ಮುಧೋಳ: ನಗರದಲ್ಲಿ ಕಳೆದ ಒಂಬತ್ತು ತಿಂಗಳಿಂದ ಶಾಂತಿಯುತ ಹೋರಾಟ ಮಾಡುತ್ತ ಬಂದಿದ್ದ ರನ್ನ ಕಾರ್ಖಾನೆಯ ನೌಕರರ ಪ್ರತಿಭಟನೆ ಶುಕ್ರವಾರ ದಿಢೀರ್ ಭುಗಿಲೆದ್ದಿದೆ. ಮಾತ್ರವಲ್ಲ, ಪ್ರತಿಭಟನೆ ನಡೆಸುತ್ತಿದ್ದ ಶಾಮಿಯಾನಕ್ಕೆ ಬೆಂಕಿ ಕೂಡ ಹಚ್ಚಿದ್ದು, ಎರಡು ಬಣಗಳ ನಡುವೆ ಕೈಕೈ ಮಿಲಾಯಿಸುವ ಹಂತ ಕೂಡ ತಲುಪಿತು. ಈ ವೇಳೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘುಲಾಠಿ ಪ್ರಹಾರ ಕೂಡ ನಡೆಸಿದರು.
ಬಾಗಲಕೋಟೆ (Bagalkote) ಜಿಲ್ಲೆಯ ಮುಧೋಳ (Mudhola) ತಾಲೂಕಿನ ತಿಮ್ಮಾಪೂರ (Thimmapur) ಸಮೀಪದ ರೈತರ (ರನ್ನ) ಸಹಕಾರ ಸಕ್ಕರೆ ಕಾರ್ಖಾನೆಯ ನೌಕರರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು, ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸಬೇಕು ಮತ್ತು ನೌಕರರ ಸಂಬಳ ಬಾಕಿಯನ್ನು ಪೂರ್ಣ ಪ್ರಮಾಣದಲ್ಲಿ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದ ಪ್ರಮುಖ ಬೀದಿಯಲ್ಲಿ ಕಾರ್ಖಾನೆ ಅಧ್ಯಕ್ಷರ ಭಾವಚಿತ್ರದ ಮೆರವಣಿಗೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕೆಲ ಪ್ರತಿಭಟನಾಕಾರರು ಅಧ್ಯಕ್ಷರಿಗೆ ಅವಮಾನವಾಗುವ ರೀತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿ ಆಡಳಿತ ಮಂಡಳಿ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ; ಬಿತ್ತನೆ ಬೀಜ ಪಡೆಯಲು ಬಂದ ರೈತರ ಮೇಲೆ ಲಘು ಲಾಠಿ ಪ್ರಹಾರ
ಪ್ರತಿಭಟನಾಕಾರರು ವಾಪಸ್ ವೇದಿಕೆಗೆ ಬಂದಾಗ ಆಡಳಿತ ಮಂಡಳಿ ಬೆಂಬಲಿಗರ ಜೊತೆ ವಾಗ್ವಾದ ನಡೆದಿದೆ. ಈ ವೇಳೆ ಆಡಳಿತ ಮಂಡಳಿಯ ಬೆಂಬಲಿಗರು ಪ್ರತಿಭಟನಾ ವೇದಿಕೆಯ ಶಾಮಿಯಾನಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಪರಿಸ್ಥಿತಿ ವಿಕೋಪಕ್ಕೆ ತಲುಪಿ ಎರಡೂ ಗುಂಪುಗಳು ಪರಸ್ಪರ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಮಾತ್ರವಲ್ಲ ಎರಡೂ ಗುಂಪಿನವರು ಪ್ರತ್ಯೇಕವಾಗಿ ರಸ್ತೆ ತಡೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ವಾಹನ ಆಗಮಿಸಿ ಬೆಂಕಿ ನಂದಿಸಿದೆ. ಈ ವೇಳೆ ಪೊಲೀಸರು ಗುಂಪು ಚದುರಿಸಲು ಲಘು ಲಾಠಿಚಾರ್ಜ್ ಮಾಡಿದರು.
ಸಂಸದ ಪ್ರಜ್ವಲ್ ಕಾರ‍್ಯಕ್ರಮಕ್ಕೆ ಬಿಜೆಪಿ ಅಡ್ಡಿ: ಶಾಮಿಯಾನ ಕಿತ್ತೆಸೆದರು
ಸ್ಥಳಕ್ಕೆ ಡಿವೈಎಸ್ಪಿ ಪಾಂಡುರಂಗಯ್ಯ (Panduranga), ಉಪ ವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ, ಪ್ರಭಾರ ತಹಸೀಲ್ದಾರ ಮಹೇಶ ಪಾಂಡವ(Mahesh Pandava), ಸಿಪಿಐ ಎಚ್.ಆರ್.ಪಾಟೀಲ ಭೇಟಿ ನೀಡಿ ಮಾತುಕತೆ ನಡೆಸಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಕೆಲವರನ್ನು ವಶಕ್ಕೆ ಪಡೆದಿದ್ದಾರೆ.