ಭಾರತದಲ್ಲಿ ಫಸ್ಟ್ ಎವರ್ BMW X3M ಕಾರು ಬಿಡುಗಡೆ!

By Suvarna News  |  First Published Nov 2, 2020, 6:02 PM IST

ಮೊಟ್ಟಮೊದಲ ಹೈ-ಪರ್ಫಾರ್ಮೆನ್ಸ್ ಮಾದರಿಯನ್ನು ಮಧ್ಯಮ-ಗಾತ್ರದ ಸ್ಪೋಟ್ರ್ಸ್ ಆಕ್ಟಿವಿಟಿ ವೆಹಿಕಲ್ ಫಸ್ಟ್ ಎವರ್ BMW X3M ಭಾರತದಲ್ಲಿ ಬಿಡುಗಡೆಯಾಗಿದೆ. 99.90 ಲಕ್ಷ ರೂಪಾಯಿ ಬೆಲೆಯ ಈ ಕಾರಿನ ವಿಶೇಷತೆ ಏನು? ಇಲ್ಲಿದೆ ವಿವರ. 
 


BMW ಇಂಡಿಯಾ ಮೊಟ್ಟಮೊದಲ M ಕಾರನ್ನು ತನ್ನ ಮಧ್ಯಮಗಾತ್ರದ ಸ್ಪೋರ್ಟ್ಸ್ ಚಟುವಟಿಕೆ ವೆಹಿಕಲ್  ಸೆಗ್ಮೆಂಟ್  BMW X3M ಕಾರು ಬಿಡುಗಡೆ ಮಾಡಿದೆ. ಫಸ್ರ್ಟ್-ಎವರ್ BMW X3M ಕಾರು  ಇತರ ಕಾರುಗಳಿಗಿಂತ ಪ್ರತ್ಯೇಕವಾಗಿ ನಿಲ್ಲುವ ಕಾರ್ಯಕ್ಷಮತೆಯ ಲಕ್ಷಣಗಳು ಕಾರ್ಯ ನಿರ್ವಹಣೆಯ ಅಗತ್ಯಗಳನ್ನು ಪೂರೈಸುವ ವಿಶೇಷತೆಗಳಿಂದ ಕೂಡಿದೆ. ಫಸ್ರ್ಟ್-ಎವರ್ BMW X3M ಈಗ ದೇಶಾದ್ಯಂತಎಲ್ಲ BMW X3M ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದೆ. 

ಭಾರತದಲ್ಲಿ ಫರ್ಸ್ಟ್ ಎವರ್ BMW 2 ಸೀರೀಸ್ ಗ್ರಾನ್ ಕೂಪೆ ಬಿಡುಗಡೆ!.

Tap to resize

Latest Videos

undefined

BMW X3M ಕಾರು ಗಮನಾರ್ಹಯಶೋಗಾಥೆಗೆ ಸಾಕ್ಷಿಯಾಗಿದೆ. ಹೈ-ಪರ್ಫಾರ್ಮೆಸ್ ಮಧ್ಯಮಗಾತ್ರದ ನಮ್ಮ ವ್ಯಾಪ್ತಿಯನ್ನು ಈ ಸೆಗ್ಮೆಂಟ್‍ನಲ್ಲಿ ಮತ್ತಷ್ಟು ಸದೃಢಗೊಳಿಸಲಿದೆ. ಹೊಸ ಚಾಲನೆಯ ಅನುಭವಗಳನ್ನು ನೀಡಲಿದೆ. ಫಸ್ರ್ಟ್-ಎವರ್ BMW X3M ವಿಶಿಷ್ಟತೆಯು ಅದರ ಹೊಸದಾಗಿ ಅಭಿವೃದ್ಧಿಪಡಿಸಲಾದ ಶಕ್ತಿಯುತ ಎಂಜಿನ್ ಮತ್ತುಅತ್ಯಾಧುನಿಕ ತಂತ್ರಜ್ಞಾನದಲ್ಲಿ ಹೊಂದಿದೆ. ಈ ವಾಹನ,  ಐಷಾರಾಮಿ ಮತ್ತು ಸ್ಪೋರ್ಟಿಂಗ್ ಡೈನಾಮಿಕ್ ಸಂಯೋಜನೆಯಾಗಿದೆ.  ಉತ್ಸಾಹಕರ, ಸುರಕ್ಷಿತ ಮತ್ತು ಅಪೂರ್ವ ಚಾಲನೆಯಅನುಭವವನ್ನು ನಮ್ಮಗ್ರಾಹಕರಿಗೆಒದಗಿಸುತ್ತದೆ ಎಂದು  BMW  ಗ್ರೂಪ್‍ಇಂಡಿಯಾ ಪ್ರೆಸಿಡೆಂಟ್, ಶ್ರೀ ವಿಕ್ರಮ್ ಪಾವಾಹ್ ಹೇಳಿದರು. 

