TVS Orbiter electric scooter: ಸವಾರರ ಸುರಕ್ಷತೆಗೆ ಟಿವಿಎಸ್‌ ಆರ್ಬಿಟರ್‌ ಬಿಡುಗಡೆ

Published : Oct 05, 2025, 12:27 AM IST
TVS Orbiter electric scooter price

ಸಾರಾಂಶ

ಟಿವಿಎಸ್‌ ಮೋಟಾರ್‌ ಕಂಪನಿಯು ತನ್ನ ಐ ಕ್ಯೂಬ್‌ ಸರಣಿಯ ಹೊಸ 'ಆರ್ಬಿಟರ್' ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. ನಗರ ಸವಾರರ ಸುರಕ್ಷತೆ  ಗಮನದಲ್ಲಿಟ್ಟುಕೊಂಡು ವಿನ್ಯಾಸ. ಈ ವಾಹನವು, ಅಪಘಾತದ ಸಂದರ್ಭ ಸಂದೇಶ ಕಳುಹಿಸುವಿಕೆ, ಹಿಲ್ ಅಸಿಸ್ಟ್‌ನಂತಹ ವೈಶಿಷ್ಟ್ಯ. 135 ಕಿ.ಮೀ. ಮೈಲೇಜ್ ನೀಡುತ್ತದೆ.

ಪ್ರಶಾಂತ ಕೆ.ಪಿ.

ಹೊಸೂರು (ಅ.5):ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಭಾರತದಲ್ಲಿಯೇ ಅತ್ಯುತ್ತಮ ಹೆಸರು ಪಡೆದಿರುವ ಟಿವಿಎಸ್‌ ಮೋಟಾರ್‌ ಕಂಪನಿಯು ಹೊಸ ಎಲೆಕ್ಟ್ರಿಕ್‌ ವಾಹನ ‘ಆರ್ಬಿಟರ್‌’ ಬಿಡುಗಡೆ ಮಾಡಿದೆ. ಇದರೊಂದಿಗೆ ಐ ಕ್ಯೂಬ್‌ ಸರಣಿಗೆ ಮತ್ತೊಂದು ವಾಹನ ಸೇರ್ಪಡೆ ಆಗಿದೆ. ಆರ್ಬಿಟರ್ ದ್ವಿಚಕ್ರ ವಾಹನವನ್ನು ವಿನ್ಯಾಸಗೊಳಿಸಿರುವುದೇ ಸವಾರರ ಸುರಕ್ಷತೆಗಾಗಿ. ನಗರಗಳಲ್ಲಿ ದಿನ ನಿತ್ಯದ ಓಡಾಟಕ್ಕಾಗಿಯೇ ತಯಾರಿಸಲಾಗಿದೆ. ಇದರಲ್ಲಿ ನೀವು ಹೆಚ್ಚು ಸುರಕ್ಷಿತವಾಗಿ ಚಲಿಸಬಹುದು.

ಎಲೆಕ್ಟ್ರಿಕ್ ವಾಹನವಾಗಿರುವ ಆರ್ಬಿಟರ್‌ ಕಳ್ಳತನವಾದರೆ ಆಥವಾ ಅಪಘಾತವಾದರೆ ತಕ್ಷಣ ನೀವು ನೀಡಿರುವ ಮೊಬೈಲ್‌ ಸಂಖ್ಯೆಗೆ ತಕ್ಷಣ ಮೆಸೇಜ್‌ ಮತ್ತು ವಾಟ್ಸಪ್‌ನಲ್ಲಿ ಸಂದೇಶಗಳನ್ನು ಕಳುಹಿಸುತ್ತದೆ. ಇದರಿಂದ ಅಪಘಾತಕ್ಕೀಡಾದ ವ್ಯಕ್ತಿಗೆ ತಕ್ಷಣ ಚಿಕಿತ್ಸೆ ಸೇರಿದಂತೆ ಇನ್ನಿತರ ನೆರವು ನೀಡಲು ಸಹಾಯವಾಗುತ್ತದೆ. ಅಲ್ಲದೆ ಈ ಆರ್ಬಿಟರ್‌ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 14 ಇಂಚಿನ ಮುಂಭಾಗದ ಚಕ್ರವನ್ನು ವಿನ್ಯಾಸ ಮಾಡಲಾಗಿದೆ. ಸ್ವಲ್ಪ ಅಗಲವಾಗಿರುವ ಚಕ್ರವು ರಸ್ತೆ ಮೇಲಿನ ಹಿಡಿತ ಸಾಧಿಸಲು ಸಹಾಯಕವಾಗಿದೆ. ಸವಾರರ ಬೆನ್ನಿನ ನೋವು ಬಾರದಂತೆ ತಡೆಯಲು ಆಸನ (ಸೀಟ್)ಅನ್ನು ವಿನ್ಯಾಸ ಮಾಡಲಾಗಿದ್ದು, ಉದ್ದವಾಗಿದೆ. ಇದರಿಂದ ಹಿಂಬದಿ ಸವಾರರು ಮುಂದಿನ ಸವಾರನ ಮೇಲೆ ಒರಗಿ ಕೂರುವ ಅಗತ್ಯ ಇರುವುದಿಲ್ಲ.

