ಬ್ರೆಜಾ, ನೆಕ್ಸಾನ್ ಪ್ರತಿಸ್ಪರ್ಧಿ; ಬರುತ್ತಿದೆ ಟೊಯೊಟಾ SUV ಕಾರು!

By Chethan KumarFirst Published Jul 21, 2019, 5:51 PM IST
Highlights

ಮಾರುತಿ ಸುಜುಕಿ ಸಂಸ್ಥೆಯ ಕಾರಗಳನ್ನು ಕ್ರಾಸ್ ಬ್ಯಾಡ್ಜಿಂಗ್ ಮೂಲಕ ಟೊಯೊಟಾ ಸಂಸ್ಥೆ ಬಿಡುಗಡೆ ಮಾಡುತ್ತಿದೆ. ಇದರ ಬೆನ್ನಲ್ಲೇ ನೂತನ SUV ಕಾರು ಬಿಡುಗಡೆ ಮಾಡಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ SUV ಕಾರುಗಳಿಗೆ ಪೈಪೋಟಿ ಮತ್ತಷ್ಟು ಹೆಚ್ಚಾಗಲಿದೆ. ನೂತನ ಕಾರಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.

ನವದೆಹಲಿ(ಜು.21): ಭಾರತದಲ್ಲಿ ಇತ್ತಿಗಷ್ಟೇ ಹ್ಯುಂಡೈ ವೆನ್ಯೂ ಸಬ್ ಕಾಂಪಾಕ್ಟ್ Suv ಕಾರು ಬಿಡುಗಡೆಯಾಗಿದೆ. ಈ ಮೂಲಕ ಸಬ್ ಕಾಂಪಾಕ್ಟ್ SUV ಕಾರಿನ ಪೈಪೋಟಿ ಮತ್ತಷ್ಟು ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಇದೀಗ ಟೊಯೊಟಾ ಕೂಡ SUV ಕಾರು ಬಿಡುಗಡೆ ಮಾಡುತ್ತಿದೆ. ಟಾಟಾ ನೆಕ್ಸಾನ್ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಕಾರು ಬಿಡುಗಡೆಯಾಗಲಿದೆ.

ಇದನ್ನೂ ಓದಿ: 3 ಸೆಕೆಂಡ್ ನಿಯಮ; ಚಾಲಕರು ಪಾಲಿಸಲೇಬೇಕು ಈ ರೂಲ್ಸ್!

ಟೊಯೊಟಾ ಸಬ್ 4ಮೀಟರ್ ಕಂಪಾಕ್ಟ್ SUV ಕಾರು ಇದೇ ನವೆಂಬರ್ ತಿಂಗಳಲ್ಲಿ ಅನಾವರಣಗೊಳ್ಳಲಿದೆ. ಡೈಹ್ಯಟ್ಸು ಹಾಗೂ ಟೊಯೊಟಾ ಜಂಟಿಯಾಗಿ ಈ ಕಾರು ಬಿಡುಗಡೆ ಮಾಡಲಿದೆ.  ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರ XUV300, ಫೋರ್ಡ್ ಇಕೋಸ್ಪೋರ್ಟ್, ಹ್ಯುಂಡೈ ವೆನ್ಯೂ ಸೇರಿದಂತೆ SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಮೀನು ಊಟಕ್ಕೆ ಕಾರು ನಿಲ್ಲಿಸಿದ ಮೇಯರ್‌ಗೆ 10 ಸಾವಿರ ರೂ. ದಂಡ!

ಟೊಯೊಟಾ ಈಗಾಗಲೇ ಮಾರುತಿ ಸುಜುಕಿ ಸಂಸ್ಥೆ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಕ್ರಾಸ್ ಬ್ಯಾಡ್ಜಿಂಗ್  ಮೂಲಕ ಮಾರುತಿ ಸುಜುಕಿ ಬಲೆನೋ ಕಾರು ಇದೀಗ ಟೊಯೊಟಾ ಗ್ಲಾಂಜಾ ಕಾರಾಗಿ ಬಿಡುಗಡೆಯಾಗಿದೆ. ಇನ್ನು ಬ್ರೆಜಾ ಕೂಡ ಟೊಯೊಟಾ ಕಾರಾಗಿ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ ನೂತನ SUV ಕಾರು ನಿರ್ಮಾಣಕ್ಕೆ ಮುಂದಾಗಿದೆ.

click me!