ಫಸ್ರ್ಟ್-ಎವರ್ BMW X3M ಎಕ್ಸ್-ಶೋರೂಂ ಬೆಲೆ  99,90,000 ರೂಪಾಯಿ.
 
ಗ್ರಾಹಕರಿಗೆ ಫಸ್ರ್ಟ್-ಎವರ್ BMW X3M ಅವರ ಆಯ್ಕೆಗೆ ತಕ್ಕಂತೆ, ಮನೆಯಿಂದಲೇ ಬುಕಿಂಗ್ ಮಾಡುವ ಅವಕಾಶವಿದೆ. ಅಧೀಕೃತ ವೆಬ್‌ಸೈಟ್ ಮೂಲಕ ಕಾರು  ಕಸ್ಟಮೈಸ್  ಹಾಗೂ  ಬುಕಿಂಗ್ ಮಾಡುವ ಅವಕಾಶ ನೀಡುತ್ತದೆ.  ವಾಹನದ ಹೊರಾಂಗಣ ಮತ್ತು ಒಳಾಂಗಣಗಳ 360ಲಿ ನೋಟವನ್ನುಎಲ್ಲ ಫೀಚರ್‍ಗಳು ಮತ್ತು ವೈಯಕ್ತಿಕರಣಗೊಳಿಸುವ ಆಯ್ಕೆಗಳನ್ನು ಕ್ಲಿಕ್ ಮೂಲಕ ನೀಡಲಿದೆ. ಈ ಉತ್ಪನ್ನ, ಸರ್ವೀಸ್ ಪ್ಯಾಕೇಜಸ್ ಮತ್ತು ಫೈನಾನ್ಸ್ ಆಯ್ಕೆಗಳನ್ನು ಆನ್‍ಲೈನ್ ಡೀಲರ್ ಪ್ರತಿನಿಧಿಯೊಂದಿಗೆ ಸಂವಹನ ನಡೆಸುವ ಮೂಲಕ ತಿಳಿದುಕೊಳ್ಳಬಹುದು.ಇದರೊಂದಿಗೆ ಪಾವತಿಗಳನ್ನು ಆನ್‍ಲೈನ್‍ನಲ್ಲಿ ಸುರಕ್ಷಿತ ರೀತಿಯಲ್ಲಿ ಮಾಡಬಹುದು.

ಫಸ್ರ್ಟ್-ಎವರ್ BMW X3M ಗ್ರಾಹಕರು ಎಕ್ಸ್‍ಕ್ಲೂಸಿವ್ BMW ಎಕ್ಸೆಲೆನ್ಸ್ ಕ್ಲಬ್ ಸದಸ್ಯತ್ವ ಪಡೆಯುತ್ತಾರೆ. ಸದಸ್ಯರಿಗೆ ಮಾತ್ರ ದೊರೆಯುವ BMW ಎಕ್ಸೆಲೆನ್ಸ್ ಕ್ಲಬ್ BMW ಗ್ರಾಹಕರ ವಿಶೇಷ ಅಭಿರುಚಿಗೆ ವಿಶ್ವದ ಮೂಲೆಮೂಲೆಯಿಂದ ಸರಿಸಾಟಿ ಇರದ ಐಷಾರಾಮಿ ಅನುಭವಗಳನ್ನು ರೂಪಿಸುವ ಮೂಲಕ ಪೂರೈಸುತ್ತದೆ. 

