ಕಮತಗಿ: ಅಧಿಕಾರಿ ಮೇಲೆ ಡಿಸಿಎಂ ಗೋವಿಂದ ಕಾರಜೋಳ ಫುಲ್ ಗರಂ!

By Web Desk  |  First Published Nov 6, 2019, 1:09 PM IST

ಮನೆ ಹಾನಿ ಗುರುತಿಸುವಲ್ಲಿ ವಿಫಲ| ಅಧಿಕಾರಿ ಮೇಲೆ ಗರಂ ಆದ ಗೋವಿಂದ ಕಾರಜೋಳ|ಹುನಗುಂದ ತಾಲೂಕಿನ ಕಮತಗಿ ಪಟ್ಟಣಕ್ಕೆ ಭೇಟಿ ನೀಡಿದ್ದ ಕಾರಜೋಳ| ಪ್ರವಾಹದಲ್ಲಿ ಹಾನಿಯಾದ ಮನೆ ಎ ಕೆಟಗೆರಿಗೆ ಸೇರಿಸಿ ಪರಿಹಾರ ನೀಡುವಂತೆ ಅಧಿಕಾರಿಗೆ ಖಡಕ್ ಸೂಚನೆ|


ಬಾಗಲಕೋಟೆ[ನ.6]: ಮನೆ ಹಾನಿ ಗುರುತಿಸುವಲ್ಲಿ ವಿಫಲ ಹಿನ್ನೆಲೆ ಡಿಸಿಎಂ ಗೋವಿಂದ ಕಾರಜೋಳ ಅವರು ಅಧಿಕಾರಿ ವಿರುದ್ಧ ಗರಂ ಆದ ಪ್ರಸಂಗ ಬುಧವಾರ ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಪಟ್ಟಣದಲ್ಲಿ ಬುಧವಾರ ನಡೆದಿದೆ. 

ಇಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಲ ಅವರು ಮಲಪ್ರಭಾ ನದಿ ಪ್ರವಾಹ ಪೀಡಿತ ಕಮತಗಿ ಪಟ್ಟಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಧಿಕಾರಿ ಬಿ.ಟಿ.ಬಂಡಿವಡ್ಡರ ಮೇಲೆ ಗರಂ ಆದ ಗೋವಿಂದ ಕಾರಜೋಳ ಕಾಮನ್ ಸೆನ್ಸ್ ಇಲ್ಲವಾ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರವಾಹದಲ್ಲಿ ಹಾನಿಯಾದ ಮನೆ ಎ ಕೆಟಗೆರಿಗೆ ಸೇರಿಸಿ ಪರಿಹಾರ ನೀಡುವಂತೆ ಅಧಿಕಾರಿಗೆ ಖಡಕ್ ಸೂಚನೆ ನೀಡಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ ಮೂರು ತಿಂಗಳ ಹಿಂದೆ ಎದುರಾಗಿದ್ದ ಭೀಕರ ಪ್ರವಾಹದಲ್ಲಿ ಕಮತಗಿ ಪಟ್ಟಣ ಭಾಗಶಃ ಮುಳುಗಡೆಯಾಗಿತ್ತು. ಈ ನೆರೆಯಲ್ಲಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ತಮ್ಮ ಮನೆ, ಜಮೀನುಗಳನ್ನು ಕಲೆದುಕೊಂಡು ನಿರಾಶ್ರಿತರತಾಗಿದ್ದರು. 

click me!