ದಿಲ್ಲಿಯಲ್ಲಿ ಸಾರಾ ಆಲಿ ಖಾನ್ ಬೈಕ್ ರೈಡ್- ಕ್ರಮಕ್ಕೆ ಮುಂದಾದ ಪೊಲೀಸ್!

Published : Apr 12, 2019, 06:01 PM ISTUpdated : Apr 12, 2019, 06:04 PM IST
ದಿಲ್ಲಿಯಲ್ಲಿ ಸಾರಾ ಆಲಿ ಖಾನ್ ಬೈಕ್ ರೈಡ್- ಕ್ರಮಕ್ಕೆ ಮುಂದಾದ  ಪೊಲೀಸ್!

ಸಾರಾಂಶ

ದೆಹಲಿ ರಸ್ತೆಯಲ್ಲಿ ಬೈಕ್ ಮೂಲಕ ಸುತ್ತಾಡಿದ ಬಾಲಿವುಡ್ ನಟಿ ಸಾರಾ ಆಲಿ ಖಾನ್ ವಿರುದ್ದ ಪ್ರಕರಣ ದಾಖಲಿಸಲು ದೆಹಲಿ ಪೊಲೀಸರು ಮುಂದಾಗಿದ್ದಾರೆ. ಅಷ್ಟಕ್ಕೂ ಪೊಲೀಸರು, ಸಾರಾ ಆಲಿ ಖಾನ್ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು ಯಾಕೆ? ಇಲ್ಲಿದೆ ವಿವರ.

ದೆಹಲಿ(ಏ.12): ಬಾಲಿವುಡ್ ನಟಿ ಸಾರಾ ಆಲಿ ಖಾನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೆಹಲಿಯಲ್ಲಿ ನಟ ಕಾರ್ತಿಕ್  ಆರ್ಯನ್ ಜೊತೆ ಬೈಕ್ ಮೂಲಕ ಸುತ್ತಾಡಿದ್ದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈ ಸಂತಸವನ್ನು ಹಂಚಿಕೊಂಡಿದ್ದರು. ಆದರೆ ಸಾರಾ ಆಲಿ ಖಾನ್ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್‌ಲೋಡ್ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದನ್ನೂ ಓದಿ: Xiaomi ಮೊಬೈಲ್ ಕಂಪನಿಯಿಂದ ಇ-ಬೈಕ್ ಬಿಡುಗಡೆ- 80KM 

ಸಾರಾ ಆಲಿ ಖಾನ್ ಹಾಗೂ ನಟ ಕಾರ್ತಿಕ್ ಆರ್ಯನ್ ಬೈಕ್ ಮೂಲಕ ದೆಹಲಿ ಸುತ್ತಾಡಿದ್ದಾರೆ. ಆದರೆ ಹಿಂಬದಿ ಸವಾರರಾಗಿದ್ದ ಸಾರಾ ಆಲಿ ಖಾನ್ ಹೆಲ್ಮೆಟ್ ಧರಿಸಿಲ್ಲ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು. ಇನ್ನು ಕೆಲವರು ದೆಹಲಿ ಪೊಲೀಸರಿಗೆ ಟ್ಯಾಗ್ ಮಾಡೋ ಮೂಲಕ ಪೊಲೀಸರ ಗಮನಕ್ಕೂ ತಂದಿದ್ದಾರೆ.

 

 

ಇದನ್ನೂ ಓದಿ: ABS ತಂತ್ರಜ್ಞಾನದ ರಾಯಲ್ ಎನ್‌ಫೀಲ್ಡ್ ಬೈಕ್ ಬೆಲೆ ಪಟ್ಟಿ ಬಿಡುಗಡೆ!

ಸಾರಾ ಆಲಿ ಖಾನ್ ವೀಡಿಯೋ ನೋಡಿದ ದೆಹಲಿ ಪೊಲೀಸ್ ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವೀಡಿಯೋ ಹಾಗೂ ಇತರ ಸಿಸಿಟಿವಿ ವಿಡೀಯೋ ಆಧರಿಸಿ, ಸತ್ಯಾಸತ್ಯತೆ ಪರೀಶಿಲಿಸಿ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ. ರೈಡ್ ಹೋದ ಸಂತಸದಲ್ಲಿದ್ದ ಸಾರಾ ಆಲಿ ಖಾನ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. 

PREV
click me!

Recommended Stories

ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ
Tata Sierra vs Maruti Grand Vitara : ಯಾವ SUV ಉತ್ತಮ ಎಂಜಿನ್ ಹೊಂದಿದೆ? ಬೆಲೆ, ವೈಶಿಷ್ಟ್ಯ ತಿಳಿಯಿರಿ