ಟೊಯೋಟಾ ಯಾರಿಸ್ ಕ್ರಾಸ್ ಹೈಬ್ರಿಡ್ ಕಾಂಪಾಕ್ಟ್ SUV ಬಿಡುಗಡೆ!

By Suvarna NewsFirst Published Aug 31, 2020, 7:03 PM IST
Highlights

ಟೊಯೋಟಾ ಯಾರಿಸ್ ಕಾರು ಇದೀಗ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಯಾರಿಸ್ ಕ್ರಾಸ್ ಕಾಂಪಾಕ್ಟ್ SUv ಕಾರು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಹೈಬ್ರಿಡ್ ವೇರಿಯೆಂಟ್ ಲಭ್ಯವಿದೆ. 

ಜಪಾನ್(ಆ.31): ಟೊಯೋಟಾ ಮೋಟಾರ್ ನೂತನ ಯಾರಿಸ್ ಕ್ರಾಸ್ ಕಾಂಪಾಕ್ಟ್ SUV ಕಾರು ಬಿಡುಗಡೆ ಮಾಡಿದೆ.  TNGA(Toyota New Global Architecture are modular unibody automobile platforms) ಪ್ಲಾಟ್‌ಫಾರ್ಮ್‌ನಡಿ ನೂತನ ಯಾರಿಸ್ ಕ್ರಾಸ್ ಕಾರು ನಿರ್ಮಾಣ ಮಾಡಲಾಗಿದೆ. ಇದು ಹೈಬ್ರಿಡ್ ಕಾರಾಗಿದ್ದು, ಎಲೆಕ್ಟ್ರಿಕ್ ಫೋರ್ ವೀಲ್ಹ್ ಡ್ರೈವ್ ಸಿಸ್ಟಮ್ ಹೊಂದಿದೆ.

11 ಸಾವಿರ ರೂಪಾಯಿಗೆ ಬುಕ್ ಮಾಡಿ ನೂತನ ಟೊಯೋಟಾ ಅರ್ಬನ್ ಕ್ರೂಸರ್ SUV!

ಯಾರಿಸ್ ಕ್ರಾಸ್ SUV 4WD ಸಿಸ್ಟಮ್ ಹೊಂದಿದೆ. ಈ ಮೂಲಕ ದುರ್ಗಮ, ಪರ್ವತ ಶ್ರೇಣಿಗಳಲ್ಲಿ ಹಲವು ಮೊಡ್‌ಗಳು ಬಳಸುವ ಆಯ್ಕೆ ನೀಡಿದೆ. 1.5 ಲೀಟರ್ ಇನ್‌ಲೈನ್ 3 ಸಿಲಿಂಡರ್ ಡೈನಾಮಿಕ್ ಫೋರ್ಸ್ ಎಂಜಿನ್ ಹೊಂದಿದೆ. ಸುರಕ್ಷತೆಯಲ್ಲಿ ಟೊಯೋಟಾ ಹೆಚ್ಚುವರಿ ಫೀಚರ್ಸ್ ಸೇರಿಸಿದೆ. ಹೈವೇಯಲ್ಲಿ ವೇಗವಾಗಿ ಚಲಿಸುವ ವೇಳೆ ವಿರುದ್ಧ ದಿಕ್ಕಿನಿಂದ ಬೀಸುವ ರಭಸವಾದ ಗಾಳಿಯನ್ನು ನಿಭಾಯಿಸಲು S-VSC ವಿಂಡ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ.

ಟೊಯೋಟಾ ಫಾರ್ಚುನರ್ ಸ್ಪೋರ್ಟಿ TRD ಲಿಮಿಟೆಡ್ ಎಡಿಶನ್ ಕಾರು ಬಿಡುಗಡೆ!

ಲೇನ್ ಕ್ರಾಸಿಂಗ್ ವೇಳೆಯೂ ಸುರಕ್ಷಿತ ಡ್ರೈವಿಂಗ್‌ಗೂ ಸಹಕಾರಿಯಾಗಿದೆ. ಯಾರಿಸ್ ಕ್ರಾಸ್ ಸಬ್ ಕಾಂಪಾಕ್ಟ್ SUV ಕಾರಿನಲ್ಲಿ ಎರಡು ವೇರಿಯೆಂಟ್ ಲಭ್ಯವಿದೆ. ಒಂದು ಯಾರಿಸ್ ಕ್ರಾಸ್ ವೇರಿಯೆಂಟ್ ಮತ್ತೊಂದು ಹೈಬ್ರಿಡ್ ವೇರಿಯೆಂಟ್ ಕಾರು ಲಭ್ಯವಿದೆ.  ಯಾರಿಸ್ ಕ್ರಾಸ್ ಬೆಲೆ12.50 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಯಾರಿಸ್ ಕ್ರಾಸ್ ಹೈಬ್ರಿಡ್ ಫೋರ್ ವೀಲ್ಹ್ ಡ್ರೈವ್ ಕಾರಿನ ಬೆಲೆ 19.60 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಈ ಕಾರು ಸದ್ಯ ಜಪಾನ್‌ನಲ್ಲಿ ಬಿಡುಗಡೆಯಾಗಿದೆ.

click me!