ಬೆಂಗಳೂರು-ಹಾಸನ ಹೈವೇಯಲ್ಲಿ 100 ಬೈಕ್ ಸವಾರರ ಲಾಂಗ್ ರೈಡ್; ದಂಡ ಹಾಕಿದ ಪೊಲೀಸ್!

By Suvarna NewsFirst Published Jun 1, 2020, 6:44 PM IST
Highlights

ಕಳೆದೆರಡು ತಿಂಗಳಿನಿಂದ ಮನೆಯೊಳಗೆ ಕೂತ ಹಲವರಿಗೆ ಸಾಕಾಗಿದೆ. ಹೀಗಾಗಿ ಲಾಕ್‌ಡೌನ್ ಅಂತ್ಯಕ್ಕೆ ಕಾಯುತ್ತಿದ್ದರು. ಹೀಗಾಗಿ 4.0 ಅಂತಿಮ ಹಂತದಲ್ಲಿ 100 ಬೈಕ್ ಸವಾರರು ಲಾಂಗ್ ರೈಡ್‌ಗೆ ಪ್ಲಾನ್ ಮಾಡಿ ಹೊರಟಿದ್ದಾರೆ. ಆದರೆ ಇವರನ್ನು ಚೇಸ್ ಮಾಡಿ ಹಿಡಿದ ಪೊಲೀಸ್ ದಂಡ ಹಾಕಿದ್ದಾರೆ.

ಬೆಂಗಳೂರು(ಜೂ.01): ಕೊರೋನಾ ವೈರಸ್, ಲಾಕ್‌ಡೌನ್ 1,2,3 ಹಾಗೂ 4. ಕಳೆದೆರಡು ತಿಂಗಳಿಂದ ಜನರು ಮನೆಯೊಳಗೆ ಬಂಧಿಯಾಗಿ ಹೈರಾಣಾಗಿದ್ದಾರೆ. ಕೊರೋನಾ ಸಾಕು, ಲಾಕ್‌ಡೌನ್ ಸಾಕಾಯ್ತು ಎನ್ನುವವರೇ ಹೆಚ್ಚು. ಹೀಗಾಗಿ ಮನೆಯೊಳಗೆ ಸೇರಿದ್ದ ಕೆಲ ಸ್ನೇಹಿತರು ಲಾಕ್‌ಡೌನ್ 4.0 ಅಂತ್ಯವಾಗುತ್ತಿರುವ ಬೆನ್ನಲ್ಲೇ ಲಾಗ್ ರೈಡ್ ಆಯೋಜಿಸಿದ್ದಾರೆ. 100ಕ್ಕೂ ಹೆಚ್ಚಿನ ಬೈಕ್ ರೈಡರ್ಸ್ ಈ ರೈಡ್‌ನಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇವರ ರೈಡ್ ನಡುವೆ ಪೊಲೀಸರು ಶಾಕ್ ನೀಡಿದ್ದಾರೆ.

BMW X7 ಕಾರಿನಲ್ಲಿ ಜಾಲಿ ರೈಡ್; ತರಕಾರಿ ಖರೀದಿ ನೆಪದಲ್ಲಿ 100 ಕಿ.ಮೀ ಪ್ರಯಾಣ!.

ಶನಿವಾರ(ಮೇ.30) ರಂದು 100ಕ್ಕೂ ಹೆಚ್ಚು ಬೈಕ್‌ಗಳಲ್ಲಿ ರೈಡರ್ಸ್ ಬೆಂಗಳೂರಿನಿಂದ ಹಾಸನ ಹೈವೇಯಲ್ಲಿ ರೈಡ್ ಆರಂಭಿಸಿದ್ದಾರೆ. ಟ್ರಿಪ್ ಗಮನಿಸಿದ ಪೊಲೀಸ್, ಈ ಗುಂಪನ್ನು ಚೇಸ್ ಮಾಡಿದ್ದಾರೆ. ಸೋಲೂರು ಬಳಿ ಬೈಕ್ ಸವಾರರ ತಡೆದ ಪೊಲೀಸರು ವಿಚಾರಿಸಿದ್ದಾರೆ. 4.0ನಲ್ಲಿ ಅಗತ್ಯ ಸಾರಿಗೆಗೆ ಅನುಮತಿ ನೀಡಲಾಗಿದೆ. ಆದರೆ ಲಾಂಗ್ ರೈಡ್‌ಗೆ ಅವಕಾಶವಿಲ್ಲ. ಅದೂ ಕೂಡ 100ಕ್ಕೂ ಹೆಚ್ಚು ಜನರ ಗುಂಪು. ಇಷ್ಟೇ ಅಲ್ಲ ಹೈವೇಯಲ್ಲಿ ಅತೀ ವೇಗವಾಗಿ ಚಲಿಸುತ್ತಿರುವ ಕುರಿತು ದೂರುಗಳು ಬಂದಿವೆ. ಈ ಬೈಕ್ ರೈಡರ್ಸ್ ಗುಂಪು ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೈಕ್ ರೈಡ್ ಮಾಡಿದ್ದಾರೆ. ಹೀಗಾಗಿ ದಂಡ ಹಾಕಲಾಗಿದೆ ಎಂದು ಸೊಲೂರು  ಠಾಣೆ ಪೊಲೀಸರು ಹೇಳಿದ್ದಾರೆ.

ಸಿಎಂ ಹೆಸರು ಹೇಳಿ ಬೆಂಗಾವಲು ವಾಹನ ಜೊತೆ ಕೇದಾರನಾಥ್ ಪ್ರವಾಸ; ಪೊಲೀಸರ ಅತಿಥಿಯಾದ ಶಾಸಕ!.

ಪೊಲೀಸರ ನಡೆಗೆ ರೈಡರ್ಸ್ ಗರಂ ಆಗಿದ್ದಾರೆ. ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಲಾಕ್‌ಡೌನ್ 4.0ನಲ್ಲಿ ಬೈಕ್‌ಗಳಿಗೆ ಯಾವುದೇ ನಿರ್ಬಂಧವಿಲ್ಲ. ಈ ರೀತಿಯ ಯಾವುದೇ ನಿಯಮವಿಲ್ಲ. ನಾವು ನಿಯಮವನ್ನು ಪಾಲಿಸುತ್ತಿದ್ದೇವೆ. ಸಾಮಾಜಿಕ ಅಂತರ ಕಾಪಾಡಿಕೊಂಡಿದ್ದೇವೆ. ಮನೆಯೊಳಗೆ ಕುಳಿತಿದ್ದ ಹಲವರು ಮಾನಸಿಕ ಒತ್ತಡದಿಂದ ಹೊರಬರಲು ಈ ರೈಡ್ ಆಯೋಜಿಸಿದ್ದೇವೆ ಎಂದು ಬೈಕ್ ರೈಡರ್ಸ್ ಪೊಲೀಸರ ವಿರುದ್ಧ ಸಿಟ್ಟಾಗಿದ್ದಾರೆ.


 

click me!