ಹೊಸ ಕಾರು, ಬೈಕ್ ಖರೀದಿಸಲು ಮುಂದಾಗಿರುವ ಗ್ರಾಹಕರಿಗೆ ದಸರಾಗಿಂತ ದೀಪಾವಳಿಗೆ ಡಬಲ್ ಆಫರ್ ಸಿಗಲಿದೆ. ಕಡಿಮೆ ಬೆಲೆ, ಡಿಸ್ಕೌಂಟ್ ಆಫರ್, ಕಡಿಮೆ ಬಡ್ಡಿ, ಸುಲಭ ಸಾಲ, ಹೆಚ್ಟುವರಿ ಫೀಚರ್ಸ್ ಸೇರಿದಂತೆ ಹಲವು ಆಫರ್ ನಿಮಗಾಗಿ ಕಾಯುತ್ತಿದೆ.
ಬೆಂಗಳೂರು(ಅ.22): ದಸರಾ ಹಬ್ಬ ಮುಗಿಸಿರುವ ಭಾರತೀಯರು ಇದೀಗ ದೀಪಾವಳಿ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ. ಇದೀಗ ನೂತನ ಬೈಕ್, ಕಾರು ಖರೀದಿಸೋ ಗ್ರಾಹಕರಿಗೆ ದಸರಾಗಿಂತ ದೀಪಾವಳಿಗೆ ಡಬಲ್ ಆಫರ್ ಘೋಷಿಸಲು ಕಂಪನೆಗಳು ನಿರ್ಧರಿಸಿದೆ.
ಈ ಬಾರಿಯ ದಸರಾ ಹಬ್ಬ ಮೋಟಾರು ಕಂಪೆನಿಗಳಿಗೆ ಹೆಚ್ಚಿನ ಲಾಭ ತಂದುಕೊಟ್ಟಿಲ್ಲ. ಕಾರಣ ಇಂಧನ ಬೆಲೆ ಏರಿಕೆ, ವಾಹನ ವಿಮೆ ನಿಯಮ ಬದಲಾವಣೆ, ಬಡ್ಡಿ ದರ ಏರಿಕೆ ಸೇರಿದಂತೆ ಹಲವು ಕಾರಣಗಳಿಂದ ಹಬ್ಬದ ದಿನಗಳಲ್ಲಿ ವಾಹನ ಮಾರಾಟ ಇಳಿಮುಖವಾಗಿತ್ತು. ಕಳೆದ 6 ವರ್ಷಗಳಿಗೆ ಹೋಲಿಸಿದೆರೆ ಈ ಬಾರಿಯ ದಸರಾ ಹಬ್ಬದ ವೇಲೆ ಕಡಿಮೆ ಪ್ರಮಾಣದ ವಾಹನ ಮರಾಟವಾಗಿದೆ.
undefined
ದಸರಾ ಹಬ್ಬದಲ್ಲಿ ಮಾತ್ರವಲ್ಲ, ಇತ್ತೀಚೆಗಷ್ಟೇ ಗಣೇಶ ಹಬ್ಬ ಹಾಗೂ ಓಣಂ ವೇಳೆ ಮಳೆ ಆರ್ಭಟದಿಂದ ದಕ್ಷಿಣ ಭಾರತದಲ್ಲಿ ವಾಹನ ಮಾರಾಟ ಇಳಿಕೆಯಾಗಿತ್ತು. ಇದರ ಬೆನ್ನಲ್ಲೇ ಇದೀಗ ದಸರಾ ಹಬ್ಬದ ಮಾರಾಟ ಕೂಡ ನಿರೀಕ್ಷಿತ ಮಟ್ಟ ತಲುಪಿಲ್ಲ. ಹೀಗಾಗಿ ದೀಪಾವಳಿ ಹಬ್ಬಕ್ಕೆ ಗ್ರಾಹಕರನ್ನ ಆಕರ್ಷಿಸಲು ಹೆಚ್ಚುವರಿ ಆಫರ್ ನೀಡಲು ಕಂಪೆನಿಗಳು ಮುಂದಾಗಿದೆ.
ಕಾರು ಬೈಕ್ ಮೇಲೆ ಕ್ಯಾಶ್ ಡಿಸ್ಕೌಂಟ್, ಹೆಚ್ಚುವರಿ ಫೀಚರ್ಸ್, ಕಡಿಮೆ ಬಡ್ಡಿ ದರ, ಸುಲಭ ಸಾಲ ಸೇರಿದಂತೆ ಹಲವು ಆಫರ್ ನೀಡಲು ಮುಂದಾಗಿದೆ. ಈ ಮೂಲಕ ಹಬ್ಬದ ವೇಳೆ ಇಳಿಮುಖವಾಗಿರುವ ವಾಹನ ಮಾರಾಟ ಪ್ರಮಾಣವನ್ನ ಹೆಚ್ಚಿಸಲು ಮುಂದಾಗಿದೆ. ಹೀಗಾಗಿ ಇನ್ನು ವಾಹನ ಖರೀದಿಸಲು ಇಚ್ಚಿಸುವವರು ದೀಪಾವಳಿಗೆ ಪ್ಲಾನ್ ಮಾಡುವುದು ಉತ್ತಮ.