2018-19ರಲ್ಲಿ ಗರಿಷ್ಠ ಮಾರಾಟ - ಮಾರುತಿ ಸುಜುಕಿಯದ್ದೇ 'ಕಾರು'ಬಾರು!

By Web Desk  |  First Published Apr 12, 2019, 6:48 PM IST

2018-19ರ ಆರ್ಥಿಕ ವರ್ಷದಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಲಿಸ್ಟ್ ಪ್ರಕಟಗೊಂಡಿದೆ. ಮಾರುತಿ ಸುಜುಕಿ ಕಾರುಗಳು ಮತ್ತೆ ಅಗ್ರಸ್ಥಾನದಲ್ಲಿ ಮುಂದುವರಿದಿದ್ದರೆ, ಹ್ಯುಂಡೈ ಪೈಪೋಟಿ ನೀಡಿದೆ. ಇಲ್ಲಿದೆ ಗರಿಷ್ಠ ಮಾರಾಟವಾದ ಕಾರಿನ ವಿವರ.


ನವದೆಹಲಿ(ಏ.12): ಭಾರತದ ಆಟೋಮೊಬೈಲ್ ಕ್ಷೇತ್ರ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ವಿದೇಶಿ ಕಾರು ಕಂಪನಿಗಳು ಇದೀಗ ಭಾರತದತ್ತ ಮುಖಮಾಡಿದೆ. 2018-19ರ ಸಾಲಿನಲ್ಲಿ ಭಾರತದ ಕಾರು ಮಾರುಕಟ್ಟೆ ಹಲವು ಬದಲಾವಣೆ, ಹೊಸ ನೀತಿ-ನಿಯಮಗಳನ್ನು ಕಂಡಿದೆ. ಇದರ ನಡುವೆಯೂ ಕಾರು ಮಾರಾಟ ಕಾರು ಕಂಪನಿಗಳಿಗೆ ಸಮಾಧಾನ ತಂದಿದೆ.

ಇದನ್ನೂ ಓದಿ: FY 2018-19: ಬಹು ಬೇಡಿಕೆಯೆ ಮಾರುತಿ ಸೆಲೆರಿಯೋ ಕಾರು ಹೊಸ ದಾಖಲೆ!

Tap to resize

Latest Videos

undefined

2018-19ರ ಸಾಲಿನಲ್ಲಿ ಗರಿಷ್ಠ ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಮಾರುತಿ ಸುಜುಕಿ ಅಲ್ಟೋ ಮತ್ತೆ ಮೊದಲ ಸ್ಥಾನ ಆಕ್ರಮಿಸಿಕೊಂಡಿದೆ. ಸುಜುಕಿ ಸಂಸ್ಥೆಯ ಮಾರುತಿ ಡಿಸೈರ್ ಬಿಡುಗಡೆಯಾದ ಬಳಿಕ ಆಲ್ಟೋ ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿತ್ತು. ಆದರೆ  ಆರ್ಥಿಕ ವರ್ಷದಲ್ಲಿ ಆಲ್ಟೋ ಮೊದಲ ಸ್ಥಾನದಲ್ಲಿ ಮುಂದುವರಿದಿದೆ. ಡಿಸೈರ್ ಎರಡನೇ ಸ್ಥಾನದಲ್ಲಿದೆ. ಮಾರುತಿ ಸುಜುಕಿ ಸಂಸ್ಥೆಯ 6 ಕಾರುಗಳು ಆರಂಭಿಕ ಆಗ್ರಸ್ಥಾನದಲ್ಲಿದೆ. ಇನ್ನು 7, 8 ಹಾಗೂ 9 ನೇ ಸ್ಥಾನದಲ್ಲಿ ಹ್ಯುಂಡೈ i20, ಹ್ಯುಂಡೈ i10 ಹಾಗೂ ಕ್ರೇಟಾ  ಕಾರುಗಳು ವಿರಾಜಮಾನವಾಗಿವೆ.  

ಇದನ್ನೂ ಓದಿ: ಮಾರುತಿ ಅಲ್ಟೋ K10 ಕಾರು ಬಿಡುಗಡೆ- ಹೆಚ್ಚು ಸುರಕ್ಷತೆ, ಕಡಿಮೆ ಬೆಲೆ!

2018-19ರಲ್ಲಿ ಆಲ್ಟೋ ಕಾರು 2,59,401 ಕಾರುಗಳು ಮಾರಾಟವಾಗಿದ್ದರೆ, 2ನೇ ಸ್ಥಾನದಲ್ಲಿರುವ ಡಿಸೈರ್ 2,53,859 ಕಾರುಗಳು ಮಾರಾಟವಾಗಿದೆ. ಮಾರುತಿ ಸ್ವಿಫ್ಟ್ 2,23,924 ಕಾರು, ಬಲೆನೊ 2,12,330 ಕಾರು, ಬ್ರೆಜ್ಜಾ 1,57,880 ಕಾರು, ವ್ಯಾಗನ್ಆರ್ 1,51,462 ಕಾರು, ಹ್ಯುಂಡೈ i20 1,40,225 ಕಾರುಗಳು ಮಾರಾಟವಾಗಿದೆ. 
 

click me!