ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ; ಆಟೋ ಕಂಪನಿಗಳಿಗೆ ಬೇವು-ಬೆಲ್ಲ ಬಜೆಟ್ !

By Web Desk  |  First Published Jul 5, 2019, 3:45 PM IST

ವಿತ್ತ ಸಚಿವೆ ನಿರ್ಮಲಾ ಸೀತಾರಾಮಾನ್ ಬಜೆಟ್ ಮಂಡಿಸುತ್ತಿದ್ದಂತೆ, ಆಟೋಮೊಬೈಲ್ ಕಂಪನಿಗಳ ಕಿವಿ ನೆಟ್ಟಗಾಗಿತ್ತು. ಕಾರಣ ಕಳೆಗುಂದಿರುವ ಭಾರತೀಯ ಆಟೋಮೊಬೈಲ್ ಕ್ಷೇತ್ರವನ್ನು ಮೇಲಕ್ಕೆತ್ತಲು ಹಲವು ಅನುದಾನ ನೀಡೋ ನಿರೀಕ್ಷೆಗಳಿತ್ತು.  ಆದರೆ ಎಲೆಕ್ಟ್ರಿಕ್ ವಾಹನಕ್ಕೆ ಬಂಪರ್ ಕೊಡುಗೆ ಘೋಷಿಸಿರುವ ಕೇಂದ್ರ ಸರ್ಕಾರ, ಇಂಧನ ವಾಹನಗಳತ್ತ ಕಣ್ಣೆತ್ತಿ ನೋಡಿಲ್ಲ. ಆಟೋಮೊಬೈಲ್ ಕ್ಷೇತ್ರಕ್ಕೆ ಪ್ರಸಕ್ತ ಬಜೆಟ್ ನೀಡಿದ ಕೊಡುಗೆಗಳೇನು? ಇಲ್ಲಿದೆ ಸಂಪೂರ್ಣ ವಿವರ.


ನವದೆಹಲಿ(ಜು.05): ಕೇಂದ್ರ ಸರ್ಕಾರ 2019ರ ಸಾಲಿನ ಬಜೆಟ್ ಮಂಡಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಹುನಿರೀಕ್ಷಿತ ಬಜೆಟ್ ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ ಆಟೋಮೊಬೈಲ್ ಕ್ಷೇತ್ರಕ್ಕೆ ಸಿಹಿಗಿಂತ ಹೆಚ್ಚು ಕಹಿ ನೀಡಿದೆ. ಕಾರಣ ಎಲೆಕ್ಟ್ರಿಟ್ ವಾಹನದತ್ತ ಚಿತ್ತ ಹರಿಸಿರುವ ಕೇಂದ್ರ ಸರ್ಕಾರ, ಬಂಪರ್ ಕೊಡುಗೆ ಘೋಷಿಸಿದೆ. ಆದರೆ ಪೆಟ್ರೋಲ್, ಡೀಸೆಲ್  ಬೆಲೆ ಏರಿ ಹಾಗೂ, ಇಂಧನ ವಾಹನಗಳ ಜಿಎಸ್‌ಟಿ ಇಳಿಸದಿರುವುದು ಆಟೋಮೊಬೈಲ್ ಕ್ಷೇತ್ರಕ್ಕೆ ಮತ್ತೆ ಹಿನ್ನಡೆ ತರುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಕೇಂದ್ರ ಬಜೆಟ್ 2019 : ಯಾವುದು ಏರಿಕೆ? ಯಾವುದು ಇಳಿಕೆ ?

