ಗುಜರಿಯಿಂದ ಬುಗ್ಗಾಟಿ ಸ್ಪೋರ್ಟ್ಸ್‌ ಕಾರು ನಿರ್ಮಿಸಿದ ವಿಯೆಟ್ನಾಂ ಸ್ನೇಹಿತರು... ವಿಡಿಯೋ ನೋಡಿ

Suvarna News   | Asianet News
Published : Feb 11, 2022, 02:30 PM IST
ಗುಜರಿಯಿಂದ ಬುಗ್ಗಾಟಿ ಸ್ಪೋರ್ಟ್ಸ್‌ ಕಾರು ನಿರ್ಮಿಸಿದ ವಿಯೆಟ್ನಾಂ ಸ್ನೇಹಿತರು... ವಿಡಿಯೋ ನೋಡಿ

ಸಾರಾಂಶ

ಬೇಡದ ವಸ್ತುಗಳಿಂದ ಸ್ಪೋರ್ಟ್ಸ್‌ ಕಾರು ನಿರ್ಮಿಸಿದ ಯುವಕರು ಮಾರುಕಟ್ಟೆಯಲ್ಲಿ 21 ಕೋಟಿ ಬೆಲೆ ಹೊಂದಿರುವ ಬುಗ್ಗಾಟಿ ಸ್ಪೋರ್ಟ್ಸ್‌ ಕಾರು ಕಾರು ನಿರ್ಮಾಣದ ವಿಡಿಯೋ ಯೂಟ್ಯೂಬ್‌ನಲ್ಲಿ ಲಭ್ಯ  

ವಿಯೆಟ್ನಾಂ(ಫೆ.11): ವಿಯೆಟ್ನಾಂನ ಸ್ನೇಹಿತರ ಗುಂಪೊಂದು ಕಸದಿಂದ ರಸ ತಯಾರಿಸಿದೆ. ತಮ್ಮದೇ ಒಂದು ಸ್ಪೋರ್ಟ್ಸ್‌ ಕಾರು ಹೊಂದಬೇಕೆಂಬ ಕನಸು ಕಾಣುತ್ತಿದ್ದಈ ತಂಡ ಜನಪ್ರಿಯ ಸ್ಪೋರ್ಟ್ಸ್‌ ಕಾರಾದ ಬುಗ್ಗಾಟಿ ಚಿರೋನ್‌ನ ಪ್ರತಿಕೃತಿಯನ್ನು ತಯಾರಿಸಿದ್ದಾರೆ. ಇದರ ನಿರ್ಮಾಣಕ್ಕೆ ಸುಮಾರು ಒಂದು ವರ್ಷವೇ ತಗುಲಿದ್ದು, ಇದರ ನಿರ್ಮಾಣದ ಪ್ರತಿ ಹಂತದ ಸಂಪೂರ್ಣ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದ್ದು ವೈರಲ್‌ ಆಗಿದೆ. ನೆಟ್ಟಿಗರು ಈ ಸ್ನೇಹಿತರ ಬಳಗದ ಕೌಶಲ್ಯಕ್ಕೆ ಬೆರಗಾಗಿದ್ದಾರೆ.

ಯೂಟ್ಯೂಬ್‌ನಲ್ಲಿ ಈ ವಿಡಿಯೋವನ್ನು NHET ಟಿವಿ ಪೋಸ್ಟ್ ಮಾಡಿದೆ. ವಿಯೆಟ್ನಾಂನ ಸ್ನೇಹಿತರ ಗುಂಪು ಬುಗ್ಗಾಟಿ ಚಿರೋನ್‌ ಸ್ಪೋರ್ಟ್‌ ಕಾರಿನಂತೆ ಇರುವ ಕಾರನ್ನು ತಾವೇ ಸ್ವತಃ ನಿರ್ಮಿಸಿದಾಗ, ಅವರಿಗೆ ಅವರ ಕನಸುಗಳು ನನಸಾದ ಕ್ಷಣವಾಗಿತ್ತು. ಮೂಲತಃ  ಈ  ಬುಗ್ಗಾಟಿ ಚಿರೋನ್‌ ಸ್ಪೋರ್ಟ್‌ ಕಾರಿನ ಬೆಲೆ ಬರೋಬರಿ 21 ಕೋಟಿ ರೂಪಾಯಿ.  ಆದರೆ ಈ ಹುಡುಗರು ಈ ಭಾರಿ ಮೌಲ್ಯದ ಕಾರನ್ನು ಗುಜರಿ ವಸ್ತುಗಳಿಂದ (ಬೇಡವಾದ ವಸ್ತುಗಳು) ನಿರ್ಮಿಸಿದ್ದಾರೆ.

