ಕಾರು ಖರೀದಿಸಿ ಕಲರ್ ಕಲರ್ ಪೈಂಟ್, ಸ್ಟಿಕ್ಕರ್ ಅಂಟಿಸಿರೋದು ನೋಡಿದ್ದೇವೆ. ಆದರೆ ಇಲ್ಲಿ ಸಂಪೂರ್ಣ ಕಾರಿಗೆ ಸೆಗಣಿ ಮೆತ್ತಲಾಗಿದೆ. ಅಷ್ಟಕ್ಕೂ ಮಾಲೀಕ ಈ ರೀತಿ ಮಾಡಿದ್ದೇಕೆ? ಇಲ್ಲಿದೆ ನೋಡಿ.
ಮುಂಬೈ(ಮೇ.20): ಕಾರು ಖರೀದಿಸಿದ ಬಳಿಕ ಮಾಡಿಫೈ ಮಾಡೋದು ಸಹಜ. ಆದರೆ ಇದು ಮಾಡಿಫೈ ಮಾಡಿದ ಕಾರಲ್ಲ. ಈ ಕಾರಿನ ಬಣ್ಣ ಕೂಡ ಬದಲಾಯಿಸಿಲ್ಲ. ಮಾಲೀಕನ ಹೊಸ ಐಡಿಯಾ ಇದೀಗ ವಿಶ್ವದಲ್ಲೇ ಭಾರಿ ಚರ್ಚೆಯಾಗುತ್ತಿದೆ. ಟೊಯೊಟಾ ಕೊರೋಲಾ ಅಲ್ಟೀಸ್ ಕಾರಿಗೆ ಸೆಗಣಿ ಮೆತ್ತಲಾಗಿದೆ. ಬಿಳಿ ಬಣ್ಣದ ಕೊರೊಲಾ ಅಲ್ಟೀಸ್ ಕಾರು ಇದೀಗ ಕಂದು ಬಣ್ಣದಲ್ಲಿ ಓಡಾಡುತ್ತಿದೆ.
ಇದನ್ನೂ ಓದಿ: ಅಮೇಝ್ to ಜಾಝ್: ಹೊಂಡಾ ಕಾರುಗಳಿಗೆ ಭಾರಿ ಡಿಸ್ಕೌಂಟ್!
undefined
ಅಷ್ಟಕ್ಕೂ ಸೆಗಣಿ ಮೆತ್ತಲು ಮುಖ್ಯ ಕಾರಣವಿದೆ. ದೇಶದ ಬಹುತೇಕ ಭಾಗ ಉರಿಬಿಸಿನಿಂದ ಸುಡುತ್ತಿದೆ. 40 ಡಿಗ್ರಿ ತಾಪಮಾನ ಜನರ ಬದುಕನ್ನ ಹೈರಾಣಾಗಿಸಿದೆ. ಒಂದೆಡೆ ಮಳೆ ಕೂಡ ಇಲ್ಲ. ಹೀಗಾಗಿ ಕಾರಿನಲ್ಲಿ ಅದೆಷ್ಟೇ ಉತ್ತಮ ಏಸಿ ಇದ್ದರೂ ಓಡಾಡುವುದು ಕಷ್ಟವಾಗಿದೆ. ಹೀಗಾಗಿ ಮಾಲೀಕ ಉರಿಬಿಸಿಲಿನಿಂದ ತಪ್ಪಿಸಿಕೊಳ್ಳಲು 5 ರಿಂದ 6 ಲೇಯರ್‌ಗಳಾಗಿ ಸೆಗಣಿ ಮೆತ್ತಲಾಗಿದೆ.
ಇದನ್ನೂ ಓದಿ: ಹೊಸ ಅವತಾರದಲ್ಲಿ ಮಾರುತಿ ಬಲೆನೊ- ಟೊಯೊಟಾ ಗ್ಲಾಂಝಾ ಟೀಸರ್ ರಿಲೀಸ್!
ಬಹಳ ನಾಜೂಕಾಗಿ ಸೆಗಣಿ ಮೆತ್ತಲಾಗಿದೆ. ಕಾರಿನ ಬಂಪರ್, ನಂಬರ್ ಪ್ಲೇಟ್, ಲೋಗೋ, ಬ್ರೇಕ್ ಲೈಡ್, ಇಂಡಿಕೇಟರ್ ಸೇರಿದಂತೆ ಪ್ರಮುಖ ಸ್ಥಳಗಳನ್ನು ಬಿಟ್ಟು ಸಂಪೂರ್ಣ ಬಾಡಿ ಮೇಲೆ ಸೆಗಣಿ ಮೆತ್ತಲಾಗಿದೆ. ಉರಿಬಿಸಿಲನ್ನು ತಡೆಯಲು ಸೆಗಣಿ ಅತ್ಯುತ್ತಮ. ಹಳ್ಳಿಗಳಲ್ಲಿ ತಮ್ಮ ಮನೆಗಳ ನೆಲವನ್ನು ಸೆಗಣಿ ಬಳಸಿ ಮನೆಯ ಒಳಾಗಂಣವನ್ನು ತಂಪಾಗಿರಿಸುತ್ತಾರೆ. ಆದರೆ ಈ ಕಾರಿನಲ್ಲಿ ಎಷ್ಟರ ಮಟ್ಟಿಗೆ ವರ್ಕೌಟ್ ಆಗಿದೆ ಅನ್ನೋದು ಸದ್ಯಕ್ಕಿರುವ ಕುತೂಹಲ.