ಕೊರೋನಾ ಸಂಕಷ್ಟದ ನಡುವೆ ಹೊಸ ಮೈಲಿಗಲ್ಲು ಸ್ಥಾಪಿಸಿದ ಲ್ಯಾಂಬೋರ್ಗಿನಿ!

By Suvarna News  |  First Published Jul 21, 2020, 9:30 PM IST

ಕೊರೋನಾ ವೈರಸ್ ಹೊಡೆತದಿಂದ ಆಟೋಮೊಬೈಲ್ ಕಂಪನಿಗಳು ಸಂಕಷ್ಟಕ್ಕೆ ಸಿಲುಕಿದೆ.  ಇದರ ನಡುವೆ ಸೂಪರ್ ಕಾರು ಹಾಗೂ ದುಬಾರಿ ಕಾರು ಎಂದು ಜನಪ್ರಿಯವಾಗಿರುವ ಲ್ಯಾಂಬೋರ್ಗಿನಿ ಉರುಸ್ SUV ಕಾರು ಹೊಸ ಮೈಲಿಗಲ್ಲು ಸ್ಥಾಪಿಸಿದೆ.


ಇಟಲಿ(ಜು.21): ಸೂಪರ್ ಕಾರು ಲ್ಯಾಂಬೋರ್ಗಿನಿ ಕಾರುಗಳ ಪೈಕಿ SUV ಕಾರಾದ ಉರುಸ್ ಅತೀ ಬೇಡಿಕೆಯ ಕಾರಾಗಿ ಮಾರ್ಪಟ್ಟಿದೆ. ಸ್ಯಾಂಡಲ್‍‌ವುಡ್ ನಟ ದರ್ಶನ್ , ಪುನೀತ್ ರಾಜ್‌ಕುಮಾರ್ ಕೂಡ ಲ್ಯಾಂಬೋರ್ಗಿನಿ ಉರುಸ್ ಕಾರು ಹೊಂದಿದ್ದಾರೆ. ಇದೀಗ ಇದೇ ಉರುಸ್ ಕಾರು ಇದೀಗ 10,000 ಕಾರು ಮಾರುಕಟ್ಟೆ ಪ್ರವೇಶಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದೆ. 

ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಡ್ರೈವ್!.

Tap to resize

Latest Videos

undefined

2018ರಲ್ಲಿ ಬಿಡುಗಡೆಯಾದ ಲ್ಯಾಂಬೋರ್ಗಿನಿ ಉರುಸ್ ಕಾರು 2 ವರ್ಷಗಳಲ್ಲಿ 10,000 ಕಾರುಗಳು ಉತ್ಪಾದನೆಯಾಗಿದೆ. ಈ ಮೂಲಕ ಐಷಾರಾಮಿ ಕಾರು ವಿಭಾಗದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ವಿಶೇಷವಾಗಿ ಸೆಲೆಬ್ರೆಟಿಗಳು ಲ್ಯಾಂಬೋರ್ಗಿನಿ ಉರುಸ್ ಕಾರಿನ ಮೊರೆ ಹೋಗುತ್ತಿದ್ದಾರೆ. ಇತ್ತೀಚೆಗೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಲ್ಯಾಂಬೋರ್ಗಿನಿ ಉರುಸ್ ಕಾರಿನಲ್ಲಿ ಕಾಣಿಸಿಕೊಂಡಿದ್ದರು.

ಲ್ಯಾಂಬೋರ್ಗಿನಿ ಉರುಸ್ 4.0 ಲೀಟರ್ ಟ್ವಿನ್ ಟರ್ಬೋ  v8 ಎಂಜಿನ್ ಹೊಂದಿದೆ. ಉರುಸ್ ಕಾರಿನ ಬಲೆ 3.55 ಕೋಟಿ ರೂಪಾಯಿ (ಎಕ್ಸ್ ಶೋ ರೂಂ). ಕೇವಲ 3.6 ಸೆಕೆಂಡ್‌ಗಳಲ್ಲಿ 0 TO 100 ಕಿ.ಮೀ ವೇಗ ತಲುಪಲಿದೆ. ಈ ಕಾರಿನ ಗರಿಷ್ಠ ವೇಗ 305 ಕಿಲೋಮೀಟರ್ ಪ್ರತಿ ಗಂಟೆಗೆ.

ಗರಿಷ್ಠ ಸುರಕ್ಷತೆ, ಆರಾಮಾದಾಯಕ ಪ್ರಯಾಣಕ್ಕೆ ಉರುಸ್ ಅತ್ಯುತ್ತಮ ಕಾರು. ಲ್ಯಾಂಬೋರ್ಗೀನಿ ಸೂಪರ್ ಕಾರುಗಳು ಭಾರತದ ರಸ್ತೆಗಳಿಗೆ ಹೇಳಿ ಮಾಡಿಸಿದಲ್ಲ ಅನ್ನೋ ಮಾತುಗಳಿತ್ತು. ಆದರೆ ಉರುಸ್ suv ಕಾರಾಗಿರುವ ಈ ಎಲ್ಲಾ ಸಮಸ್ಯೆಗಳಿಗೆ ಉತ್ತರ ನೀಡಲಿದೆ.
 

click me!