Latest Videos

undefined

ಮಾಲಿನ್ಯ ನಿಯಂತ್ರಣ ಹಾಗೂ ಇಂಧನ ಆಮದು ಕಡಿಮೆ ಮಾಡಲು ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಈ ಬಜೆಟ್‌ನಲ್ಲಿ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನ ಕ್ಷೇತ್ರಕ್ಕೆ  FAME II(ವಿದ್ಯುತ್ ಮತ್ತು ಹೈಬ್ರಿಡ್ ವಾಹನ ವೇಗವಾಗಿ ಅಳವಡಿಕೆ ಮತ್ತು ತಯಾರಿಕೆ) ಯೋಜನೆಯಡಿ 10,000 ರೂಪಾಯಿ ಕೋಟಿ ತೆಗೆದಿಟ್ಟಿದೆ. ಇನ್ನು ಎಲೆಕ್ಟ್ರಿಕ್ ವಾಹನದ ಮೇಲಿನ ಜಿಎಸ್‌ಟಿ(GST) ತೆರಿಗೆಯನ್ನು 12% ರಿಂದ 5%ಕ್ಕೆ ಇಳಿಸಲಾಗಿದೆ. ಲೋನ್ ಮೂಲಕ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೆ ಆದಾಯ ತೆರಿಗೆಯಲ್ಲಿ 1.5 ಲಕ್ಷ ರೂಪಾಯಿ ವರೆಗೆ ವಿನಾಯಿತಿ ನೀಡಲಾಗಿದೆ.  ಈ ಮೂಲಕ ಗ್ರಾಹಕರಿಗೆ  2.5 ಲಕ್ಷ ರೂಪಾಯಿ ಉಳಿತಾಯವಾಗಲಿದೆ.

ಇದನ್ನೂ ಓದಿ: ಹೊಸ ಟ್ರಾಫಿಕ್ ಸಿಗ್ನಲ್ ಲೈಟ್; ಜಂಪ್ ಮಾಡಿದರೆ ಬೀಳುತ್ತೆ ಬರೆ!

ಎಲೆಕ್ಟ್ರಿಕ್ ವಾಹನ ಖರೀದಿಗೆ ಉತ್ತೇಜನ ನೀಡೋ ನಿಟ್ಟಿನಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಮೇಲಿನ ಸೆಸ್ ಬೆಲೆಯನ್ನು 1 ರೂಪಾಯಿ ಏರಿಕೆ ಮಾಡಲಾಗಿದೆ. ಹೀಗಾಗಿ ಇಂಧನದ ಬೆಲೆ ಏರಿಕೆಯಾಗಲಿದೆ. ಈ ಮೂಲಕ ಜನರು ಎಲೆಕ್ಟ್ರಿಕ್ ವಾಹನದತ್ತ ಗಮನ ಕೇಂದ್ರೀಕರಿಸಲು ಸರ್ಕಾರ ಯೋಜನೆ ಹಾಕಿದೆ. 

ಎಲೆಕ್ಟ್ರಿಕ್ ವಾಹನ ಕ್ಷೇತ್ರದ GST ತೆರಿಗೆ ಇಳಿಕೆ ಹಾಗೂ ಎಲೆಕ್ಟ್ರಿಕ್ ವಾಹನ ಖರೀದಿಸೋ ಗ್ರಾಹಕರ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡಿದ ಕಾರಣ ಎಲೆಕ್ಟ್ರಿಕ್ ವಾಹನ ಬೆಲೆ ಕಡಿಮೆಯಾಗಲಿದೆ. FAME II ಯೋಜನೆಯಡಿ ಈಗಾಗಲೇ ಕೇಂದ್ರ ಸರ್ಕಾರ ಸಬ್ಸಿಡಿ ಕೂಡ ಘೋಷಿಸಿದೆ. ಹೀಗಾಗಿ ಎಲೆಕ್ಟ್ರಿಕ್ ವಾಹನ ಖರೀದಿ ಸುಲಭವಾಗಲಿದೆ. 

ಇದನ್ನೂ ಓದಿ: ಸಂಕಷ್ಟದಲ್ಲಿ ಭಾರತೀಯ ವಾಹನ ಮಾರುಕಟ್ಟೆ - ಕಳೆದ 8 ವರ್ಷಗಳಲ್ಲಿ ಇದೇ ಮೊದಲು!

