ಲೀಸ್ ಮೂಲಕ ಕಾರು; ಟಾಟಾ ನೆಕ್ಸಾನ್ EV ಮೇಲೆ ಭರ್ಜರಿ ಆಫರ್!

By Suvarna News  |  First Published Sep 21, 2020, 7:07 PM IST

ಹಬ್ಬದ ಪ್ರಯುಕ್ತ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಮೇಲೆ ಭರ್ಜರಿ ಆಫರ್ ಘೋಷಿಸಿದೆ. ಆರಂಭಿಕ 100 ಮಂದಿಗೆ ವಿಶೇಷ ಆಫರ್ ಮೂಲಕ ಲೀಸ್‌ಗೆ ಕಾರು ನೀಡುತ್ತಿದೆ. ನೂತನ ಆಫರ್ ಕುರಿತ ಹೆಚ್ಚಿನ ವಿವರ ಇಲ್ಲಿದೆ.


ಬೆಂಗಳೂರು(ಸೆ.21); ಸಾಲು ಸಾಲು ಹಬ್ಬಕ್ಕೆ ಟಾಟಾ ಮೋಟಾರ್ಸ್ ಇದೀಗ ವಿಶೇಷ ಕೊಡುಗೆ ನೀಡಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಇದೀಗ ಲೀಸ್(ಚಂದಾದಾರಿಕೆ) ಲಭ್ಯವಿದೆ. ಆರಂಭಿಕ 100 ಮಂದಿಗೆ ಮಾತ್ರ ಈ ಆಫರ್ ನೀಡಲಾಗಿದೆ.  ಈ ಆಫರ್ ಮೂಲಕ ಕಾರು ಪಡೆಯುವ ಗ್ರಾಹಕರು ವಿಮೆ, ರಸ್ತೆ ತೆರಿಗೆ, ರಿಜಿಸ್ಟ್ರೇಶನ್, ನಿರ್ವಹಣೆ ಸೇರಿದಂತೆ ಯಾವುದರ ಕುರಿತು ತಲೆಕೆಡಿಸಿಕೊಳ್ಳಬೇಕಿಲ್ಲ. ತಿಂಗಳ ಲೀಸ್‌ ಕಟ್ಟಿದರೆ ಸಾಕು.

ಹ್ಯುಂಡೈ, MG ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!.

Tap to resize

Latest Videos

undefined

ತಿಂಗಳಿಗೆ 34,900  ರೂಪಾಯಿ  ಚಂದಾದಾರಿಕೆ ಮೂಲಕ ಹೊಚ್ಚ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಪಡೆಯಬಹುದು. ಕಾರು ಲೀಸ್ ಅವಧಿ  ಕನಿಷ್ಠ 12 ತಿಂಗಳಿಂದ 24 ಮತ್ತು 36 ತಿಂಗಳವರೆಗೆ ಆಯ್ಕೆ ಮಾಡಬಹುದು. ಆರಂಭಿಕ ಹಂತದಲ್ಲಿ ಪ್ರಮುಖ 5 ನಗರಗಳಲ್ಲಿ ಲಭ್ಯವಿದೆ. ದೆಹಲಿ /NCR, ಮುಂಬೈ, ಪುಣೆ, ಹೈದರಾಬಾದ್ ಮತ್ತು ಬೆಂಗಳೂರಿನ 5 ಪ್ರಮುಖ ನಗರಗಳಲ್ಲಿ ಈ ಸೇವೆಯನ್ನು ನೀಡಲಾಗುತ್ತಿದೆ.

ಒರಿಕ್ಸ್ ಆಟೋ ಸಹಭಾಗಿತ್ವದಲ್ಲಿ ನೀಡಲಾಗುವ ಈ ಚಂದಾದಾರಿಕೆ ಪ್ಯಾಕೇಜ್ ಸಮಗ್ರ ವಿಮಾ ರಕ್ಷಣೆ, ಆನ್-ಕಾಲ್ 24x7 ರೋಡ್ ಸೈಡ್ ಅಸಿಸ್ಟೆನ್ಸ್ ಸಿಗಲಿದೆ.  ಮನೆ ಬಾಗಿಲಿನ ವಿತರಣೆಯೊಂದಿಗೆ ಉಚಿತ ನಿರ್ವಹಣೆಯನ್ನು ಒಳಗೊಂಡಿದೆ. ಕಾರು ಪಡೆಯುವ ಗ್ರಾಹಕರ ಮನೆಯಲ್ಲಿ ಉಚಿತವಾಗಿ ಚಾರ್ಜಿಂಗ್ ಮಾಡಲು ಚಾರ್ಜರ್ ಅಳವಡಿಸುವುದಾಗಿ ಟಾಟಾ ಹೇಳಿದೆ.   ಚಂದಾದಾರಿಕೆ ಅಥವಾ ಲೀಸ್ ಅವಧಿ ಮುಕ್ತಾಯದಾವದರೆ ಕಾರು ಹಿಂತಿರುಗಿಸಿಬಬಹುದು ಅಥವ ನವೀಕರಿಸಬಹುದು. 

click me!