ನಟ ಸಿದ್ಧಾರ್ಥ್ ಮಲ್ಹೋತ್ರ ಖರೀದಿಸಿದ ರೇಂಜ್ ರೋವರ್ ಕಾರಿನ ವಿಶೇಷತೆ ಏನು?

By Web Desk  |  First Published Jan 7, 2019, 3:24 PM IST

ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರ ನೂತನ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಈ ದುಬಾರಿ ಕಾರಿನ ವಿಶೇಷತೆ ಏನು? ಯಾಕೆ ನಟ ನಟಿಯರು ರೇಂಜ್ ರೋವರ್ ಕಾರಿನ ಮೊರೆ ಹೋಗುತ್ತಾರೆ? ಇಲ್ಲಿದೆ ವಿವಿರ.


ಮುಂಬೈ(ಜ.07): ಬಾಲಿವುಡ್‌ನ ನಟ ನಟಿಯರು ರೇಂಜ್ ರೋವರ್ ಕಾರು ಖರೀದಿಸುವುದು ಹೊಸತಲ್ಲ. ಬಹುತೇಕ ಸೆಲೆಬ್ರೆಟಿಗಳಲ್ಲಿ ರೇಂಜ್ ರೋವರ್ ಕಾರು ಇದೆ. ಇದೀಗ ಬಾಲಿವುಡ್‌ನ ಬಹುಬೇಡಿಕೆಯ ಯುವ ನಟ ಸಿದ್ಧಾರ್ಥ್ ಮಲ್ಹೋತ್ರ ನೂತನ ರೇಂಜ್ ರೋವರ್ ಕಾರು ಖರೀದಿಸಿದ್ದಾರೆ. ಕಪ್ಪು ಬಣ್ಣದ ಕಾರು ಹಲವು ವಿಶೇಷತೆಗಳನ್ನ ಹೊಂದಿದೆ.

ಇದನ್ನೂ ಓದಿ: ಭಾರತ್ ಬಂದ್ : ಮುಂದೂಡಿಕೆಯಾಗುತ್ತಾ ವಿವಿ ಪರೀಕ್ಷೆ..?

Tap to resize

Latest Videos

undefined

ಸಿದ್ಧಾರ್ಥ್ ರೇಂಜ್ ರೋವರ್ ವೋಗ್ಯೂ ಎಡಿಶನ್ ಕಾರು ಖರೀದಿಸಿದ್ದಾರೆ. ಬಳಿಕ ಆಪ್ತ, ನಿರ್ದೇಶಕ ಕರಣ್ ಜೋಹರ್ ಜೊತೆ ಲಾಂಗ್ ಡ್ರೈವ್ ಹೋಗಿದ್ದಾರೆ. ರೇಂಜ್ ರೋವರ್ ಕಾರಿನಲ್ಲಿ ವೋಗ್ಯೂ, ವೋಗ್ಯೊ SE, ಆಟೋಬಯೋಗ್ರಫಿ ಹಾಗೂ SV ಆಟೋಬಯೋಗ್ರಫಿ ಡೈನಾಮಿಕ್ ವೇರಿಯೆಂಟ್ ಹೊಂದಿದೆ.

ಇದನ್ನೂ ಓದಿ: ಡ್ರೈವಿಂಗ್ ಲೈಸೆನ್ಸ್‌ಗೆ ಆಧಾರ್ ಲಿಂಕ್-ಶೀಘ್ರದಲ್ಲೇ ಹೊಸ ನಿಯಮ!

ರೇಂಜ್ ರೋವ್ ವೊಗ್ಯು ಎಡಿಶನ್ ಕಾರಿನ ಬೆಲೆ 1.8 ಕೋಟಿಯಿಂದ ಆರಂಭಗೊಳ್ಳಲಿದೆ. ಟಾಪ್ ವೇರಿಯೆಂಟ್ ಕಾರಿನ ಬೆಲೆ 4 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ವೊಗ್ಯೋ ಕಾರು 3.0 ಲೀಟರ್ V6 ಡೀಸೆಲ್ ಟರ್ಬೋಚಾರ್ಜ್‌ಡ್ ಎಂಜಿನ್ ಹೊಂದಿದೆ. 335 Bhp ಪವರ್ ಹಾಗೂ 740 Nm ಟಾರ್ಕ್ ಉತ್ಪಾದಿಸಲಿದೆ. ಇದರಲ್ಲಿ 4.4 ಲೀಟರ್ ಹಾಗೂ 5.0 ಲೀಟರ್ ಸೂಪರ್‌ಚಾರ್ಜ್‌ಡ್ V8 ಎಂಜಿನ ಕೂಡ ಲಭ್ಯವಿದೆ. ರೇಂಜ್ ರೋವರ್ ಕಾರು ಗರಿಷ್ಠ ಸುರಕ್ಷತೆ ಹೊಂದಿದೆ. ಹೀಗಾಗಿ ನಟ-ನಟಿಯರು, ಉದ್ಯಮಿಗಳು ಹೆಚ್ಚಾಗಿ ಈ ಕಾರನ್ನೇ ಖರೀದಿಸುತ್ತಾರೆ. 

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್-ಬಜಾಜ್ ಚೇತಕ್ ಹಗ್ಗ ಜಗ್ಗಾಟ - ಗೆದ್ದವರು ಯಾರು?

ಬಾಲಿವುಡ್‌ನ ಬಹುತೇಕ ನಟ ನಟಿಯರು ರೇಂಜ್ ರೋವರ್ ಕಾರು ಹೊಂದಿದ್ದಾರೆ.  ಅನುಷ್ಕಾ ಶರ್ಮಾ, ಮಲೈಕಾ ಆರೋರಾ, ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಶಾರೂಖ್  ಖಾನ್, ಹೃತಿಕ್ ರೋಶನ್ ಸೇರಿದಂತೆ ಹಲವು ಸೆಲೆಬ್ರೆಟಿಗಳಲ್ಲಿ ರೇಂಜ್ ರೋವರ್ ಕಾರಿದೆ. ಇನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ರೇಂಜ್ ರೋವರ್ ಕಾರು ಹೊಂದಿದ್ದಾರೆ.

click me!