ಪಂಚಮಸಾಲಿ ಪೀಠಾಧ್ಯಕ್ಷ ಬದಲಾವಣೆ ಸುಳಿವು ನೀಡಿದ ಕಾಶಪ್ಪನವರ್

ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿಯ ಬದಲಾವಣೆ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ.


ಬಾಗಲಕೋಟೆ: 'ಪಂಚಮಸಾಲಿ ಸಮಾಜ ಇವರನ್ನು ಗುರುಗಳನ್ನಾಗಿ  ಮಾಡಿದೆ. ಗುರುಗಳು ಸ್ವಯಂ ಘೋಷಿತರಾಗಿ ಇವರೇ ಬಂದಿಲ್ಲ. ಬದಲಾವಣೆಯ ಕಾಲ ಬಂದಾಗ ಯಾರೂ ತಡೆಯಲು ಸಾಧ್ಯವಿಲ್ಲ' ಎಂದು ಹುನಗುಂದ ಶಾಸಕ, ಪಂಚಮ ಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ. ಆ ಮೂಲಕ ಕೂಡಲ ಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಬಸವಜಯಮೃತ್ಯುಂಜಯ ಸ್ವಾಮೀಜಿಯ ಬದಲಾವಣೆ ಕುರಿತು ಪರೋಕ್ಷ ಸುಳಿವು ನೀಡಿದ್ದಾರೆ. ಸಮಾಜ ಇವರನ್ನು ಗುರುಗಳನ್ನಾಗಿ ಮಾಡಿದೆ. ಕಾಲ ಬಂದಾಗ ಯಾರೂ ತಡೆಯಲಾಗಲ್ಲ. ಇವರ ಕಾಲ ಮುಗಿದಿದೆ. ಬದಲಾವಣೆ ಆಗೇ ಆಗುತ್ತದೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಕೂಡಲಶ್ರೀ ವಿರುದ್ಧವೇ ತಿರುಗಿಬಿದ್ದ ಪಂಚಮಸಾಲಿ ಮುಖಂಡರು! ಯತ್ನಾಳ್ ಪರ ಬ್ಯಾಟಿಂಗ್‌ಗೆ ವಿರೋಧ!

Latest Videos

ಯತ್ನಾಳ್ 2028ಕ್ಕೆ ಗೆಲ್ಲಲಿ: ಸವಾಲ್‌ 
ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಆಗೋದು ತಿರುಕನ ಕನಸು. ಸಿಎಂ ಆಗೋದು ಹಾಗಿರಲಿ, 2028ಕ್ಕೆ ಗೆದ್ದು ವಿಧಾನಸೌಧಕ್ಕೆ ಬರಲಿ ನೋಡೋಣ ಎಂದು ಶಾಸಕ ಕಾಶಪ್ಪನವರ ಅವರು ಸವಾಲು ಹಾಕಿದ್ದಾರೆ. 2028ಕ್ಕೆ ನಾನೇ ಸಿಎಂ ಎಂಬ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿ, ಮತ್ತೆ ಗೆಲ್ತೀನಿ ಎನ್ನುವುದೇ ತಿರುಕನ ಕನಸು. ಇವರೆಲ್ಲಾ ಹಗಲುಗನಸು ಕಾಣುವವರು ಎಂದಿದ್ದಾರೆ.

ಇದನ್ನೂ ಓದಿ: 'ಇಡೀ ಪಂಚಮಸಾಲಿ ಸಮುದಾಯವನ್ನು ಯತ್ನಾಳ್‌ಗೆ ಬರೆದುಕೊಟ್ಟಿಲ್ಲ' : ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

click me!