ಸವಿ ಸವಿ ನೆನಪು: 16 ವರ್ಷಗಳ ನಂತರ ಒಂದಾದ ಗುರು-ಶಿಷ್ಯರು!

By Web DeskFirst Published Oct 12, 2019, 5:57 PM IST
Highlights

16 ವರ್ಷಗಳ ಬಳಿಕ ಮತ್ತೆ ಒಂದಾದ ಗುರು-ಶಿಷ್ಯರು| ಮಧುರ ಕ್ಷಣಕ್ಕೆ ಸಾಕ್ಷಿಯಾದ ಸವಿಸವಿ ನೆನಪು ಕಾರ್ಯಕ್ರಮ| ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಗುರು-ಶಿಷ್ಯರ ಸಂಗಮ| ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಅಪರೂಪದ ಮಿಲನ| ಹಳೆಯ ನೆನಪುಗಳನ್ನು ಹಂಚಿಕೊಂಡ ಸ್ನೇಹಿತರು|

ಮಲ್ಲಿಕಾರ್ಜುನ ಹೊಸಮನಿ

ಹುನಗುಂದ(ಅ.12): ಅವರೆಲ್ಲಾ ಅಂದು ತುಂಟಾಟ ಆಡ್ತಿದ್ದ ಶಾಲಾ ಮಕ್ಕಳು, ಅದರಲ್ಲಿ ಕೆಲವರು ಓದಿನಲ್ಲಿ ಜಾಣರಿದ್ರೆ, ಇನ್ನೂ ಕೆಲವರು ಕಲಿಕೆಯಲ್ಲಿ ಹಿಂದುಳಿದ ಮೇಷ್ಟ್ರು ಕೈಯಲ್ಲಿ ಬೈಗುಳ ತಿಂದವರು. ಆದರೆ ಇವತ್ತು ಅವರೆಲ್ಲಾ ಒಂದಿಲ್ಲೊಂದು ಹುದ್ದೆಯಲ್ಲಿದ್ದು, ಜೀವನದ ಜವಾಬ್ದಾರಿ ಹೊತ್ತವರಾಗಿದ್ದಾರೆ.

ಆ ಸ್ನೇಹಿತರಲ್ಲಿ ಕೆಲವರು ದೇಶ ರಕ್ಷಣೆ ಮಾಡುವ ಸೈನಿಕರಾಗಿದ್ದರೆ, ಇನ್ನೂ ಕೆಲವರು ದೇಶದ ಮೂಲೆ ಮೂಲೆಯಲ್ಲಿ ವಿವಿಧ ಕ್ವೇತ್ರಗಳಲ್ಲಿ ದುಡಿಯುತ್ತಿದ್ದಾರೆ.

"

ಇವರೆಲ್ಲಾ 16 ವರ್ಷಗಳ ಬಳಿಕ ಒಂದೆಡೆ ಸೇರಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಮರು ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ವಿಜಯ ಮಹಾಂತೇಶ ಪ್ರೌಢಶಾಲೆಯ 2002-03ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಗುರುವಂದನಾ ಹಾಗೂ ಸ್ನೇಹ ಸಮ್ಮಿಲನದ  ಈ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ಸ್ನೇಹಿತರೆಲ್ಲಾ ಇಂದು ಒಂದೆಡೆ ಸೇರುವ ಮೂಲಕ ಹಳೆಯ ನೆನೆಪುಗಳನ್ನ ಮೆಲುಕು ಹಾಕಿದರು. 

"

ಒಟ್ಟಿನಲ್ಲಿ 16 ವರ್ಷಗಳ ಬಳಿಕ ತಮ್ಮ ಶಾಲಾ ದಿನಗಳ ಸವಿಸವಿ ನೆನಪನ್ನು ಸವಿದ ವಿದ್ಯಾರ್ಥಿಗಳು ಗುರುವಂದನಾ ಹಾಗೂ ಸ್ನೇಹಸಮ್ಮಿಲನದ ಹೆಸರಿನಲ್ಲಿ ಸಮಾವೇಶ ಮಾಡಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡು ತಮ್ಗೆ ಕಲಿಸಿ ಗುರುಗಳಿಗೆ ಗುರುವಂದನೆ ಸಲ್ಲಿಸಿದ್ದು ನಿಜಕ್ಕೂ ಅಭಿನಂದನೀಯ.

click me!