ಸರ್ಟಿಫಿಕೇಟ್ ಪಡೆದು ತೋಟಗಾರಿಕೆ ವಿವಿಯಲ್ಲಿ ನೇಮಕವಾಗಿದ್ದಾರೆ. ದಾಖಲಾತಿ ಸಮೇತ ಹಿಂದೆ ಸಿದ್ದರಾಮಯ್ಯಗೆ ತನಿಖೆ ಮಾಡಿ ಎಂದು ದೂರು ನೀಡಿದ್ದೆ. ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದಕ್ಕೂ ಫುಲ್ ಗರಂ ಆಗಿದ್ದಾರೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತೋಟಗಾರಿಕೆ ವಿಶ್ವವಿದ್ಯಾಲಯ ಆರಂಭಿಸಲು ಸ್ಥಳಿಯ ರೈತರು ಹೊಲ-ಮಠ ಕಳೆದುಕೊಂಡಿದ್ದರು. ವಿವಿ ಮಂಜೂರಾತಿ ತಂದು ಹೊರಗಿನವರನ್ನು ತಂದು ಸ್ಥಳೀಯರಿಗೆ ಉದ್ಯೋಗ ಕೊಡದಿದ್ರೆ ವಿವಿ ತಗೊಂಡು ಏನು ಮಾಡೋದು ಎಂದು ಹೇಳಿದ್ದಾರೆ. ಈ ಮಧ್ಯೆ ಪ್ರವೇಶಿಸಿ ಮಾತನಾಡಿದ ಸಚಿವ ವಿ. ಸೋಮಣ್ಣ ಅವರು, ಎಲ್ಲವನ್ನು ಸರಿಪಡಿಸೋಣ ಎಂದು ಭರವಸೆ ನೀಡಿದರು. ಆಯ್ತು ಕಸಗೂಡಿಸೋರು, ಜವಾನ ಹುದ್ದೆನೂ ಹೊರಗಿನವರಿಗೆ ಕೊಟ್ಟಿದ್ದಾರೆ. ಎಲ್ಲ ಹುದ್ದೆಯೂ ಹೊರಗಿನವರಿಗೆ ಕೊಟ್ರೆ ವಿವಿ ಯಾಕೆ ಬೇಕು ಎಂದು ಗೋವಿಂದ ಕಾರಜೋಳ ಅವರು ಹೇಳಿದ್ದಾರೆ. 
 

click me!