ರಾಂಗ್ ಸೈಡ್ ಡ್ರೈವ್ ಮಾಡಿದರೆ ಲೈಸೆನ್ಸ್ ಕ್ಯಾನ್ಸಲ್-ಹೊಸ ನಿಯಮ!

By Web DeskFirst Published Dec 23, 2018, 11:17 AM IST
Highlights

ಈ ಹಿಂದೆ 5 ಬಾರಿ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿದರೆ ಲೈಸೆನ್ಸ್ ರದ್ದಾಗೋ ನಿಯಮವಿತ್ತು. ಆದರೆ ಈ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ. ಇದೀಗ ಒಂದು ಬಾರಿ ರಾಂಗ್ ಸೈಡ್‌ನಲ್ಲಿ ಹೋದರೆ ಸಾಕು ಲೈಸೆನ್ಸ್ ಕ್ಯಾನ್ಸಲ್ ಆಗಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

ಅಹಮ್ಮದಬಾದ್(ಡಿ.23): ರಸ್ತೆ ನಿಯಮ ಹೇಗಿದ್ದರೂ ನಾವು ಹೀಗೆ ಎಂದು ಡ್ರೈವ್ ಮಾಡುವವರ ಸಂಖ್ಯೆ ಜಾಸ್ತಿ. ಇದಕ್ಕೆ ಕಡಿವಾಣ ಹಾಕಲು ಇದೀಗ ಗುಜರಾತ್‌ನಲ್ಲಿ ಹೊಸ ನಿಯಮ ಜಾರಿಗೆ ತಂದಿದ್ದಾರೆ. ರಾಂಗ್ ಸೈಡ್‌ನಲ್ಲಿ ಡ್ರೈವಿಂಗ್ ಮಾಡಿದರೆ ನಿಮ್ಮ ಡ್ರೈವಿಂಗ್ ಲೆಸೆನ್ಸ್ ಕ್ಯಾನ್ಸಲ್ ಆಗಲಿದೆ. ಇಷ್ಟೇ ಅಲ್ಲ ಜೀವನಪೂರ್ತಿ ಮತ್ತೆ ಲೈಸೆನ್ಸ್ ಅವಕಾಶವಿಲ್ಲ.

ಇದನ್ನೂ ಓದಿ: ರಸ್ತೆ ನಿಯಮ ಪಾಲನೆಯಲ್ಲಿ ಭಾರತೀಯರು ಲಾಸ್ಟ್- ಸಮೀಕ್ಷೆ ಬಹಿರಂಗ!

ಅಹಮ್ಮದಬಾದ್ ನಗರದಲ್ಲಿ ವಿರುದ್ದ ದಿಕ್ಕಿನಲ್ಲಿ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಹೆಚ್ಚಿನ ಅಪಘಾತ ಕೂಡ ಸಂಭವಿಸುತ್ತಿದೆ. ಇಷ್ಟೇ ಅಲ್ಲ ಟ್ರಾಫಿಕ್ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಹೆಚ್ಚಿನವರು ಪಾಲಿಸುತ್ತಿಲ್ಲ. ಇದಕ್ಕಾಗಿ ಇದೀಗ ನಿಯಮದಲ್ಲಿ ತಿದ್ದುಪಡಿ ತರಲಾಗಿದೆ.

ಇದನ್ನೂ ಓದಿ: 2019ರಿಂದ ಕಾರು ಖರೀದಿ ಕಷ್ಟ-ಈಗಲೇ ಮುಗಿಸಿಕೊಳ್ಳಿ ವ್ಯವಹಾರ!

ನೂತನ ನಿಯಮದ ಪ್ರಕಾರ, ಒಂದು ಬಾರಿ ರಾಂಗ್ ಸೈಡ್‌ನಲ್ಲಿ ಡ್ರೈವ್ ಮಾಡಿದರೂ ಬ್ಲಾಕ್ ಲಿಸ್ಟ್‌ಗೆ ಸೇರ್ಪಡೆಯಾಗಲಿದೆ. ಇಷ್ಟೇ ಅಲ್ಲ ಲೈಸೆನ್ಸ್ ರದ್ದಾಗಲಿದೆ. ಇದಕ್ಕಾಗಿ ಒನ್ ವೇಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಈ ಹಿಂದೆ 5 ಬಾರಿ ರಾಂಗ್ ಸೈಡ್‌ನಲ್ಲಿ ವಾಹನ ಚಲಾಯಿಸಿದರೆ ಲೈಸೆನ್ಸ್ ರದ್ದಾಗೋ ನಿಯಮವಿತ್ತು. ಇದೀಗ ಒಂದು ಬಾರಿ ರಾಂಗ್ ಸೈಡ್‌ನಲ್ಲಿ ಹೋದರೆ ಸಾಕು ಲೈಸೆನ್ಸ್ ರದ್ದಾಗಲಿದೆ. 

ಆಟೋಮೊಬೈಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!