  • ಹುಸಿಯಾಯ್ತು ಆಟೋಮೊಬೈಲ್ ಕ್ಷೇತ್ರದ ನಿರೀಕ್ಷೆ 
  • 2018-19ರ ಆರ್ಥಿಕ ವರ್ಷದಲ್ಲಿ ಭಾರತ ಆಟೋಮೊಬೈಲ್ ಕ್ಷೇತ್ರ ತೀವ್ರ ಹಿನ್ನಡೆ ಅನುಭವಿಸಿತ್ತಿದೆ. ಕಳೆದ 8 ತಿಂಗಳಲ್ಲಿ ಸರಿ ಸುಮಾರು 5 ಲಕ್ಷ ಕಾರು ಹಾಗೂ 30 ಲಕ್ಷ ದ್ವಿಚಕ್ರವಾಹನಗಳು ಮಾರಾಟವಾಗದೇ ಉಳಿದಿದೆ. 2019ರ ಆರ್ಥಿಕ ವರ್ಷದಲ್ಲಿ ವಾಹನ ಮಾರಾಟದಲ್ಲಿ 17.07 ರಷ್ಟು ಇಳಿಕೆಯಾಗಿದೆ. ಹೀಗಾಗಿ ಆಟೋಮೊಬೈಲ್ ಕಂಪನಿಗಳು ಬಜೆಟ್ ಮೇಲೆ ಹಲವು  ನಿರೀಕ್ಷೆ ಇಟ್ಟುಕೊಂಡಿತು. 
  • ಇಂಧನ ವಾಹಗಳ ಮೇಲಿನ GST ತೆರಿಗೆ ಇಳಿಸುವಂತೆ ಆಟೋಕಂಪನಿಗಳ ಮನವಿಗೆ  ಬಜೆಟ್‌ನಲ್ಲಿ ಯಾವುದೇ ಸ್ಪಂದನೆ ಸಿಕ್ಕಿಲ್ಲ. 
  • 4 ಮೀಟರ್ ಉದ್ದದ ಕಾರಿನ ಮೇಲಿನ GST ತೆರಿಗೆಯನ್ನು 28%ರಿಂದ 18%ಕ್ಕೆ ಇಳಿಸುವಂತೆ SIAM(ಭಾರತದ ಆಟೋಮೊಬೈಲ್ ತಯಾರಿಕ ಸೊಸೈಟಿ) ಮನವಿ ಮಾಡಲಾಗಿತ್ತು. ಆದರೆ ಈ ಕುರಿತು ಯಾವುದೇ ದಿಟ್ಟ ಹೆಜ್ಜೆಯನ್ನು ಸರ್ಕಾರ ಇಟ್ಟಿಲ್ಲ.
  • ವಾಹನ ತಯಾರಿಕೆಗೆ ಅಲ್ಯೂಮಿನಿಯಂ, ಸ್ಟೀಲ್, ಕಬ್ಬಿಣ ಸೇರಿದಂತೆ ಕಚ್ಚಾ ವಸ್ತುಗಳ ಆಮದು ಮೇಲಿನ ತೆರಿಗೆಯನ್ನು ಇಳಿಸುವಂತೆ ಕೋರಲಾಗಿತ್ತು. ಆದರೆ ಬಜೆಟ್‌ನಲ್ಲಿ ಈ ಕುರಿತು ಯಾವುದೇ ಸ್ಪಂದನೆ ಸಿಕ್ಕಿಲ್ಲ.

ಮಾರಾಟವಾಗದೇ ಸೊರಗಿರುವ ವಾಹನಗಳು ಹಾಗೂ ಆಟೋಮೊಬೈಲ್ ಕಂಪನಿಗಳ ಹಿನ್ನಡೆಯನ್ನು ತಪ್ಪಿಸಲು ಆಟೋ ಕಂಪನಿ ಆಸೋಸಿಯೇಶನ್ ನೆರವು ಕೋರಿತ್ತು. ಆದರೆ ಎಲೆಕ್ಟ್ರಿಕ್ ವಾಹನದತ್ತ ಗಮನ ಕೇಂದ್ರೀಕರಿಸಿರುವ ಕೇಂದ್ರ ಸರ್ಕಾರ, ಆಟೋ ಕಂಪನಿಗಳ ನಿರೀಕ್ಷೆಯನ್ನು ಹುಸಿಗೊಳಿಸಿದೆ.

click me!