ಮಹಿಳಾ ಸುರಕ್ಷತೆ ಕಡೆಗೆ ದಿಟ್ಟ ಹೆಜ್ಜೆ ಇಟ್ಟಿರುವ ಬಿಬಿಎಂಪಿ ಬೆಂಗಳೂರಿನಲ್ಲಿ ಪಿಂಕ್ ಆಟೋಗಳನ್ನು ಪರಿಚಯಿಸಲು ಮುಂದಾಗಿದೆ. ಪಿಂಕ್ ಆಟೋಗಳನ್ನು ಮಹಿಳಾ ಚಾಲಕರೆ ಚಲಾಯಿಸಬೇಕು ಎಂಬ ಉದ್ದೇಶವೂ ಪಾಲಿಕೆಯದ್ದು.
ಬೆಂಗಳೂರು[ಜು. 02] ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಿಂಕ್ ಆಟೋ ಗಳನ್ನು ಲಾಂಚ್ ಮಾಡಲು ಮುಂದಾಗಿದೆ. ಜುಲೈ ಅಂತ್ಯಕ್ಕೆ 1000 ಪಿಂಕ್ ಆಟೋಗಳು ರಸ್ತೆಗೆ ಇಳಿಯಲಿವೆ.
ಮಹಿಳೆಯರ ಸುರಕ್ಷತೆ ಗಮನದಲ್ಲಿ ಇರಿಸಿಕೊಂಡು ಪಿಂಕ್ ಆಟೋಗಳು ಕಾರ್ಯನಿರ್ವಹಿಸಲಿವೆ. ಪಿಂಕ್ ಆಟೋ ಸಿಸಿಟಿವಿ ಕ್ಯಾಮರಾ ಮತ್ತು ಜಿಪಿಎಸ್ ವ್ಯವಸ್ಥೆ ಒಳಗೊಂಡಿರುತ್ತದೆ.
Fact Check: ಹಣ ಕೊಟ್ಟು ತನ್ನ ದೇಶದ ಮಹಿಳೆಯರನ್ನು ವಿವಾಹವಾಗಲು ಹೇಳ್ತಿದೆಯಾ ಐಸ್‌ಲ್ಯಾಂಡ್?
ಮಹಿಳೆಯರು ನಿರ್ಭಿತಿಯಿಂದ ಸುರಕ್ಷಿತವಾಗಿ ಪ್ರಯಾಣ ಮಾಡಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶ. ಆಟೋಗಳು ಒಮ್ಮೆ ಸಿದ್ಧವಾದ ಮೇಲೆ ಓಲಾ ಹಾಗೂ ಉಬರ್ ಅಂಥ ಸಂಸ್ಥೆಗಳ ಜತೆಗೆ ಟೈ ಅಪ್ ಮಾಡಿಕೊಳ್ಳುವ ಆಲೋಚನೆ ಇದೆ ಎಂದು ಬಿಬಿಎಂಪಿ ಅಸಿಸ್ಟಂಟ್ ಕಮಿಷನರ್ ನಾಗೇಂದ್ರ ನಾಯ್ಕ್ ತಿಳಿಸಿದ್ದಾರೆ.
ಮೊದಲಿಗೆ ಎಲ್ಲ ಆಟೊಗಳಿಗೆ ಮಹಿಳಾ ಚಾಲಕರನ್ನೇ ಬಳಸಿಕೊಳ್ಳಲು ತೀರ್ಮಾನ ಮಾಡಲಾಗಿತ್ತು.ಆದರೆ ಸಾಕಷ್ಟು ಸಂಖ್ಯೆಯ ಮಹಿಳಾ ಚಾಲಕರು ಸಿಗದ ಕಾರಣ =ಪುರುಷ ಮತ್ತು ಮಹಿಳಾ ಚಾಲಕರು ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಂಬೈ, ನೋಯ್ಡಾ, ಸೂರತ್, ಗಜಿಯಾಬಾದ್ ನಲ್ಲಿ ಪಿಂಕ್ ಆಟೋಗಳು ಈಗಾಗಲೇ ಓಡಾಡುತ್ತಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ ಅಂತ್ಯಕ್ಕೆ ಬೆಂಗಳೂರಿನಲ್ಲಿಯೂ ವ್ಯವಸ್ಥೆ ಆರಂಭವಾಗಲಿದೆ ಎಂದರು.