17 ವರ್ಷದಲ್ಲೇ ಮೊದಲ ಸಲ ಮಾರುತಿ ಸುಜುಕಿಗೆ ನಷ್ಟ!| 4 ಲಕ್ಷ ಬದಲಿಗೆ ಕೇವಲ 76000 ಕಾರು ಮಾರಾಟ
ನವದೆಹಲಿ(ಜು.30): ದೇಶದ ಪ್ರಸಿದ್ಧ ಕಾರು ತಯಾರಿಕಾ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾಗೆ ಕೊರೋನಾ ವೈರಸ್‌ನಿಂದ ಭಾರಿ ಹೊಡೆತ ಬಿದ್ದಿದೆ. ಜೂ.30ಕ್ಕೆ ಮುಕ್ತಾಯವಾದ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಕಂಪನಿ 268.3 ಕೋಟಿ ರು. ನಷ್ಟಅನುಭವಿಸಿದೆ. 17 ವರ್ಷಗಳ ಹಿಂದೆ ಭಾರತೀಯ ಷೇರುಪೇಟೆ ಪ್ರವೇಶಿಸಿದ್ದ ಈ ಕಂಪನಿ ನಷ್ಟಅನುಭವಿಸುತ್ತಿರುವುದು ಇದೇ ಮೊದಲು ಎಂಬುದು ಗಮನಾರ್ಹ.
ಆಗಸ್ಟ್‌ನಿಂದ ನೂತನ ವಾಹನ ಬೆಲೆ ಇಳಿಕೆ, ಖರೀದಿ ಸುಲಭ!
2019-20ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿ (ಏಪ್ರಿಲ್- ಜೂನ್)ಯಲ್ಲಿ ಮಾರುತಿ ಕಂಪನಿ 1376.8 ಕೋಟಿ ರು. ಲಾಭ ಗಳಿಸಿತ್ತು. 4,02,594 ಕಾರುಗಳನ್ನು ಮಾರಾಟ ಮಾಡಿತ್ತು. ಆದರೆ ಇದೀಗ 268.3 ಕೋಟಿ ರು. ನಷ್ಟಅನುಭವಿಸಿದೆ. ಕೇವಲ 76599 ಕಾರುಗಳನ್ನಷ್ಟೇ ಮಾರಾಟ ಮಾಡಲು ಯಶಸ್ವಿಯಾಗಿದೆ.
ಜಾಗತಿಕ ಕೊರೋನಾ ಉಪಟಳದಿಂದಾಗಿ ಇದೇ ಮೊದಲ ಬಾರಿಗೆ ಕಂಪನಿ ನಷ್ಟಅನುಭವಿಸಿದೆ. ಈ ಅವಧಿಯ ಹೆಚ್ಚಿನ ಸಮಯ ಕಂಪನಿ ಶೂನ್ಯ ಕಾರುಗಳನ್ನು ಉತ್ಪಾದಿಸಿದೆ. ಮೇ ಮಧ್ಯಭಾಗದಿಂದ ಉತ್ಪಾದನೆ ಪುನಾರಂಭಿಸಿದೆ ಎಂದು ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.