ಬಾದಾಮಿ: ಸ್ವಂತ ಕಾರು ಬಿಟ್ಟು ಪೊಲೀಸರ ಜೀಪು ಹತ್ತಿದ ಸಿದ್ದರಾಮಯ್ಯ

By Web Desk  |  First Published Oct 23, 2019, 3:25 PM IST

ಗುಡ್ಡದ ರಸ್ತೆಯಲ್ಲಿ ಕಾರು ಹೋಗದ ಹಿನ್ನೆಲೆಯಲ್ಲಿ ಪೊಲೀಸರ ಜೀಪು ಹತ್ತಿದ ಸಿದ್ದರಾಮಯ್ಯ| ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದ ಘಟನ| ಹೆಬ್ಬಳ್ಳಿ ಗ್ರಾಮದಿಂದ ಮುಮರಡ್ಡಿಕೊಪ್ಪಗೆ ಹೋಗುವಾಗ ಘಟನೆ ಜರುಗಿದೆ|  


ಬಾಗಲಕೋಟೆ[ಅ.23]: ಗುಡ್ಡದ ರಸ್ತೆಯಲ್ಲಿ ಕಾರು ಹೋಗದ ಹಿನ್ನೆಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕಾರಿಳಿದು ಪೊಲೀಸ್ ಜೀಪಿನಲ್ಲಿ ಪ್ರಯಾಣ ಬೆಳೆಸಿದ ಘಟನೆ ಜಿಲ್ಲೆಯ ಬಾದಾಮಿ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ನಡೆದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Tap to resize

Latest Videos

ಭಾರೀ ಮಳೆಯಿಂದ ಪ್ರವಾಹ ಉಂಟಾದ ಹಿನ್ನಲೆಯಲ್ಲಿ ಬುಧವಾರ ಸ್ವಕ್ಷೇತ್ರ ಬಾದಾಮಿಯ ಹೆಬ್ಬಳ್ಳಿ ಗ್ರಾಮದಿಂದ ಮುಮರಡ್ಡಿಕೊಪ್ಪಗೆ ಹೋಗುವಾಗ ಘಟನೆ ಜರುಗಿದೆ.  ಹೆಬ್ಬಳ್ಳಿ ಗ್ರಾಮದಲ್ಲಿ ಸಂತ್ರಸ್ತರ ಸಮಸ್ಯೆ ಆಲಿಸಿ ಮುಮರೆಡ್ಡಿ   ಕೊಪ್ಪಕ್ಕೆ ತೆರಳುವ ಮಾರ್ಗ ಮಧ್ಯೆ ಗುಡ್ಡದ ಮೇಲೇ ಕಾರು ಏರಲಿಲ್ಲ. ಹೀಗಾಗಿ ಅಲ್ಲಿಯೇ ಇದ್ದ ಪೊಲೀಸರು ಜೀಪು ಏರಿ ಪ್ರಯಾಣ ಮುಂದುವರೆಸಿದ್ದಾರೆ.

ಸಿದ್ದರಾಮಯ್ಯ ಕಾಲಿಗೆ ಬಿದ್ದ ಸಂತ್ರಸ್ತ 

ನೆರೆ ಪೀಡಿತ ಹೆಬ್ಬಳ್ಳಿ ಗ್ರಾಮದ ಭೇಟಿಗೆ ಆಗಮಿಸಿದ್ದ ವೇಳೆ ಸಂತ್ರಸ್ತನೊಬ್ಬ ಶಾಸಕ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ಗೋಳು ಹೇಳಿಕೊಂಡಿದ್ದಾನೆ. ಕಾಲಿಗೆ ಬಿದ್ದ ವ್ಯಕ್ತಿಯನ್ನು ಸಮಾಧಾನಪಡಿಸಿದ ಸಿದ್ದರಾಮಯ್ಯ ಅವರು ಪರಿಹಾರ ನೀಡುವ ಭರವಸೆ ನೀಡಿದ್ದಾರೆ.  

click me!