ಬಾಗಲಕೋಟೆ ಜಿಲ್ಲೆಯ ಪ್ರತಿ ತಾಲೂಕಿಗೊಂದು ಡಿಜಿಟಲ್‌ ಗ್ರಂಥಾಲಯ

By Web Desk  |  First Published Oct 11, 2019, 12:22 PM IST

ಜಿಲ್ಲಾ ಕೇಂದ್ರದಲ್ಲಿ 2 ಹಾಗೂ ತಾಲೂಕು ಕೇಂದ್ರದಲ್ಲಿ ತಲಾ ಒಂದರಂತೆ ಡಿಜಿಟಲ್‌ ಗ್ರಂಥಾಲಯ| ಜಮಖಂಡಿಯಲ್ಲಿ ಹೈಟೆಕ್‌ ಗ್ರಂಥಾಲಯ ಕಟ್ಟಡ ನಿರ್ಮಿಸಲು ಸ್ಥಳೀಯ ಜನಪ್ರತಿನಿ​ಧಿಗಳು ಅನುದಾನ ನೀಡಿದ್ದಾರೆ| ಕಟ್ಟಡ ನಿರ್ಮಾಣ ಶೀಘ್ರವೇ ಆರಂಭಗೊಳ್ಳಲಿದೆ| ಭೀಕರ ಪ್ರವಾಹದಿಂದ ಜಿಲ್ಲೆಯ 17 ಗ್ರಂಥಾಲಯಗಳಿಗೆ ಹಾನಿ| ಎನ್‌ಡಿಆರ್‌ಎಫ್‌ನಲ್ಲಿ ಮುಧೋಳ ತಾಲೂಕಿನ ಯಡಹಳ್ಳಿ ಶಾಖಾ ಗ್ರಂಥಾಲಯ ಒಂದನೇ ಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಅಂದಾಜು ಪಟ್ಟಿ ತಯಾರಿಸಲಾಗಿದೆ| 


ಬಾಗಲಕೋಟೆ(ಅ.11): ಜಿಲ್ಲಾ ಕೇಂದ್ರದಲ್ಲಿ 2 ಹಾಗೂ ತಾಲೂಕು ಕೇಂದ್ರದಲ್ಲಿ ತಲಾ ಒಂದರಂತೆ ಡಿಜಿಟಲ್‌ ಗ್ರಂಥಾಲಯವನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವಂತೆ ಜಿಲಾಧ್ಲಿ​ಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಜಿಲ್ಲಾಧಿ​ಕಾರಿಗಳ ಸಭಾಂಗಣದಲ್ಲಿ ಗುರುವಾರ ಜರುಗಿದ ಗ್ರಂಥಾಲಯ ಪ್ರಾ​ಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಜಮಖಂಡಿಯಲ್ಲಿ ಹೈಟೆಕ್‌ ಗ್ರಂಥಾಲಯ ಕಟ್ಟಡ ನಿರ್ಮಿಸಲು ಸ್ಥಳೀಯ ಜನಪ್ರತಿನಿ​ಧಿಗಳು ಅನುದಾನ ನೀಡಿದ್ದಾರೆ. ಈ ಕುರಿತು ಕಟ್ಟಡ ನಿರ್ಮಿಸಲು ಜಮಖಂಡಿ ಉಪವಿಭಾಗಾಧಿ​ಕಾರಿಗಳಿಗೆ ಪರಿಶೀಲನೆಗೆ ಸೂಚಿಸಲಾಗುತ್ತಿದ್ದು, ಕಟ್ಟಡ ನಿರ್ಮಾಣ ಶೀಘ್ರವೇ ಆರಂಭಗೊಳಿಸಲು ಸೂಚಿಸಿದರು.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೆರೂರ ಶಾಖಾ ಗ್ರಂಥಾಲಯಗಳ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ಸದರಿ ಕಟ್ಟಡವನ್ನು ಸಂಪೂರ್ಣ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮತಿಗಾಗಿ ಸಭೆಯಲ್ಲಿ ಮಂಡಿಸಿದಾಗ ಈ ಕುರಿತು ಮೂಲ ದಾಖಲಾತಿ ಪರಿಶೀಲಿಸಿ ಅನುದಾನ ಬಂದ ನಂತರ ಕ್ರಮವಹಿಸುವುದಾಗಿ ತಿಳಿಸಿದರು. ಬಂದಂತಹ ಅನುದಾನವನ್ನು ಸದುಪಯೋಗವಾಗುವಂತೆ ಮಾಡಬೇಕು. ಪ್ರತಿಯೊಂದು ಗ್ರಂಥಾಲಯಗಳಲ್ಲಿ ಐ.ಎ.ಎಸ್‌, ಕೆ.ಎ.ಎಸ್‌, ಬ್ಯಾಂಕ್‌, ಸ್ಪರ್ಧಾತ್ಮಕ ಪರೀಕ್ಷೆಗಳ ಹೆಚ್ಚು ಪುಸ್ತಕಗಳನ್ನು ಖರೀದಿಸಲು ತಿಳಿಸಿದರು.

ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹದಿಂದ 17 ಗ್ರಂಥಾಲಯಗಳು ಹಾನಿಗೊಳಗಾಗಿದ್ದು, ಎನ್‌ಡಿಆರ್‌ಎಫ್‌ನಲ್ಲಿ ಅವಕಾಶವಿದ್ದಲ್ಲಿ ಪರಿಹಾರಕ್ಕಾಗಿ ಕ್ರಮಕೈಗೊಳ್ಳಲಾಗುವುದು. ಮುಧೋಳ ತಾಲೂಕಿನ ಯಡಹಳ್ಳಿ ಶಾಖಾ ಗ್ರಂಥಾಲಯ ಒಂದನೇ ಮಹಡಿ ಕಟ್ಟಡ ನಿರ್ಮಾಣಕ್ಕಾಗಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಈ ಕುರಿತು ಕೇಂದ್ರ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಜಿಲ್ಲಾ ಗ್ರಂಥಾಲಯ ಪ್ರಾ​ಧಿಕಾರ ನಿ​ಧಿಯಿಂದ ಭರಿಸಲು ಅನುಮತಿ ನೀಡಿರಿವುದಾಗಿ ಸಭೆಗೆ ತಿಳಿಸಲಾಯಿತು.

ಇಳಕಲ್ಲ ಮತ್ತು ರಬಕವಿ ಮತ್ತು ಬನಹಟ್ಟಿಯಲ್ಲಿ ಶಾಖಾ ಗ್ರಂಥಾಲಯಕ್ಕೆ ಸೂಕ್ತ ನಿವೇಶನ ಕುರಿತು ನಗರಸಭೆ ಪೌರಾಯುಕ್ತರು ಹಾಗೂ ನಗರಸಭೆಯ ಜನಪ್ರತಿನಿಧಿ​ಗಳೊಂದಿಗೆ ಚರ್ಚಿಸಲಾಗಿ ಕ್ರಮೈಗೊಳ್ಳುವುದಾಗಿ ತಿಳಿಸಿದ್ದಾರೆ. ಇಳಕಲ್ಲ ಗ್ರಂಥಾಲಯ ಕಟ್ಟಡ ಚಿಕ್ಕದಾಗಿದ್ದು, ಸದರಿ ಕಟ್ಟಡ ಕಾಂಪೌಂಡ್‌ ಆವರಣ ಸೇರಿದಂತೆ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮತಿಗಾಗಿ ನಗರಸಭೆ ಪೌರಾಯುಕ್ತರಲ್ಲಿ ಕೋರಲಾಗಿದೆ ಎಂದು ಸಭೆಗೆ ತಿಳಿಸಲಾಯಿತು. ಗ್ರಂಥಾಲಯಕ್ಕೆ ಮುಖ್ಯವಾಗಿ ಕಟ್ಟಡ ಹಾಗೂ ಪುಸ್ತಕಗಳಿಗೆ ಹೆಚ್ಚು ಒತ್ತು ನೀಡಲು ಜಿಲ್ಲಾ​ಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಪ್ರೊಬೇಷನರಿ ಐ.ಎ.ಎಸ್‌ ಅ​ಧಿಕಾರಿ ಗರಿಮಾ ಪನ್ವಾರ, ಗ್ರಂಥಾಲಯ ಪ್ರಾ​ಧಿಕಾರದ ಸದಸ್ಯರಾದ ಸಿದ್ದಲಿಂಗಪ್ಪ ಗುಳೇದ, ಯಶವಂತ ವಾಜಂತ್ರಿ, ಯಲ್ಲಪ್ಪ ಕೆಂಚನಗೌಡ, ಪಿ.ಎಸ್‌.ದಾಸರ, ಬಿ.ಎನ್‌.ಯಾವಗಲ್‌ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

click me!