ಸವೆದಿರುವ ಟೈರ್‌ಗೂ ದಂಡ ಬೀಳುತ್ತೆ!

By Kannadaprabha News  |  First Published Sep 10, 2019, 7:45 AM IST

ದೇಶದಲ್ಲಿ ಜಾರಿಯಾಗಿರುವ ಭಾರಿ ಟ್ರಾಫಿಕ್ ದಂಡವು ಸವೆದ ಟೈರ್ಗಳಿಗೂ ಬೀಳುತ್ತೆ. ವಾಹನ ಸವಾರರೇ ಎಚ್ಚರ!


ಬೆಂಗಳೂರು [ಸೆ.10]:  ಸವೆದು ಹೋಗಿರುವ ಚಕ್ರಗಳಲ್ಲೇ ವಾಹನ ಓಡಿಸುತ್ತಿದ್ದರೆ ಜನರೇ ಎಚ್ಚೆತ್ತುಕೊಳ್ಳಿ!

ಈಗ ಹೆಲ್ಮಟ್‌ ಧರಿಸದೆ, ಸೀಟ್‌ ಬೆಲ್ಟ್‌ ಹಾಕದೆ, ಮದ್ಯ ಸೇವಿಸಿ ಚಾಲನೆ ಮಾಡಿದರೆ ಮಾತ್ರವಲ್ಲ ವಾಹನಗಳಿಗೆ ಹಳೆಯ ಟೈರ್‌ ಬಳಸಿದರೂ ದಂಡ ಪ್ರಯೋಗವಾಗುತ್ತದೆ. ಈಗಾಗಲೇ ನಗರದಲ್ಲಿ ಹೊಸ ಸಂಚಾರ ದಂಡ ಅನ್ವಯ ವ್ಯಕ್ತಿಯೊಬ್ಬನಿಗೆ 500 ರು. ದಂಡ ಹಾಕಲಾಗಿದೆ.

Tap to resize

Latest Videos

ನೂತನ ಟ್ರಾಫಿಕ್ ರೂಲ್ಸ್; ಪೊಲೀಸರ ತಪಾಸಣೆ ವಿಡಿಯೋ ರೆಕಾರ್ಡ್ ಮಾಡಬಹುದೆ?

ಸವೆದು ಹೋಗಿರುವ ಚಕ್ರಗಳು ಬಳಸುವುದರಿಂದಲೂ ಅಪಘಾತ ಕಾರಣವಾಗುತ್ತದೆ. ಮಳೆಯಾದರೆ ಸವೆದ ಚಕ್ರಗಳ ನಿಯಂತ್ರಣ ಕಳೆದುಕೊಳ್ಳುತ್ತವೆ. ಇದರಿಂದ ಅವಘಡಗಳಿಗೆ ಎಡೆ ಮಾಡಿಕೊಟ್ಟು, ಪ್ರಾಣಕ್ಕೂ ಕುತ್ತಾಗಬಹುದು. ಹೀಗಾಗಿ ನಿಯಮಿತವಾಗಿ ಚಕ್ರಗಳನ್ನು ಬದಲಾಯಿಸಿ ಸಂಚಾರ ನಿಯಮ ಪಾಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.

click me!