TVS ಅಪಾಚೆ RTR 200 4V ಬೈಕ್ ಬಿಡುಗಡೆ!

Published : Sep 22, 2020, 02:26 PM IST
TVS ಅಪಾಚೆ RTR 200 4V ಬೈಕ್ ಬಿಡುಗಡೆ!

ಸಾರಾಂಶ

TVS ಮೋಟಾರ್ ಕಂಪನಿಯ ಜನಪ್ರಿಯ ಬೈಕ್ TVS ಅಪಾಚೆ  RTR 200 4V ಬೈಕ್ ಬಿಡುಗಡೆಯಾಗಿದೆ. ಸೂಪರ್ ಮೊಟೋ ABS ತಂತ್ರಜ್ಞಾನ ಹಾಗೂ ಅತ್ಯಾಕರ್ಷಕ 2 ಬಣ್ಣಗಳಲ್ಲಿ ನೂತನ ಬೈಕ್ ಲಭ್ಯವಿದೆ. ಈ ಬೈಕ್ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.

ನವದೆಹಲಿ(ಸೆ.22):  TVS ಮೋಟಾರ್ ಭಾರತದಲ್ಲಿ ಅತ್ಯಂತ ಜನಪ್ರಿಯ ಹಾಗೂ ಗ್ರಾಹಕರ ನೆಚ್ಚಿನ ಬೈಕ್ ಉತ್ಪಾದನೆ ಮಾಡುತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. TVS ಬೈಕ್‌ಗಳಲ್ಲಿ ಅತ್ಯಂತ ಜನಪ್ರಿಯವಾಗಿರುವ ಅಪಾಚೆ ಇದೀಗ ಹೆಚ್ಚುವರಿ ಫೀಚರ್ಸ್ ಹಾಗೂ ವಿನೂತನ ತಂತ್ರಜ್ಞಾನಗಳೊಂದಿಗೆ ಬಿಡುಗಡೆಯಾಗಿದೆ. TVS ಅಪಾಚೆ RTR 200 4V ಬೈಕ್ ಭಾರತದ ಮಾರುಕಟ್ಟೆ ಪ್ರವೇಶಿಸಿದೆ.

ಕೊರೋನಾ ವಿರುದ್ಧ ಹೋರಾಡುತ್ತಿರುವ ಬೆಂಗಳೂರು ಪೊಲೀಸರಿಗೆ TVS ಮೋಟಾರ್ ಸಾಥ್!

ಸೂಪರ್ ಮೊಟೊ ABS ಬ್ರೇಕ್ ಸಿಂಗಲ್ ಚಾನೆಲ್ ಹಾಗೂ ಡ್ಯುಯೆಲ್ ಚಾನೆಲ್ ABS ಬ್ರೇಕ್ ಆಯ್ಕೆಗಳು ಲಭ್ಯವಿದೆ. ಸಿಂಗಲ್ ಚಾನೆಲ್ ABS ಬೈಕ್ ಬೆಲೆ 1,23,500 ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಡ್ಯುಯೆಲ್ ಚಾನೆಲ್ ABS ಬೈಕ್ ಬೆಲೆ 1,28,550 ರೂಪಾಯಿ(ಎಕ್ಸ್ ಶೋ ರೂಂ). ಇನ್ನೂ ಪರ್ಲ್ ವೈಟ್ ಹಾಗೂ ಗ್ಲಾಸ್ ಬ್ಲಾಕ್ ಬಣ್ಣದಲ್ಲಿ ಬೈಕ್ ಲಭ್ಯವಿದೆ.

ಆಧುನಿಕ ತಂತ್ರಜ್ಞಾನದೊಂದಿಗೆ TVS ಅಪಾಚೆ ಬೈಕ್ ಬಿಡುಗಡೆ!

TVS ಅಪಾಚೆ  RTR 200 4V ಬೈಕ್ 197.75 cc, ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, 4 ವೇಲ್ವ್,, ಆಯಿಲ್ ಕೂಲ್ಡ್ ಹಾಗೂ ಫ್ಯುಯೆಲ್ ಇಂಜೆಕ್ಷನ್(RT-Fi) ಎಂಜಿನ್ ಹೊಂದಿದೆ. ಇದು  20.2 bhp ಗರಿಷ್ಠ ಪವರ್ ಹಾಗೂ  16.8 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ನೂತನ ಬೈಕ್ TVS SmartXonnect ಟೆಕ್ನಾಲಜಿ ಹೊಂದಿದೆ. ಈ ಮೂಲಕ ಸ್ಮಾರ್ಟ್ ಫೋನ್ ಕೆನೆಕ್ಟಿವಿಟಿ, ನ್ಯಾವಿಗೇಶನ್, ಇನ್‌ಕಮಿಂಗ್ ಕಾಲ್, SMS ಗಳನ್ನು SmartXonnect ಟೆಕ್ನಾಲಜಿ ಡಿಸ್‌ಪ್ಲೇ ಮಾಡಲಿದೆ. LED ಹೆಡ್‌ಲೈಟ್, ಗರಿಷ್ಠ ಸುರಕ್ಷತೆಯ ಸ್ಲಿಪ್ಪರ್ ಕ್ಲಚ್ ಆಯ್ಕೆ ಹೊಂದಿದೆ.

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