ಹೊಸ ವರ್ಷಕ್ಕೆ ಕಾರು ಖರೀದಿಸಲು ಬಯಸಿದರೆ, ಚೇಂಜ್ ಮಾಡಿ ಪ್ಲಾನ್!

By Web Desk  |  First Published Dec 11, 2019, 3:19 PM IST

ಹೊಸ ಹೊಸ ವರ್ಷಕ್ಕೆ ಹೊಸ ವಸ್ತು, ಹೊಸ ವಾಹನ ಸೇರಿದಂತೆ ಹೊಸತು ಖರೀದಿ ಸಾಮಾನ್ಯ. 2020ರಲ್ಲಿ ಹೊಸ ವಾಹನ ಖರೀದಿ ಪ್ಲಾನ್ ನಿಮ್ಮದಾಗಿದ್ದರೆ, ಕೊಂಚ ಬದಲಾಯಿಸುವುದು ಒಳಿತು. ಕಾರಣ ಹೊಸ ವರ್ಷ ನಿಮ್ಮ ಜೇಬಿಗೆ ಕತ್ತರಿ ಹಾಕಲಿದೆ.


ನವದೆಹಲಿ(ಡಿ.11): ಹೊಸ ವರ್ಷಕ್ಕೆ ಕೌಂಟ್ ಡೌನ್ ಆರಂಭವಾಗಿದೆ. 2019ಕ್ಕೆ ಗುಡ್ ಬೈ ಹೇಳಿ 2020ಕ್ಕೆ ಸ್ವಾಗತ ಕೋರಲು ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಹಲವರು ಹೊಸ ವರ್ಷಕ್ಕೆ  ವಾಹನ ಖರೀದಿಸಲು ಪ್ಲಾನ್ ಹಾಕಿಕೊಂಡಿರುತ್ತಾರೆ. ಆದರೆ ಈ ಬಾರಿ ಹೊಸ ವರ್ಷಕ್ಕೆ ಕಾರು ಖರೀದಿಸುವ ಪ್ಲಾನ್ ಇದ್ದರೆ, ಈಗಲೇ ಖರೀದಿಸುವುದು ಉಚಿತ.

Latest Videos

undefined

ಇದನ್ನೂ ಓದಿ: ಟಾಟಾ ಮೋಟಾರ್ಸ್ ಕಾರು ಬೆಲೆ ಹೆಚ್ಚಳ; ಕಾರಣ ಬಹಿರಂಗ!

ಹೊಸ ವರ್ಷದಿಂದ ಬಹುತೇಕ ಆಟೋಮೊಬೈಲ್ ಕಂಪನಿಗಳು ಕಾರು ಬೆಲೆ ಏರಿಕೆ ಮಾಡುತ್ತಿದೆ. ವಿವಿದ ಕಾರಣಗಳಿಂದ ಭಾರತದಲ್ಲಿ ಕಾರಿನ ಬೆಲೆ ಹೆಚ್ಚಾಗುತ್ತಿದೆ. 2020ರ ಆರಂಭದಿಂದಲೇ ಹ್ಯುಂಡೈ ಕಾರಿನ ಬೆಲೆ ಹೆಚ್ಚಾಗುತ್ತಿದೆ. ಹ್ಯುಂಡೈನ ಎಲ್ಲಾ ಕಾರುಗಳ ಬೆಲೆ ಹೆಚ್ಚಳವಾಗುತ್ತಿದೆ ಎಂದು ಹ್ಯುಂಡೈ ಮೋಟಾರ್ ಇಂಡಿಯಾ ಖಚಿತ ಪಡಿಸಿದೆ.

ಇದನ್ನೂ ಓದಿ: MG ಮೋಟಾರ್ಸ್‌ನಿಂದ ಹೆಕ್ಟರ್ ಬಳಿಕ ಹೊಸ ಎಲೆಕ್ಟ್ರಿಕ್ ಕಾರು ಅನಾವರಣ!

ಪ್ರತಿ ಕಾರಿನ ಮಾಡೆಲ್ ಹಾಗೂ ಇಂಧನ ಆಧಾರಿತ ಕಾರುಗಳ ಪ್ರಕಾರ ಬೆಲೆ ಹೆಚ್ಚಾಗಲಿದೆ. ಕಚ್ಚಾವಸ್ತುಗಳ ಬೆಲೆ ಹೆಚ್ಚಳ, ಆಮದು ಸುಂಕ, GST(ತೆರಿಗೆ) ಸೇರಿದಂತೆ ಹಲವು ಕಾರಣಗಳಿಂದ ಕಾರು ಬೆಲೆ ಅನಿವಾರ್ಯವಾಗಿ ಹೆಚ್ಚಿಸಬೇಕಿದೆ ಎಂದು ಹ್ಯುಂಡೈ ಹೇಳಿದೆ. ಬೆಲೆ ಹೆಚ್ಚಳ ಮಾಡುವಾಗಿ ಹೇಳಿರುವ ಹ್ಯುಂಡೈ ಹೆಚ್ಚಿನ ವಿವರ ಬಹಿರಂಗ ಪಡಿಸಿಲ್ಲ. 

ಹ್ಯುಂಡೈ ಕಂಪನಿಗೂ ಮೊದಲೇ ಮಾರುತಿ ಸುಜುಕಿ ಹಾಗೂ ಟಾಟಾ ಮೋಟಾರ್ಸ್ 2020ರಿಂದ ಬೆಲೆ ಹೆಚ್ಚಳ ಮಾಡುವುದಾಗಿ ಘೋಷಿಸಿದೆ.

ಡಿಸೆಂಬರ್ 11ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!