ಭಾರತದ ಮಾರುಕಟ್ಟೆಯಲ್ಲಿ ಹಲವು ಬೈಕ್ ಲಭ್ಯವಿದೆ. ದಿನ ನಿತ್ಯ ಬಳಕೆ ಹಾಗೂ ಲಾಂಗ್ ರೈಡ್‌ಗೂ ಸೈ ಎನಿಸಿಕೊಳ್ಳುವ ಕೆಲ ಬೈಕ್‌ಗಳು ಭಾರಿ ಜನಪ್ರಿಯವಾಗಿದೆ. ಇದರಲ್ಲಿ ಕೈಗೆಟುಕುವ ದರದಲ್ಲಿನ ಕೆಲ ಬೈಕ್ ಭಾರತೀಯರ ಅಚ್ಚು ಮೆಚ್ಚಿನ ಬೈಕ್ ಆಗಿ ಮಾರ್ಪಟ್ಟಿದೆ. ಹೀಗೆ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ದಿನ ನಿತ್ಯ ಹಾಗೂ ಲಾಂಗ್ ರೈಡ್‌ಗೂ ಬಳಕೆ ಮಾಡಬಲ್ಲ ಮೂರು ಬೈಕ್ ವಿವರ ಇಲ್ಲಿದೆ.
ಬೆಂಗಳೂರು(ಜೂ.28): ದಿನ ದಿನತ್ಯ ಬಳಕೆ ಒಂದು ಬೈಕ್ ಲಾಂಗ್ ರೈಡ್ ಅಥವಾ ಆಫ್ ರೋಡ್‌ಗೆ ತೆರಳಲು ಎರಡೆರೆಡು ಬೈಕ್ ಖರೀದಿಸುವುದು ಸುಲಭವಲ್ಲ. ಇಷ್ಟೇ ಅಲ್ಲ ಎರಡು ಬೈಕ್ ನಿರ್ವಹಣೆ ಕೂಡ ಕಷ್ಟ. ಹೀಗಾಗಿ ಕಚೇರಿ ಸೇರಿದಂತೆ ದಿನ ನಿತ್ಯ ಬಳಕೆ ಹಾಗೂ ಆಫ್ ರೋಡ್‌ಗೂ ಸರಿಹೊಂದ ಬಲ್ಲ ಹಲವು ಬೈಕ್‌ಗಳಿವೆ. ಇದರಲ್ಲಿ ಕೈಗೆಟುಕುವ ದರದಲ್ಲಿ ಲಭ್ಯವಿರುವ 3 ಬೈಕ್ ಭಾರತದಲ್ಲಿ ಜನಪ್ರಿಯವಾಗಿದೆ.
ಹೀರೋ Xಪಲ್ಸ್ 200
ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಆಫ್ ರೋಡ್ ಬೈಕ್ ಎಂದರೆ ಹೀರೋ Xಪಲ್ಸ್ 200. ಈಗಾಗಲೇ BS6 ಬೈಕ್ ಅನಾವರಣಗೊಂಡಿದೆ. ಇನ್ನು BS4 ಬೈಕ್ ಬೆಲೆ 1,07,500 ರೂಪಾಯಿ(ಎಕ್ಸ್ ಶೋ ರೂಂ). BS6 ಬೈಕ್ ಬೆಲೆ ಕೊಂಚ ಹೆಚ್ಚಾಗಲಿದೆ. 199.6 cc ಸಿಂಗಲ್ ಸಿಲಿಂಡರ್, ಆಯಿಲ್ ಕೂಲ್, ಫ್ಯೂಯೆಲ್ ಇಂಜೆಕ್ಟೆಡ್ ಬೈಕ್ 17.8 hp ಪವರ್ ಹಾಗೂ 16.4 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
undefined
ರಾಯಲ್ ಎನ್‌ಫೀಲ್ಡ್ ಹಿಮಾಲಯನ್
2016ರಲ್ಲಿ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಆಫ್ ರೋಡ್ ಬೈಕ್ ಹಿಮಾಲಯನ್, ಇದೀಗ ಅಪ್‌ಗ್ರೇಡ್ ವರ್ಶನ್ ಲಭ್ಯವಿದೆ. ಇದರ ಬೆಲೆ 1,89,565 ರೂಪಾಯಿ(ಎಕ್ಸ್ ಶೋ ರೂಂ). 411 cc, 4 ಸ್ಟ್ರೋಕ್, SOHC, ಏರ್ ಕೂಲ್ಡ್, ಫ್ಯೂಯೆಲ್ ಇಂಜೆಕ್ಟೆಡ್, ಸಿಂಗಲ್ ಸಿಲಿಂಡರ್ ಮೋಟಾರ್ ಹೊಂದಿದ್ದು. 24.3 hp ಪವರ್ ಹಾಗೂ 32 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.
KTM 390 ಅಡ್ವೆಂಚರ್
ಆಫ್ ರೋಡ್ ಬೈಕ್ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕಳೆದ ವರ್ಷ KTM ಭಾರತದಲ್ಲಿ KTM 390 ಅಡ್ವೆಂಚರ್ ಬೈಕ್ ಬಿಡುಗಡೆ ಮಾಡಿದೆ. ಹೀರೋ ಹಾಗೂ ರಾಯಲ್ ಎನ್‌ಫೀಲ್ಡ್ ಆಫ್ ರೋಡ್ ಬೈಕ್‌ಗಿಂತ KTM 390 ಅಡ್ವೆಂಚರ್ ಬೈಕ್ ದುಬಾರಿ. ಇದರ ಬೆಲೆ 2.99 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).