ಆರ್ಬಿಟರ್ ಕೇವಲ ನಗರಕ್ಕಷ್ಟೇ ಸೀಮಿತಗೊಳಿಸಿಲ್ಲ. ಇದನ್ನು ಗುಡ್ಡಗಾಡು ರಸ್ತೆಗಳಲ್ಲಿಯೂ ಓಡಿಸಬಹುದು. ಅದಕ್ಕಾಗಿ ಹಿಲ್‌ ಅಸಿಸ್ಟ್‌ ಎನ್ನುವ ವ್ಯವಸ್ಥೆಯನ್ನು ಆರ್ಬಿಟರ್‌ನಲ್ಲಿ ಅಳವಡಿಸಲಾಗಿದೆ. ಹಿಲ್‌ ಅಸಿಸ್ಟ್‌ ಅನ್ನು ಆನ್‌ ಮಾಡಿದರೆ ಆರ್ಬಿಟರ್‌ ಹಿಮ್ಮುಖವಾಗಿ ಅಥವಾ ಮುಂಬದಿಗೆ ಎಕ್ಸಲೇಟರ್‌ ತಿರುಗಿಸದೆ ಚಲಿಸುವುದಿಲ್ಲ. ಇದರಿಂದ ಬೀಳುವ ಅಥವಾ ಅಪಘಾತ ಆಗುವ ಸಾಧ್ಯತೆ ಕಡಿಮೆ. ಅಲ್ಲದೆ ಆರ್ಬಿಟರ್‌ ಚಲಾಯಿಸಲು ‘ಮೋಡ್‌’ಗಳಿವೆ. ಸಿಟಿ ಮೋಡ್‌ನಲ್ಲಿ ಆರ್ಬಿಟರ್‌ 55 ಕಿ.ಮೀ. ವೇಗದಲ್ಲಿ ಓಡುತ್ತದೆ. ಎಕಾನಮಿ ಮೋಡ್‌ನಲ್ಲಿ 35ರಿಂದ 40 ಕಿ.ಮೀ. ಚಲಾಯಿಸಬಹುದು. ಎಕಾನಮಿ ಮೋಡ್‌ನಲ್ಲಿ ವಾಹನದ ಬ್ಯಾಟರಿ ದಕ್ಷತೆ ಹೆಚ್ಚಿರುತ್ತದೆ.ಆರ್ಬಿಟರ್‌ನಲ್ಲಿ 3.1 ಕಿಲೋ ವ್ಯಾಟ್‌ ಬ್ಯಾಟರಿ ಇದ್ದು, 158 ಕಿ.ಮೀ. ದೂರ ಚಲಾಯಿಸಬಹುದು. ಆದರೆ ನಗರ ಪ್ರದೇಶದಲ್ಲಿ 135 ಕಿ.ಮೀ. ಮೈಲೇಜ್‌ ಖಚಿತವಾಗಿ ಸಿಗುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಅಲ್ಲದೆ 34 ಲೀಟರ್‌ ಬೂಟ್‌ ಸ್ಪೇಸ್‌ ಇದೆ. ಇದರಲ್ಲಿ 2 ಹೆಲ್ಮೆಟ್‌ಗಳನ್ನು ಆರಾಮವಾಗಿ ಇಡಬಹುದು.

ಬೆಂಗಳೂರು, ದೆಹಲಿ ಸೇರಿದಂತೆ ಇನ್ನಿತರ ನಗರಗಳಲ್ಲಿ ₹99,900 ಎಕ್ಸ್‌ ಶೋರೂಮ್‌ಗಳಲ್ಲಿ ಬೆಲೆ ನಿಗದಿ ಪಡಿಸಲಾಗಿದೆ. ಆರ್ಬಿಟರ್‌ ದ್ವಿಚಕ್ರ ವಾಹನ ಬಿಡುಗಡೆ ಕಾರ್ಯಕ್ರಮದಲ್ಲಿ ಟಿವಿಎಸ್ ಮೋಟಾರ್ ಕಂಪನಿಯ ಇಂಡಿಯಾ 2 ಡಬ್ಲ್ಯೂ ಬ್ಯುಸಿನೆಸ್ ಅಧ್ಯಕ್ಷ ಗೌರವ್ ಗುಪ್ತಾ, ಕಂಪನಿಯ ಹಿರಿಯ ಉಪಾಧ್ಯಕ್ಷ - ಮುಖ್ಯ ಪ್ರಯಾಣಿಕ ಮತ್ತು ವಿದ್ಯುತ್ ವಾಹನ ವ್ಯವಹಾರ ಮತ್ತು ಕಾರ್ಪೊರೇಟ್ ಬ್ರಾಂಡ್ ಮತ್ತು ಮಾಧ್ಯಮ ಮುಖ್ಯಸ್ಥ ಅನಿರುದ್ಧ ಹಲ್ದಾರ್ ಇದ್ದರು.

PREV
Read more Articles on
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