ವೀಡಿಯೊದಲ್ಲಿ, ಪ್ರತಿಭಾವಂತ ಸ್ನೇಹಿರ ಗುಂಪು ಜೇಡಿಮಣ್ಣು, ಉಕ್ಕು ಮತ್ತು ಫೈಬರ್‌ಗ್ಲಾಸ್‌ನಿಂದ ಸ್ಪೋರ್ಟ್ಸ್ ಕಾರನ್ನು ತಯಾರಿಸುವುದನ್ನು ಕಾಣಬಹುದು. ಅವರು ಮೊದಲಿಗೆ ವಾಹನಕ್ಕೆ ಉಕ್ಕಿನ ಚೌಕಟ್ಟನ್ನು ನಿರ್ಮಿಸಿದರು ಮತ್ತು ಅದನ್ನು ಜೇಡಿಮಣ್ಣಿನಿಂದ ಪ್ಲಾಸ್ಟರ್ ಮಾಡಿದರು. ಈ ವೈರಲ್ ವಿಡಿಯೋ  ಕಾರನ್ನು ನಿರ್ಮಿಸುವ ಸಂಪೂರ್ಣ ಪ್ರಕ್ರಿಯೆಯನ್ನು ಅದರ ಎಲ್ಲಾ ಯಂತ್ರೋಪಕರಣಗಳು ಮತ್ತು ಫಿಟ್ಟಿಂಗ್‌ಗಳೊಂದಿಗೆ ತೋರಿಸಿದೆ. 

Retro cassette player: ರೆಟ್ರೋದತ್ತ ಪೋರ್ಷೆ ಒಲವು, ಐಷಾರಾಮಿ ಕಾರಿನಲ್ಲಿ ಕ್ಯಾಸೆಟ್‌ ಮೂಲಕ ಕೇಳಿ ಹಾಡು!

ಈ ಕಾರಿನ ನಿರ್ಮಾಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಈ ಸ್ನೇಹಿತರ ಗುಂಪಿಗೆ ಒಂದು ವರ್ಷವೇ ಬೇಕಾಯಿತು. ನಾವು ಈ ಕಾರಿನ ನಿರ್ಮಾಣ ಕಾರ್ಯದಲ್ಲಿ 1 ವರ್ಷ ಕಳೆದಿದ್ದೇವೆ.  ಬುಗಾಟಿ ಚಿರಾನ್ ಸೂಪರ್‌ಕಾರ್ ಅನ್ನು ಹೊಂದುವ ನಮ್ಮ ಕನಸ್ಸು ನನಸಾಗಿದೆ.  ಎಂದು ಯೂಟ್ಯೂಬ್‌ನಲ್ಲಿ ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.

ಕೇರಳದ ಉದ್ಯೋಗಿಗೆ ಮರ್ಸಿಡಿಸ್‌ ಬೆಂಜ್‌ ಕಾರು ಗಿಫ್ಟ್ ನೀಡಿದ ಮಾಲೀಕ

ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಕೂಡ ಟ್ವಿಟರ್‌ನಲ್ಲಿ ವೀಡಿಯೊದ ಸಣ್ಣ ತುಣುಕನ್ನು ಹಂಚಿಕೊಂಡಿದ್ದಾರೆ. ಅವರು ಈ ಕಾರು ನಿರ್ಮಿಸಿದ ಸ್ನೇಹಿತರ ತಂಡವನ್ನು ಸೃಜನಶೀಲರು ಮತ್ತು ಬುದ್ಧಿವಂತರು ಎಂದು ಕರೆದಿದ್ದಾರೆ. ಈ ವಿಡಿಯೋ ನೋಡುಗರು ಕೂಡ ಗುಂಪಿನ ಅದ್ಭುತ ಪ್ರತಿಭೆಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.  ಮರಳಿನಿಂದ ಚಿನ್ನವನ್ನು ಹೇಗೆ ತಯಾರಿಸುವುದು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಇದು ಸಂಪೂರ್ಣ ಹೊಸತನ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

PREV
Read more Articles on
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