ಜುಲೈನಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಬೈಕ್ ವಿವರ ಇಲ್ಲಿದೆ!

By Suvarna News  |  First Published Jun 28, 2020, 7:05 PM IST

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಎಪ್ರಿಲ್, ಮೇ ತಿಂಗಳಲ್ಲಿ ಬಿಡುಗಡೆಯಾಗಬೇಕಿದ್ದ ಕೆಲ ವಾಹನಗಳು ಇದೀಗ ಒಂದೊಂದೆ ಬಿಡುಗಡೆಯಾಗುತ್ತಿದೆ. ಹೀಗೆ ಜುಲೈ ತಿಂಗಳಲ್ಲಿ ಬಿಡುಗಡೆಯಾಗಲಿರುವ ಟಾಪ್ 5 ಬೈಕ್ ವಿವರ ಇಲ್ಲಿದೆ.
 


ಬೆಂಗಳೂರು(ಜೂ.28): ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿ ನಲುಗಿರುವ ಭಾರತದ ಉದ್ಯಮ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಆದರೆ ವೈರಸ್ ಮತ್ತೆ ಹೆಚ್ಚಾಗುತ್ತಿರುವ ಕಾರಣ ಆತಂಕ ಮನೆ ಮಾಡಿದೆ. ಇದರ ನಡುವೆ ಹಲವು ಆಟೋಮೊಬೈಲ್ ಕಂಪನಿಗಳು ವಾಹನಗಳ ಬಿಡುಗಡೆ ಮಾಡುತ್ತಿದ್ದಾರೆ. ನಿರೀಕ್ಷಿತ ಮಟ್ಟದ ಮಾರಾಟ ಸಾಧ್ಯವಾಗುತ್ತಿಲ್ಲ. ಇದರ ನಡುವೆ ಕೆಲ ವಾಹನಗಳು ಬಿಡುಗಡೆಯಾಗಿವೆ. ಇದೀಗ ಜುಲೈ ತಿಂಗಳಲ್ಲಿ ಹಲವು ವಾಹನ ಬಿಡುಗಡೆಯಾಗುತ್ತಿದೆ. ಇದರಲ್ಲಿ ಪ್ರಮುಖ 5 ಬೈಕ್ ವಿವರ ಇಲ್ಲಿದೆ.

ದಿನ ನಿತ್ಯ ಬಳಕೆ ಹಾಗೂ ಲಾಂಗ್ ರೈಡ್; ಇಲ್ಲಿದೆ ಮೂರು ಕಡಿಮೆ ಬೆಲೆಯ ಬೈಕ್!.

Latest Videos

undefined

ಹೀರೋ  Xtreme 160R
ಮಾರ್ಚ್ ಅಂತ್ಯದಲ್ಲಿ ಬಿಡುಗಡೆಯಾಗಬೇಕಿದ್ದ ಹೀರೋ  Xtreme 160R ಬೈಕ್ ಕೊರೋನಾ ವೈರಸ್ ಕಾರಣ 3 ತಿಂಗಳ ಬಳಿಕ ಬಿಡುಗಡೆಯಾಗುತ್ತಿದೆ. ಕಂಪನಿ ಈಗಾಗಲೇ ಬುಕಿಂಗ್ ಆರಂಭಿಸಿದೆ. ಟೆಸ್ಟ್ ರೈಡ್ ಕೂಡ ನೀಡುತ್ತಿದೆ. ಜುಲೈ ಮೊದಲ ವಾರದಲ್ಲಿ ಹೀರೋ  Xtreme 160R ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.

ಮೇಡ್ ಇನ್ ಇಂಡಿಯಾ ಜೆಮೊಪೈ ಮಿಸೋ ಎಲೆಕ್ಟಿಕ್ ಸ್ಕೂಟರ್ ಬಿಡುಗಡೆ!. 

BS6 ಹೊಂಡಾ ಲಿವೊ 110
ಹೊಂಡಾ ಸಿಡಿ ಡ್ರೀಮ್ 110 BS6 ಬೈಕ್ ಬಳಿಕ ಇದೀಗ ಹೊಂಡಾ ಲಿವೋ 110 ಬೈಕ್ BS6 ಎಂಜಿನ್ ಅಪ್‌ಗ್ರೇಡ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಜುಲೈ ಮೊದಲ ವಾರದಲ್ಲಿ ನೂತನ ಹೊಂಡಾ ಲಿವೊ 110 ಸಿಸಿ ಬೈಕ್ ಬಿಡುಗಡೆಯಾಗುತ್ತಿದೆ. 8.67 bhp ಪವರ್ ಹಾಗೂ   9.30 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

10 ಸಾವಿರ ರೂಪಾಯಿಗೆ ಬೈಕ್ ತಯಾರಿಸಿದ 9ನೇ ತರಗತಿ ವಿದ್ಯಾರ್ಥಿ!.

BS6 TVS ಸ್ಕೂಟಿ ಝೆಸ್ಟ್ 110/ BS6 TVS ವಿಕ್ಟರ್ 110
ಎರಡು ತಿಂಗಳ ಹಿಂದೆ ಟಿವಿಎಸ್ ಮೋಟಾರ್ BS6 TVS ಸ್ಕೂಟಿ ಝೆಸ್ಟ್ 110 ಹಾಗೂ BS6 TVS ವಿಕ್ಟರ್ 110 ವೀಡಿಯೋ ಟೀಸರ್ ಬಿಡುಗಡೆ ಮಾಡಿತ್ತು. ಆದರೆ ಕೊರೋನಾ ವೈರಸ್ ಕಾರಣ ಬಿಡುಗಡೆ ವಿಳಂಬವಾಯಿತು. ಇದೀಗ ಜುಲೈ 2ನೇ ವಾರದಲ್ಲಿ BS6 TVS ಸ್ಕೂಟಿ ಝೆಸ್ಟ್ 110/ BS6 TVS ವಿಕ್ಟರ್ 110 ಬಿಡುಗಡೆಯಾಗಲಿದೆ.

ರಾಯಲ್ ಎನ್‌ಫೀಲ್ಡ್ ಮೆಟೊರ್ 350
ರಾಯಲ್ ಎನ್‌ಫೀಲ್ಡ್ ಥಂಡರ್‌ಬರ್ಡ್ ಬೈಕ್‍ಗೆ ಬದಲಾಗಿ ರಾಯಲ್ ಎನ್‌ಫೀಲ್ಡ್ ಮೆಟೋರ್ ಬೈಕ್ ಬಿಡುಗಡೆಯಾಗುತ್ತಿದೆ. ಇದರ ಆಂದಾಜು ಬೆಲೆ 1.7 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಧಂಡರ್‌ಬರ್ಡ್ ಬೈಕ್ ಫೀಚರ್ಸ್ ಹೊಂದಿರುವ ಮೆಟೋರ ಕೆಲ ಹೆಚ್ಚುವರಿ ಫೀಚರ್ಸ್‌ಗಳೊಂದಿಗೆ ಜುಲೈನಲ್ಲಿ ಬಿಡುಗಡೆಯಾಗಲಿದೆ.

ಹೀರೋ Xಪಲ್ಸ್ 200
ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆ ಆಫ್‌ರೋಡ್ ಬೈಕ್ ಹೀರೋ Xಪಲ್ಸ್ ಬೈಕ್ ಇದೀಗ BS6 ಎಂಜಿನ್ ಬಿಡುಗಡೆಯಾಗುತ್ತಿದೆ. ಜುಲೈನಲ್ಲಿ ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸಲಿದೆ.

click me!