ಐಹೊಳೆ ಸ್ಥಳಾಂತರಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದ ಯುವಕ!

By Web DeskFirst Published Oct 12, 2019, 5:55 PM IST
Highlights

ಐಹೊಳೆ ಸ್ಥಳಾಂತರಕ್ಕಾಗಿ ಪ್ರಧಾನಿ ಮೋದಿ ಮದ್ಯಸ್ಥಿಕೆಗೆ ಆಗ್ರಹ| ಪ್ರಧಾನಿ ಮೋದಿಗೆ ಪತ್ರ ಬರೆದ ಯುವಕ ಪ್ರಕಾಶ್| ಬಾಗಲಕೋಟೆ ಜಿಲ್ಲೆಯ ಸೂಳೇಭಾವಿ ಗ್ರಾಮದ ಯುವಕ ಪ್ರಕಾಶ್ ಕಡೂರ| 125ಕ್ಕೂ ಅಧಿಕ ದೇಗುಲಗಳಿರುವ ಐಹೊಳೆ ಗ್ರಾಮ ಸ್ಥಳಾಂತರಕ್ಕೆ ಆಗ್ರಹ| ಗ್ರಾಮಸ್ಥರ ಮತ್ತು ಸರ್ಕಾರದ ಮದ್ಯೆ ಸಮನ್ವಯ ಕೊರತೆ ಹಿನ್ನೆಲೆ| ಮಧ್ಯಸ್ಥಿಕೆ ವಹಿಸುವಂತೆ ಮೋದಿಗೆ ಮನವಿ ಮಾಡಿದ ಯುವಕ ಪ್ರಕಾಶ್|  

ಮಲ್ಲಿಕಾರ್ಜುನ ಹೊಸಮನಿ

ಐಹೊಳೆ(ಅ.12): ಚಾಲುಕ್ಯರ ವಾಸ್ತುಶಿಲ್ಪದ ನೆಲೆವೀಡಾಗಿರುವ ಐತಿಹಾಸಿಕ ಐಹೊಳೆ ಗ್ರಾಮ ಸ್ಥಳಾಂತರಕ್ಕಾಗಿ ಮದ್ಯಸ್ಥಿಕೆ ವಹಿಸುವಂತೆ ಆಗ್ರಹಿಸಿ ಯುವಕನೋರ್ವ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾನೆ. 

ಬಾಗಲಕೋಟೆ ಜಿಲ್ಲೆಯ ಸೂಳೇಭಾವಿ ಗ್ರಾಮದ ಯುವ ಪ್ರಕಾಶ್ ಕಡೂರ ಮೋದಿಗೆ ಪತ್ರ ಬರೆದಿದ್ದು,  ಐಹೊಳೆಯು ಬಾದಾಮಿ ಚಾಲುಕ್ಯರ ಕಾಲದ 125ಕ್ಕೂ ಅಧಿಕ ದೇಗುಲಗಳನ್ನು ಒಳಗೊಂಡಿದ್ದು ಇದರ ಸ್ಥಳಾಂತರ ಅತ್ಯವಶ್ಯಕ ಎಂದು ಆಗ್ರಹಿಸಿದ್ದಾನೆ.

ಇಲ್ಲಿ ನೆಲೆಸಿರುವ ನೂರಾರು ಕುಟುಂಬಗಳ ಜೊತೆಗೆ ಐತಿಹಾಸಿಕ ದೇಗುಲಗಳು  ಪ್ರವಾಹದ ಸಮಸ್ಯೆ ಎದುರಿಸುತ್ತಿದ್ದು, ನಗರವನ್ನು ಸಂಪೂರ್ಣವಾಗಿ ಸ್ಥಳಾಂತರಿಸುವಂತೆ ಪ್ರಕಾಶ್ ಮನವಿ ಮಾಡಿದ್ದಾನೆ.

"

ಸದ್ಯ ಐಹೊಳೆ ಪುರಾತತ್ವ ಇಲಾಖೆಯ ಅಧೀನದಲ್ಲಿದ್ದು ಇಲ್ಲಿ ಹೊಸ ಮನೆಗಳನ್ನು ಕಟ್ಟುವ ಅಥವಾ ಹಳೆ ಮನೆಗಳನ್ನು ಒಡೆಯುವ ಹಾಗಿಲ್ಲ. ಹೀಗಾಗಿ ಇಲ್ಲಿನ ಕುಟುಂಬಗಳು ಪ್ರವಾಹದ ಬಳಿಕ ತೊಂದರೆ ಅನುಭಸುತ್ತಿವೆ. 

ಸ್ಥಳಾಂತರ ವಿಷಯದಲ್ಲಿ ಸರ್ಕಾರ ಮತ್ತು ಗ್ರಾಮಸ್ಥರ ಮದ್ಯೆ ಸಮನ್ವಯದ ಕೊರತೆ ಇದ್ದು, ಸಸ್ಯೆ ಬಗೆಹರಿಯುತ್ತಿಲ್ಲ ಎಂದು ಪ್ರಕಾಶ್ ಅಲವತ್ತುಕೊಂಡಿದ್ದಾನೆ. 

ಕೂಡಲೇ ಪ್ರಧಾನಿ ಮೋದಿ ಮದ್ಯಸ್ಥಿಕೆವಹಿಸಿ ಐಹೊಳೆ ಸ್ಥಳಾಂತರ ಕಾರ್ಯಕ್ಕೆ ಚಾಲನೆ ನೀಡಬೇಕು ಎಂದು ಪ್ರಕಾಶ್ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾನೆ. 

click me!