ಸ್ಕೂಟರ್ ಏರಿ ಅರ್ಧ ದಾರಿ ತಲುಪಿದಾಗ ಹೆಡೆ ಬಿಚ್ಚಿದ ನಾಗಣ್ಣ!

By Web DeskFirst Published Jun 17, 2019, 9:18 PM IST
Highlights

ಸ್ಕೂಟರ್, ಬೈಕ್ ಅಥವಾ ಯಾವುದೇ ವಾಹನ ಸ್ಟಾರ್ಟ್ ಮಾಡುವಾಗ ಪರಿಶೀಲಿಸುವುದು ಸೂಕ್ತ. ಮಳೆಗಾಲದಲ್ಲಿ ಹಾವುಗಳ ಕಾಟ ಹೆಚ್ಚು. ಇದೀಗ ಹೊಂಡಾ ಆಕ್ಟೀವಾ ಮಾಲೀಕ ಅರ್ಧ ದಾರಿ ತಲುಪಿದಾಗ ಸ್ಕೂಟರ್ ಒಳಗಿಂದ ನಾಗರ ಹಾವು ಹೆಡೆ ಬಿಚ್ಚಿದ ಘಟನೆ ನಡೆದಿದೆ. 

ನೆಲ್ಲಾಯಿ(ಜೂ.17): ನಿಲ್ಲಿಸಿದ್ದ ಸ್ಕೂಟರ್ ಒಳಗೆ ಹಾವಿದೆ ಅಂದರೆ ವಾಹನದ ಹತ್ತಿರವೂ ಸುಳಿಯುವುದಿಲ್ಲ. ಇನ್ನು ಸ್ಕೂಟರ್ ಏರಿ ರೈಡಿಂಗ್ ಮಾಡುತ್ತಿರುವಾಗ ಸೀಟಿನೊಳಗೆ ಹಾವು ಅಡಗಿ ಕುಳಿತಿದೆ ಅಂದರೆ ಹೇಗಾಗಬೇಡ. ತಮಿಳುನಾಡಿನ ನೆಲ್ಲಾಯಿ ಬಳಿ ಈ ರೀತಿ ಘಟನೆ ನಡೆದಿದೆ. ಹೊಂಡಾ ಆಕ್ಟೀವಾ ಸ್ಕೂಟರ್ ಮಾಲೀಕನಿಗೆ ಒಂದು ಕ್ಷಣ ಸ್ಕೂಟರ್ ಬೇಡಾ, ಯಾವುದೂ ಬೇಡ ಜೀವ ಒಂದಿದ್ದರೆ ಸಾಕು ಅನ್ನೋ ಪರಿಸ್ಥಿತಿಗೆ ಬಂದೊದಗಿತ್ತು.

ಇದನ್ನೂ ಓದಿ: ಹೆಲ್ಮೆಟ್ ಇಲ್ಲದಿದ್ರೆ ಪೆಟ್ರೋಲ್ ಕೂಡ ಸಿಗಲ್ಲ-  ಹೊಸ ನೀತಿ ಜಾರಿ!

Latest Videos

ಹೊಂಡಾ ಆಕ್ಟೀವಾ  ಮಾಲೀಕ ಸ್ಕೂಟರ್ ಏರಿ ನೆಲ್ಲಾಯಿ ಜಂಕ್ಷನ್ ಬಳಿ ತೆರಳುತ್ತಿದ್ದ. ಅಷ್ಟರಲ್ಲೇ ಸ್ಕೂಟರ್ ಒಳಗಿಂದ ವಿಸಿಸ್ ಸದ್ದು ಕೇಳಿಸಿದೆ. ತಕ್ಷಣವೇ ಸ್ಕೂಟರ್ ನಿಲ್ಲಿಸಿ ನೋಡಿದಾಗ ದೊಡ್ಡ ನಾಗರ ಹಾವೊಂದು ಸ್ಕೂಟರ್ ಒಳಗೆ ಅಡಗಿ ಕುಳಿತಿದೆ. ಬೆಚ್ಚಿ ಬಿದ್ದ ಮಾಲೀಕ ಸ್ಕೂಟರ್ ನಿಲ್ಲಿಸಿ ಸಹಾಯ ಕೇಳಿದ್ದಾನೆ. ತಕ್ಷಣವೇ ಸ್ಥಳದಲ್ಲಿದ್ದ ಹಲವರು ಹಾವು ಹಿಡಿಯಲು ಮುಂದಾಗಿದ್ದಾರೆ.

ಇದನ್ನೂ ಓದಿ: ಭಾರತದ ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ ಬಿಡುಗಡೆ ದಿನಾಂಕ ಬಹಿರಂಗ!

ಹಾವಿನ ಗಾತ್ರ ನೋಡಿ ಎಲ್ಲರೂ ಹಿಂದೆ ಸರಿದಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸತತ 1 ಗಂಟೆಗಳ ಕಾಲ ಹಾವನ್ನು ಹೊರತೆಗೆಯಲು ಹೋರಾಟ ಮಾಡಿದ್ದಾರೆ. ಸತತ ಪ್ರಯತ್ನದಿಂದ ಅರಣ್ಯಾಧಿಕಾರಿಗಳು ಹಾವನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಳೆಗಾಲದಲ್ಲಿ ಹೆಚ್ಚಾಗಿ ಹಾವುಗಳು ನಿಲ್ಲಿಸಿದ್ದ ವಾಹನಗಳ ಒಳಗೆ ಸೇರಿಕೊಳ್ಳುವುದು ಸಹಜ. ಹೀಗಾಗಿ ಎಚ್ಚರ ವಹಿಸಿದರೆ ಸೂಕ್ತ.


 

click me!