ಸಂತ್ರಸ್ತರು ಭಿಕ್ಷುಕರಲ್ಲ: ಕೇಂದ್ರದ ವಿರುದ್ಧ ಮತ್ತೊಮ್ಮೆ ಗುಡುಗಿದ ಯತ್ನಾಳ್

By Web Desk  |  First Published Oct 27, 2019, 11:10 AM IST

ಮಹಾ, ಹರಾರ‍ಯಣ ಚುನಾವಣೆಯಲ್ಲಿ ಬಿಜೆಪಿ ಗುರಿ ತಲುಪಿಲ್ಲ|ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡದ್ದರಿಂದ ಬಿಜೆಪಿಗೆ ಹಿನ್ನಡೆ|ಬಿಜೆಪಿಯ ಸಾಂಪ್ರದಾಯಿಕ ಮತಗಳಿಗೆ ತೀವ್ರ ಧಕ್ಕೆ| ಸಂತ್ರಸ್ತರಿಗೆ ಸೂಕ್ತ ಪರಿಹಾರದ ವ್ಯವಸ್ಥೆ ಕಲ್ಪಿಸಬೇಕು|


ರಬಕವಿ-ಬನಹಟ್ಟಿ(ಅ.27): ನೆರೆ ಪರಿಹಾರ ವಿಚಾರವಾಗಿ ಸ್ವಪಕ್ಷೀಯ ಸಂಸದರ ವಿರುದ್ಧವೇ ಕಿಡಿಕಾರಿ ಶೋಕಾಸ್‌ ನೋಟಿಸ್‌ ಪಡೆದಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಮಹಾರಾಷ್ಟ್ರ ಹಾಗೂ ಹರ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ನಿರೀಕ್ಷಿತ ಗುರಿ ತಲುಪುವಲ್ಲಿ ವಿಫಲವಾಗಲೂ ಸೂಕ್ತ ಪರಿಹಾರ ನೀಡದೆ ಇರುವುದೇ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Tap to resize

Latest Videos

ಜಿಲ್ಲೆಯ ಬನಹಟ್ಟಿಯಲ್ಲಿ ಶನಿವಾರ ಸಿದ್ಧಸಿರಿ ಸೌಹಾರ್ದ ಸಂಘದ 115ನೇ ಶಾಖೆ ಉದ್ಘಾಟಿಸಿದ ಅವರು, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಪ್ರವಾಹ ಬಂದ ಸಂದರ್ಭದಲ್ಲಿ ಕೇಂದ್ರಕ್ಕೆ ಇಲ್ಲಿನ ಅನಾಹುತಗಳ ಬಗ್ಗೆ ಪತ್ರ ಕಳಿಸಿದ್ದೆ. ಆದಾಗ್ಯೂ ಪರಿಹಾರ ನೀಡದ ಕಾರಣ ತಪ್ಪು ಸಂದೇಶ ರವಾನೆಯಾಗಿದೆ ಎಂದು ಹೇಳಿದ್ದಾರೆ. 

ಸಂತ್ರಸ್ತರು ಭಿಕ್ಷುಕರಲ್ಲ:

ಪ್ರವಾಹಕ್ಕೆ ನಲುಗಿ ಹೋಗಿರುವ ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದ ಜನತೆ ಭಿಕ್ಷುಕರಲ್ಲ, ಸ್ಥಿತಿವಂತರಿದ್ದಾರೆ. ಸಂದರ್ಭಕ್ಕೆ ಅನಿವಾರ್ಯವಾಗಿ ಪ್ರವಾಹಕ್ಕೆ ತುತ್ತಾಗಿದ್ದಾರೆ. ಇದರಿಂದಾಗಿ ಅವರು ಆರ್ಥಿಕವಾಗಿ ಹಿಂಜರಿತ ಕಂಡಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರ ಕೇಂದ್ರದ ಸಚಿವರೊಬ್ಬರನ್ನು ಉಸ್ತುವಾರಿಯನ್ನಾಗಿ ನೇಮಿಸುವ ಮೂಲಕ ಸಂತ್ರಸ್ತರಿಗೆ ಸೂಕ್ತ ಪರಿಹಾರದ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿದರು.

ಸಾಂಪ್ರದಾಯಿಕ ಮತಗಳಿಗೆ ಧಕ್ಕೆ!

ಬಿಜೆಪಿಯ ಸಾಂಪ್ರದಾಯಿಕ ಮತಗಳಿಗೆ ತೀವ್ರ ಧಕ್ಕೆಯಾಗಿದೆ. ರಾಜ್ಯದಲ್ಲಿ ಲಿಂಗಾಯತ ಸೇರಿದಂತೆ ಪ್ರಬಲ ಸಾಂಪ್ರದಾಯಿಕ ಮತದಾರರು ಬಿಎಸ್‌ವೈ ಅವರನ್ನು ನಂಬಿದಂತೆ, ಮಹಾರಾಷ್ಟ್ರದಲ್ಲಿಯೂ ಮರಾಠಾ ಹಾಗೂ ಹರ್ಯಾಣದಲ್ಲಿ ಜಾಟ್‌ ಸಮುದಾಯವನ್ನೂ ಓಲೈಸುವಲ್ಲಿ ಸ್ವಲ್ಪ ವ್ಯತ್ಯಯ ಕಂಡಂತಾಗಿದೆ. ದೇಶ ಬಂದಾಗ ನರೇಂದ್ರ ಮೋದಿಯವರು, ರಾಜ್ಯ ಹಾಗೂ ಜಿಲ್ಲಾಮಟ್ಟದ ಚುನಾವಣೆ ಸಂದರ್ಭ ಆಯಾ ಪ್ರದೇಶದ ನಾಯಕರೇ ಮೂಲ ಕಾರಣರಾಗುತ್ತಾರೆ. ಸ್ಥಳೀಯ ನಾಯಕತ್ವದಿಂದಲೇ ಸ್ಥಳೀಯ ಚುನಾವಣೆಗಳು ನಡೆಯುತ್ತವೆ ಎನ್ನುವುದಕ್ಕೆ ಉಭಯ ರಾಜ್ಯಗಳು ಸಂದೇಶ ನೀಡಿವೆ ಎಂದು ತಿಳಿಸಿದರು.
 

click me!