ಭಾರತದ ಸೈಕಲ್, ಮೋಟಾರು ವಾಹನ ಇದೀಗ ವಿಶ್ವದಲ್ಲೇ ಸದ್ದು ಮಾಡುತ್ತಿದೆ. ಇದೀಗ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಲಂಡನ್‌ನಲ್ಲಿ ಸದ್ದು ಮಾಡುತ್ತಿದೆ. ಯುಕೆ ಪ್ರಧಾನಿ ಬೊರಿಸ್ ಜಾನ್ಸನ್ ಭಾರದ ಹೀರೋ ಸೈಕಲ್ ಮೇಲೆ ಸವಾರಿ ಮಾಡಿದ್ದಾರೆ.
ಲಂಡನ್(ಜು.30): ಭಾರತದ ಹೀರೋ ಸೈಕಲ್ ಇದೀಗ ಲಂಡನ್‌ನಲ್ಲಿ ಸದ್ದು ಮಾಡುತ್ತಿದೆ. ಅದರಲ್ಲೂ ಯುಕೆ ಪ್ರಧಾನಿ ಬೊರಿಸ್ ಜಾನ್ಸನ್ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಮೇಲೆ ಸವಾರಿ ಮಾಡೋ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಇಂಗ್ಲೆಂಡ್‌ನ ನಾಟಿಂಗ್‌ಹ್ಯಾಮ್ ರಸ್ತೆಗಳಲ್ಲಿ ಬೊರಿಸ್ ಜಾನ್ಸನ್ ಹೀರೋ ವೈಕಿಂಗ್ ಪ್ರೋ ಸೈಕಲ್ ಮೇಲೆ ಸವಾರಿ ಮಾಡಿದ್ದಾರೆ.
ಚೀನಾಗೆ ಸದ್ದಿಲ್ಲದೆ ಹೊಡೆತ ನೀಡಿದ ಹೀರೋ ಸೈಕಲ್; ಕಂಗಾಲಾದ ಡ್ರ್ಯಾಗನ್ ರಾಷ್ಟ್ರ!.
ಲಂಡನ್‌ನಲ್ಲಿ ಸೈಕ್ಲಿಂಗ್ ಹಾಗೂ ವಾಕಿಂಕ್ ಅಭಿಯಾನ ಆರಂಭಿಸಲಾಗಿದೆ. ಈ ಅಭಿಯಾನದಡಿ ಬೊರಿಸ್ ಜಾನ್ಸನ್ ಮೇಡ್ ಇನ್ ಇಂಡಿಯಾ ಹೀರೋ ಸೈಕಲ್ ಏರಿ ಸವಾರಿ ಮಾಡಿದ್ದಾರೆ. ಈ ಮೂಲಕ ಇಂಗ್ಲೆಂಡ್ ಜನತೆಗೆ ಸಂದೇಶ ರವಾನಿಸಿದ್ದಾರೆ. ಆರೋಗ್ಯ, ಫಿಟ್ನೆಸ್ ಸೇರಿದಂತೆ ಹಲವು ಪ್ರಯೋಜನಕಾರಿ ಸೈಕ್ಲಿಂಕ್ ಹಾಗೂ ವಾಕಿಂಗ್ ಜನರು ರೂಢಿಸಿಕೊಳ್ಳಬೇಕು ಎಂದು ಬೊರಿಸ್ ಜಾನ್ಸನ್ ಹೇಳಿದ್ದಾರೆ.
ಬೊರಿಸ್ ಜಾನ್ಸನ್ ಟ್ವಿಟರ್ ಮೂಲಕ ಸ್ಲೈಕ್ಲಿಂಗ್ ಹಾಗೂ ವಾಕಿಂಗ್ ಅಭಿಯಾನದ ಸಂತಸ ಹಂಚಿಕೊಂಡಿದ್ದಾರೆ. ಉತ್ತಮ ಆರೋಗ್ಯ ಹಾಗೂ ಪರಿಸರಕ್ಕಾಗಿ ಸೈಕ್ಲಿಂಗ್ ಹಾಗೂ ವಾಕಿಂಗ್ ಅತ್ಯುತ್ತಮ. ಇದಕ್ಕಾಗಿ ಯುಕೆ ಸರ್ಕಾರ 2 ಬಿಲಿಯನ್ ಯೋಜನೆ ಜಾರಿಗೆ ತರುತ್ತಿದೆ ಎಂದಿದ್ದಾರೆ.
Cycling and walking have a huge role in tackling some of the health and environmental challenges that we face.
Our £2bn cycling strategy will encourage more cycling with thousands of miles of new bike lanes, and training for those who want to learn. pic.twitter.com/PwYtqXpdd1
ಕಚೇರಿ ಹಾಗೂ ತಮ್ಮ ದೈನಂದಿನ ಕೆಲಸ ಕಾರ್ಯಗಳಿಗೆ ಸೈಕಲ್ ಬಳಕೆ ಮಾಡಬೇಕು. ನಡೆಯುವುದು ರೂಢಿಸಿಕೊಳ್ಳಬೇಕು. ಸಾಂಕ್ರಾಮಿಕ ರೋಗ, ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗೆ ತುತ್ತಾಗದ ರೀತಿ ದೇಹವನ್ನು ಕಾಪಾಡಿಕೊಳ್ಳಲು ಈ ಸಣ್ಣ ಪ್ರಯತ್ನ ಮುಖ್ಯ. ಇದಕ್ಕಾಗಿ ಎಲ್ಲರೂ ಕೈಜೋಡಿಸಬೇಕು ಎಂದು ಕೊರೋನಾ ವೈರಸ್‌ನಿಂದ ಗುಣಮುಖರಾದ ಬೊರಿಸ್ ಜಾನ್ಸನ್ ಹೇಳಿದ್ದಾರೆ.