
ನವದೆಹಲಿ(ಮೇ.20): ಸುಜುಕಿ ಜಿಕ್ಸರ್ 250 F ಬೈಕ್ ಬಿಡುಗಡೆಯಾಗಿದೆ. ABS ತಂತ್ರಜ್ಞಾನ ಸೇರಿದಂತೆ ಹಲವು ವಿಶೇಷತೆಗಳನ್ನೊಳಗೊಂಡಿರುವ ಈ ಬೈಕ್, ಹೊಂಡಾ BR250R, ಯಮಹಾ ಫೇಜರ್ 25, ಬಜಾಜ್ ಪಲ್ಸಾರ್ RS200, KTM RC200 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿ ನೂತನ ಸುಜುಕಿ ಜಿಕ್ಸರ್ 250 F ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ: ಬಜಾಜ್ ಪ್ಲಾಟಿನ ಬೈಕ್ ಮೇಲೆ 2.87 ಲಕ್ಷ ಕಿ.ಮೀ ರೈಡ್-ದಾಖಲೆ ಬರೆದ ರೈತ!
ಸುಜುಕಿ ಜಿಕ್ಸರ್ 250 F ಬೈಲೆ 1.71 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿರುವ ನೂತನ ಬೈಕ್ ಇದೀಗ ಭಾರತದ ಬೈಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ. 249 cc, ಸಿಂಗಲ್-ಸಿಲಿಂಡರ್, ಆಯಿಲ್ ಕೂಲ್ಡ್, ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದ್ದು, 26 bhp ಪವವರ್ ಹಾಗೂ 22.6 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಡುಕಾಟಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ-75 ಕಿ.ಮೀ ಮೈಲೇಜ್!
ವಿಶೇಷ ವಿನ್ಯಾಸ, LED ಹೆಡ್‌ಲ್ಯಾಂಪ್ಸ್, 17 ಇಂಚಿನ ಆಲೋಯ್ ವೀಲ್ಹ್, LCD ಇನ್ಸ್ಟ್ರುಮೆಂಟ್ ಹೊಂದಿದೆ. ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ಹೊಂದಿದೆ. ಶೀಘ್ರದಲ್ಲೇ ನೂತನ ಸುಜುಕಿ ಜಿಕ್ಸರ್ 250 SF ಬೈಕ್ ದೆಹಲಿಯ ಬುಧ್ ಅಂತಾರಾಷ್ಟ್ರೀಯ ರೇಸ್ ಟ್ರ್ಯಾಕ್‌ಗೆ ಇಳಿಯಲಿದೆ.
ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.