ಹೊಸ ಮೈಲಿಗಲ್ಲು ಸ್ಥಾಪಿಸಿದ ಹೊಂಡಾ ಡಿಯೋ ಸ್ಕೂಟರ್!

Published : May 06, 2019, 05:25 PM IST
ಹೊಸ ಮೈಲಿಗಲ್ಲು ಸ್ಥಾಪಿಸಿದ ಹೊಂಡಾ ಡಿಯೋ ಸ್ಕೂಟರ್!

ಸಾರಾಂಶ

ಹೊಂಡಾ ಡಿಯೋ ಸ್ಕೂಟರ್ ಹೊಸ ದಾಖಲೆ ಬರೆದಿದೆ. ಆಕ್ಟೀವಾ ಬಳಿಕ ಡಿಯೋ ನಿರ್ಮಿಸಿದ ದಾಖಲೆ ಏನು? ಇಲ್ಲಿದೆ ಸಂಪೂರ್ಣ ವಿವರ.

ನವದೆಹಲಿ(ಮೇ.06): ಹೊಂಡಾ ಮೋಟರ್‌ಸೈಕಲ್ ಹಾಗೂ ಸ್ಕೂಟರ್ ಇಂಡಿಯಾ ಕಂಪನಿಯ  ಹೊಂಡಾ ಆಕ್ಟೀವಾ ಹಾಗೂ ಹೊಂಡಾ ಡಿಯೋ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.  ಆಕ್ಟೀವಾ ಮಾರಾಟದಲ್ಲಿ ದಾಖಲೆ ಬರೆದ ಬೆನ್ನಲ್ಲೇ ಇದೀಗ ಡಿಯೋ ಕೂಡ ಮಾರಾಟದಲ್ಲಿ ದಾಖಲೆ ನಿರ್ಮಿಸಿದೆ.

ಇದನ್ನೂ ಓದಿ: ಬಜಾಜ್‌ನಿಂದ ಹೊಸ ಆಫರ್- ಡೊಮಿನಾರ್ 400 ಬೈಕ್ ಬೆಲೆ ಕಡಿತ!

ಹೊಂಡಾ ಡಿಯೋ ಒಟ್ಟು 30 ಲಕ್ಷ ಸ್ಕೂಟರ್‌ಗಳು ಮಾರಾಟವಾಗೋ ಮೂಲಕ ದಾಖಲೆ ಬರೆದಿದೆ. ಆರಂಭಿಕ 14 ವರ್ಷಗಳಲ್ಲಿ 15 ಲಕ್ಷ ಸ್ಕೂಟರ್ ಮಾರಾಟವಾಗಿತ್ತು. ಕಳೆದ 3 ವರ್ಷಗಳಲ್ಲಿ 15 ಲಕ್ಷ ಸ್ಕೂಟರ್ ಮಾರಾಟವಾಗಿದೆ. ಈ ಮೂಲಕ ಹೊಸ ಮೈಲಿಗಲ್ಲು ನಿರ್ಮಿಸಿದೆ.

ಇದನ್ನೂ ಓದಿ: ಬಜಾಜ್ ಅವೆಂಜರ್ 160 ABS ಬೈಕ್ ಬಿಡುಗಡೆ- ಬೆಲೆ ಎಷ್ಟು?

ಹೊಂಡಾ ಡಿಯೋ 2018ರಲ್ಲಿ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. LED ಹೆಡ್‌ಲ್ಯಾಂಪ್ ಸೇರಿದಂತೆ ಹಲವು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ.  ನೂತನ ಡಿಯೋ ಸ್ಕೂಟರ್ ಬೆಲೆ 52,938 ರೂಪಾಯಿ.  109 cc ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್ ಹೊಂದಿದ್ದು,  8 bhp ಪವರ್ ಹಾಗೂ 8.91 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

PREV
click me!

Recommended Stories

ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ
ನಿಯಮಗಳ ಪಾಲಿಸದ ಸ್ಲೀಪರ್ ಬಸ್‌ ಸ್ಥಗಿತ: ಎನ್‌ಎಚ್‌ಆರ್‌ಸಿ