ಲುಂಗಿ ಧರಿಸಿದರೆ ಲಾರಿ ಚಾಲಕರಿಗೆ 2000 ರು. ದಂಡ!

By Web DeskFirst Published Sep 11, 2019, 9:47 AM IST
Highlights

ಬದಲಾದ ಟ್ರಾಫಿಕ್ ನಿಯಮ| ಸ್ಲಿಪ್ಪರ್ಸ್ ಧರಿಸುವಂತಿಲ್ಲ, ಈಗ ಲುಂಗಿ ಧರಿಸಿದ್ರೂ ದಂಡ| ಹೊಸ ರೂಲ್ಸ್‌ಗೆ ಸಾರ್ವಜನಿಕರ ಆಕ್ರೋಶ

ಲಖನೌ[ಸೆ.11]: ದೂರದ ಸ್ಥಳಗಳಿಗೆ ತೆರಳುವ ಟ್ರಕ್ ಹಾಗೂ ಲಾರಿ ಚಾಲಕರು ಆರಾಮದಾಯಕವಾಗಿರಲಿದೆ ಎಂಬ ಕಾರಣಕ್ಕೆ ಲುಂಗಿ ಧರಿಸುವುದು ಮಾಮೂಲಿ ಸಂಗತಿ. ಆದರೆ, ಉತ್ತರ ಪ್ರದೇಶದಲ್ಲಿ ಇನ್ನುಮುಂದೆ ಲಾರಿ ಚಾಲಕರು ಲುಂಗಿ ಧರಿಸುವಂತೆ ಇಲ್ಲ.

6 ಟ್ರಾಫಿಕ್ ನಿಯಮ; ತಿಳಿದುಕೊಳ್ಳಿ ದಂಡ ಕಟ್ಟೋ ಮುನ್ನ!

ಒಂದು ವೇಳೆ ಲುಂಗಿ ಧರಿಸಿ ವಾಹನ ಚಲಾಯಿಸಿದ್ದು ಕಂಡು ಬಂದರೆ 2000 ರು. ದಂಡ ಬೀಳುವುದು ಗ್ಯಾರೆಂಟಿ. ನೂತನ ಮೋಟಾರ್ ವಾಹನ ಕಾಯ್ದೆ ಅಡಿ ವಾಣಿಜ್ಯ ವಾಹನ ಚಾಲಕರು, ಸಹಾಯಕರು ಪ್ಯಾಂಟ್ ಹಾಗೂ ಶರ್ಟ್/ ಟಿ-ಶರ್ಟ್‌ಗಳನ್ನು ಧರಿಸುವುದು ಕಡ್ಡಾಯವಾಗಿದೆ.

ಹವಾಯಿ ಚಪ್ಪಲ್, ಸ್ಲಿಪ್ಪರ್ ಹಾಕಿ ದ್ವಿಚಕ್ರ ವಾಹನ ಓಡಿಸಿದರೆ ಫೈನ್!

ವಾಹನ ಓಡಿಸುವಾಗ ಶೂ ಧರಿಸಬೇಕು. ಈ ನಿಯಮ ಉತ್ತರ ಪ್ರದೇಶದಲ್ಲಿ ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದ್ದು, ವಾಹನ ಚಾಲಕರು ವಸ್ತ್ರ ಸಂಹಿತೆ ಪಾಲಿಸದೇ ಇದ್ದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಬಹುದಾಗಿದೆ. ಈ ಹಿಂದೆಯೂ ಈ ನಿಯಮ ಜಾರಿಯಲ್ಲಿತ್ತು. ಆದರೆ, ಕಟ್ಟುನಿಟ್ಟಾಗಿ ಜಾರಿ ಮಾಡಿರಲಿಲ್ಲ.

click me!