ಹೊಸ ವರ್ಷದಲ್ಲಿ ವೋಕ್ಸ್‌ವ್ಯಾಗನ್ ಕಾರು ನಿರ್ವಹಣೆ ವೆಚ್ಚ ಕಡಿತ

By Web Desk  |  First Published Jan 7, 2019, 6:47 PM IST

ವೋಕ್ಸ್‌ವ್ಯಾಗನ್ ಕಾರಿನ ನಿರ್ವಹಣಾ ವೆಚ್ಚು ದುಬಾರಿ ಅನ್ನೋ ಆರೋಪ ಬಹಳ ಹಿಂದಿನಿಂದಲೂ ಇದೆ. ಹೀಗಾಗಿಯೇ ವೋಕ್ಸ್‌ವ್ಯಾಗನ್ ಕಾರುಗಳು ಭಾರತದಲ್ಲಿ ಹೆಚ್ಚಾಗಿ ಮಾರಾಟವಾಗಿಲ್ಲ. ಇದೀಗ ಫೋಕ್ಸ್‌ವ್ಯಾಗನ್ ಸಂಸ್ಥೆ ಮಾರಾಟದಲ್ಲಿ ಏರಿಕೆ ಕಾಣಲು ಹೊಸ ನೀತಿ ಜಾರಿ ಮಾಡಿದೆ.


ನವದೆಹಲಿ(ಜ.07): ಭಾರತದಲ್ಲಿ ವೋಕ್ಸ್‌ವ್ಯಾಗನ್ ಕಾರು ಮಾರಾಟ ಹೆಚ್ಚಿಸಲು ಇದೀಗ ಹೊಸ ಪ್ಲಾನ್ ರೂಪಿಸಿದೆ.  ವೋಕ್ಸ್‌ವ್ಯಾಗನ್ ವಿರುದ್ಧ ಕೇಳಿ ಬರುತ್ತಿರುವ ಮೊದಲ ದೂರು ಅಂದರೆ ಕಾರು ನಿರ್ವಹಣೆ ವೆಚ್ಚ ದುಬಾರಿ. ಇದಕ್ಕಾಗಿಯೇ ವೋಕ್ಸ್‌ವ್ಯಾಗನ್ ಕಾರು ಖರೀದಿಗೆ ಭಾರತೀಯರು ಹಿಂದೇಟು ಹಾಕುತ್ತಿದ್ದರು. ಇದೀಗ ವೋಕ್ಸ್‌ವ್ಯಾಗನ್ ಶೇಕಡಾ 44 ರಷ್ಟಿದ್ದ ಮೈಂಟೇನೆನ್ಸ್ ವೆಚ್ಚವನ್ನ 24ಕ್ಕೆ ಇಳಿಸಿದೆ.

ಇದನ್ನೂ ಓದಿ: ನಾಳೆ ಭಾರತ್ ಬಂದ್ : ಶಾಲಾ-ಕಾಲೇಜುಗಳಿಗೆ ಇರುತ್ತಾ ರಜೆ..?

Latest Videos

undefined

ನಿರ್ವಹಣಾ ವೆಚ್ಚದ ಜೊತೆಗೆ ಉಚಿತ ಸರ್ವೀಸ್ ಕೂಡ ನೀಡುತ್ತಿದೆ. ಇಷ್ಟು ದಿನ 6 ತಿಂಗಳ ಅಥವಾ 7,000 ಕಿ.ಮೀ ಪ್ರಯಾಣಕ್ಕೆ ಉಚಿತ ಚೆಕ್ ಅಪ್ ನೀಡುತ್ತಿತ್ತು. ಆದರೆ ಯಾವುದೇ ಫ್ರೀ ಸರ್ವೀಸ್ ಭಾಗ್ಯಗಳು ವೋಕ್ಸ್‌ವ್ಯಾಗನ್ ನೀಡರಲಿಲ್ಲ. ಇದೀಗ ಮಾರುತಿ ಸುಜುಕಿ ಸಂಸ್ಥೆಯ ರೀತಿಯಲ್ಲಿ ಉಚಿತ 3 ಸರ್ವೀಸ್ ನೀಡಲು ಮುಂದಾಗಿದೆ.

ಇದನ್ನೂ ಓದಿ: ಕಡಿಮೆ ಬೆಲೆಯ ಅತ್ಯುತ್ತಮ5 ಸೆಡಾನ್ ಪೆಟ್ರೋಲ್ ಕಾರು- ಇಲ್ಲಿದೆ ಲಿಸ್ಟ್!

2018ರಲ್ಲಿ ವೋಕ್ಸ್‌ವ್ಯಾಗನ್ ಮಾರಾಟದಲ್ಲಿ ಇಳಿಕೆಯಾಗಿತ್ತು. ಹೀಗಾಗಿ ವೋಕ್ಸ್‌ವ್ಯಾಗನ್ ಇದೀಗ ಭಾರತದಲ್ಲಿ ಶೇಕಡಾ 5 ರಷ್ಟು  ಕಾರು ಮಾರುಕಟ್ಟೆ ಆಕ್ರಮಿಸಿಕೊಳ್ಳೋ ಪ್ಲಾನ್ ಹಾಕಿದೆ. ಹೀಗಾಗಿ ಹೊಸದಾಗಿ ವೋಕ್ಸ್‌ವ್ಯಾಗನ್ ಕಾರು ಖರೀದಿಸುವ ಗ್ರಾಹಕರಿಗೆ ನೂತನ ಸೌಲಭ್ಯಗಳು ಸಿಗಲಿದೆ.

click me!