ಹೊಸ ರೂಪದಲ್ಲಿ ಟಯೋಟಾ ಫಾರ್ಚುನರ್ SUV ಬಿಡುಗಡೆಗೆ ರೆಡಿ!

By Suvarna NewsFirst Published May 31, 2020, 3:17 PM IST
Highlights

ಕೊರೋನಾ ವೈರಸ್ ಬಳಿಕ ವಿಶ್ವದೆಲ್ಲಡೆ ಕಾರುಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಸಾರ್ವಜನಿ ಸಾರಿಗೆ ವಾಹನಗಳನ್ನು ಬಳಸಲು ಜನರು ಹಿಂದೇಟು ಹಾಕುತ್ತಿದ್ದಾರೆ. ಸುರಕ್ಷಿತ ಪ್ರಯಾಣಕ್ಕೆ ಕಾರುಗಳ ಮೊರೆ ಹೋಗುತ್ತಿದ್ದಾರೆ. ಇತ್ತ ಕಾರು ಕಂಪನಿಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಟೊಯೋಟಾ ಫಾರ್ಚುನರ್ ಹೊಸ ರೂಪದಲ್ಲಿ ಈ ವಾರ ಬಿಡುಗಡೆಯಾಗುತ್ತಿದೆ.

ನವದೆಹಲಿ(ಮೇ.31):  ಸರಿಸುಮಾರು ಒಂದು ವರ್ಷದಿಂದ ನೂತನ ಫೇಸ್‌ಲಿಫ್ಟ್ ಟೊಯೋಟಾ ಫಾರ್ಚುನರ್ ಕಾರು ರೋಡ್ ಟೆಸ್ಟ್ ಸೇರಿದಂತೆ ಹಲವು ಟೆಸ್ಟ್ ನಡೆಸುತ್ತಿದೆ. ಇದೀಗ ಎಲ್ಲಾ ಟೆಸ್ಟ್ ಪೂರ್ಣಗೊಳಿಸಿರುವ ಟೊಯೋಟಾ ಫಾರ್ಚುನರ್ ಫೇಸ್‌ಲಿಫ್ಟ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಈ ವಾರದಲ್ಲಿ ನೂತನ Toyota Fortuner ಕಾರು ಮಾರುುಕಟ್ಟೆ ಪ್ರವೇಶಿಸಲಿದೆ.

ಆಕರ್ಷಕ ಲುಕ್‌ನಲ್ಲಿ ಟೊಯೋಟಾ ಯಾರಿಸ್ ಕ್ರಾಸ್ ಕಾರು ಅನಾವರಣ!.

ನೂತನ Toyota Fortuner ಕಾರಿನಲ್ಲಿ ಹಲವು ಬದಲಾವಣೆ ಮಾಡಲಾಗಿದೆ. ಮುಂಭಾಗದ ಗ್ರಿಲ್ ವಿನ್ಯಾಸದಲ್ಲಿ ಬದಲಾವಣೆ, ಆಕರ್ಷಕ ಲುಕ್, LED ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಮಹತ್ವದ ಬದಲಾವಣೆಗಳು ಈ ಕಾರಿನಲ್ಲಿದೆ. 17 ಇಂಚಿನ್ ಅಲೋಯ್ ವೀಲ್, ಬ್ಲಾಕ್ ರೂಫ್ ಹಾಗೂ ಪಿಲ್ಲರ್ಸ್, ಸ್ಪೂರ್ಟೀವ್ ರೇರ್ ಬಂಪರ್, ಹಾಗೂ ಟೈಲ್‌ಲೈಟ್‌ನಲ್ಲಿ ಬದಲಾವಣೆ ಮಾಡಲಾಗಿದೆ. 

ಮುಖ್ಯಮಂತ್ರಿ ಪರಿಹಾರ ನಿಧಿಗೆ 2 ಕೋಟಿ ರೂ. ನೀಡಿದ ಟೊಯೋಟಾ ಕಿರ್ಲೋಸ್ಕರ್!.

ಎಂಜಿನ್, ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ ಇಲ್ಲ. 2.8 ಲೀಟರ್, 4 ಸಿಲಿಂಡರ್, ಡೀಸೆಲ್ ಎಂಜಿನ್ ಹೊಂದಿದ್ದು, 200hp ಪವರ್ ಸಾಮರ್ಥ್ಯವಿದೆ. 6 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಶನ್ ಹೊಂದಿದೆ.  2.7 ಲೀಟರ್ ಪೆಟ್ರೋಲ್ ಮೋಟಾರ್ ಎಂಜಿನ್, 166hp ಪವರ್ ಸಾಮರ್ಥ್ಯ ಹೊಂದಿದೆ.  ಪೆಟ್ರೋಲ್ ಎಂಜಿನ್ 5 ಸ್ಪೀಡ್ ಮಾನ್ಯುಯೆಲ್ ಟ್ರಾನ್ಸ್‌ಮಿಶನ್ ಹಾಗೂ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. ಡೀಸೆಲ್ ವೇರಿಯೆಂಟ್ ಎಂಜಿನ್ 4WD ಸಿಸ್ಟಮ್ ಹೊಂದಿದೆ.

ಕೊರೋನಾ ಹೋರಾಟಕ್ಕೆ ಮತ್ತಷ್ಟು ನೆರವು; ಆರೋಗ್ಯ ಇಲಾಖೆ ಜೊತೆ ಕೈಜೋಡಿಸಿದ ಟೊಯೋಟಾ ಕಿರ್ಲೋಸ್ಕರ್!

ಸದ್ಯ ಮಾರುಕಟ್ಟೆಯಲ್ಲಿರುವ Toyota Fortuner ಕಾರಿನ ಬೆಲೆ 28.18 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದ್ದು ಗರಿಷ್ಠ ಬೆಲೆ 32.05 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ನೂತನ ಕಾರಿನ ಬೆಲೆ ಕೊಂಚ ಹೆಚ್ಚಾಗಲಿದೆ.  ಫೋರ್ಡ್ ಎಂಡೇವರ್, ಮಹೀಂದ್ರ ಅಲ್ಟುರಾಸ್, ಸ್ಕೋಡಾ ಕೋಡಿಯಾಕ್ ಸೇರಿದಂತೆ ಹಲವು SUV ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಾರು ಬಿಡುಗಡೆಯಾಗುತ್ತಿದೆ. ಮೊದಲ ಹಂತದಲ್ಲಿ ಥಾಯ್ಲೆಂಡ್‌ನಲ್ಲಿ ನೂತನ Toyota Fortuner ಬಿಡುಗಡೆಯಾಗತ್ತಿದೆ. ಬಳಿಕ ಭಾರತದಲ್ಲಿ ಬಿಡುಗಡೆಯಾಗಲಿದೆ

click me!