ಟೊಯೊಟಾ ಫಾರ್ಚುನರ್ ಪ್ರತಿಸ್ಪರ್ಧಿ, ಬರುತ್ತಿದೆ ಜೀಪ್ ಕಂಪಾಸ್ 7 ಸೀಟರ್!

By Web Desk  |  First Published Jul 2, 2019, 10:43 PM IST

ಜೀಪ್ ಕಂಪಾಸ್ ಕಾರು ಭಾರತದಲ್ಲಿ ಗರಿಷ್ಠ ಯಶಸ್ಸು ಸಾಧಿಸಿದೆ. ಇದೀಗ ಜೀಪ್ ಕಂಪಾಸ್ 7 ಸೀಟರ್ ಕಾರು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಟೊಯೊಟಾ ಫಾರ್ಚುನರ್ ಹಾಗೂ ಫೋರ್ಡ್ ಎಂಡೇವರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆ ಪ್ರವೇಶಿಸಲಿದೆ.


ನವದೆಹಲಿ(ಜು.02): ಟೊಯೊಟಾ ಫಾರ್ಚುನ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಹಲವು ಕಾರುಗಳು ಮಾರುಕಟ್ಟೆಯಲ್ಲಿದೆ. ಆದರೆ ಫಾರ್ಚುನರ್ ಕಾರಿಗೆ ಯಾವುದೇ ಪೈಪೋಟಿ ಎದುರಾಗಿಲ್ಲ. ಇದೀಗ ಟೊಯೊಟಾ ಕಾರಿಗೆ ಅಗ್ನಿಪರೀಕ್ಷೆ ಎದುರಾಗುತ್ತಿದೆ. ಭಾರತದಲ್ಲಿ ಜನಪ್ರಿಯವಾಗಿರುವ ಜೀಪ್ ಕಂಪಾಸ್ ಇದೀಗ ಫಾರ್ಚುನರ್ ಕಾರಿಗೆ ಪ್ರತಿಸ್ಪರ್ಧಿಯಾಗಿ 7 ಸೀಟರ್ ಕಾರು ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ನೂತನ ರೆನಾಲ್ಟ್ ಡಸ್ಟರ್- ಇಲ್ಲಿದೆ ವಿಶೇಷತೆ, ಬೆಲೆ!

Latest Videos

undefined

2017ರ ಆರಂಭದಲ್ಲೇ ಜೀಪ್ ಮೋಟಾರ್ಸ್ 7 ಸೀಟರ್ ಕಾರು ನಿರ್ಮಾಣ ಕುರಿತು ಸೂಚನೆ ನೀಡಿತ್ತು. ಇದೀಗ ಪುಣೆಯ ರಂಜನ್‌ಗಾಂವ್ ಘಟಕದಲ್ಲಿ ನೂತನ ಕಾರು ನಿರ್ಮಾಣ ಆರಂಭಗೊಂಡಿದೆ. ಟೊಯೊಟಾ ಫಾರ್ಚುನರ್ ಹಾಗೂ ಫೋರ್ಡ್ ಎಂಡೇವರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ನೂತನ ಜೀಪ್ ಕಂಪಾಸ್ 7 ಸೀಟರ್ ಕಾರು ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಹೊಸ ನಿಯಮ: ಆ್ಯಂಬುಲೆನ್ಸ್‌ಗೆ ಅಡ್ಡ ಬಂದರೆ 10 ಸಾವಿರ ರೂ. ದಂಡ!

ನೂತನ ಕಾರು 2020ರ ಅಂತ್ಯಭಾಗದಲ್ಲಿ ಅಥವಾ 2021ರ ಆರಂಭದಲ್ಲಿ ಬಿಡುಗಡೆಯಾಗಲಿದೆ. BS 6 ಎಮಿಶನ್ ಎಂಜಿನ್ ಹೊಂದಿರಲಿದೆ. ನೂತನ ಕಾರಿನ ಬೆಲೆ, ಎಂಜಿನ್ ಸಾಮರ್ಥ್ಯ ಬಹಿರಂಗವಾಗಿಲ್ಲ. ಶೀಘ್ರದಲ್ಲೇ ಕಾರಿನ ಟೀಸರ್ ಬಿಡುಗಡೆಯಾಗೋ ಸಾಧ್ಯತೆ ಇದೆ.
 

click me!