ಎಕ್ಸ್‍ಟೀರಿಯರ್ ವಿನ್ಯಾಸವುಎಲ್ಲ BMW  ಮಾದರಿಗಳಲ್ಲೂ ಇರುವಂತೆ ಸದೃಢ ಪ್ರಮಾಣಗಳಲ್ಲಿ ಹೊಂದಿದೆ. ಇದರಉದ್ದದ ವ್ಹೀಲ್ ಬೇಸ್, ಶಾರ್ಟ್ ಓವರ್ ಹ್ಯಾಂಗ್ಸ್,, ಕೊಂಚವೇ ಹೆಕ್ಸಾಗನಲ್ ವ್ಹೀಲ್‍ಆರ್ಚಸ್, ನಿಖರ ಗೆರೆಗಳು ಮತ್ತುಕ್ಲೀನ್-ಕಟ್ ಸರ್ಫೇಸ್ ಫೀಚರ್ ಹೊಂದಿದೆ. ಹೆಚ್ಚುವರಿ ಪ್ರಮಾಣದ ಸ್ಪೋರ್ಟಿಂಗ್ ನೀಡುತ್ತದೆ. ಹೊಚ್ಚಹೊಸ ಮಾದರಿಯು BMW ಗ್ರಿಲ್ ವಿಥ್ ಬ್ಲಾಕ್‍ಡಬಲ್ ಬಾರ್ಸ್‍ಹೊಂದಿದೆ.  

BMW X3M ಇಂಟೀರಿಯ ಕೂಡ ಹೆಚ್ಚು ಸ್ಪೊರ್ಟೀವ್ ಆಗಿದೆ.  ಎಲೆಕ್ಟ್ರಾನಿಕ್ ಅಡ್ಜಸ್ಟೇಬಲ್ ಸ್ಪೋಟ್ರ್ಸ್ ಸೀಟ್‍ಗಳನ್ನು ಮೆಮೊರಿಯೊಂದಿಗೆ ಹೊಂದಿದೆ.ವೆರ್ನಾಸ್ಕಾ ಲೆದರ್‍ಅಪ್‍ಹೋಲ್ಸ್‍ಟ್ರಿ, ಆಂಬಿಯೆಂಟ್ ಲೈಟಿಂಗ್, M-ನಿರ್ದಿಷ್ಟ ಇನ್ಸ್ಟ್ರಮೆಂಟ್ ಮತ್ತುರಿಸ್ಟೈಲ್ಡ್ M ಸೆಲೆಕ್ಟರ್ ಲಿವರ್ ಹೊಂದಿದೆ.ಒಳಾಂಗಣ ಸ್ಪೋರ್ಟಿ ಚಾಲನೆಯಅನುಭವಕ್ಕೆ ಗಮನ ನೀಡಿದರೂಇದು BMW  ಮಾದರಿಗಳು ಖ್ಯಾತಿ ಪಡೆದಿರುವ ವೈವಿಧ್ಯತೆಯನ್ನು ಉಳಿಸಿಕೊಳ್ಳುತ್ತದೆ. ಕ್ಯಾಬಿನ್‍ಗೆ ಸ್ಥಳಾವಕಾಶ ಸೇರ್ಪಡೆ ಮಾಡುವುದು ದೊಡ್ಡ ಪನೋರಮ ಸನ್‍ರೂಫ್. ಈ ವಾಹನವು 40:20:40 ಸ್ಪ್ಲಿಟ್ ಫೋಲ್ಡಿಂಗ್‍ರಿಯರ್ ಬ್ಯಾಕ್‍ರೆಸ್ಟ್ ಹೊಂದಿದ್ದು ಇದು ಲಗೇಜ್ ಸಾಮಥ್ರ್ಯವನ್ನು ಗರಿಷ್ಠ 1,600 ಲೀಟರ್‍ಗಳಿಗೆ ವಿಸ್ತರಿಸಬಹುದು. 

BMW X3M  ಸಿಕ್ಸ್-ಸಿಲಿಂಡರ್ ಇನ್-ಲೈನ್‍ಎಂಜಿನ್  ಹೊಂದಿದೆ.  353 kW/480 hp,  3.0-ಲೀಟರ್ ಡಿಸ್‌ಪ್ಲೇಸ್ಮೆಂಟ್ , 600 NM ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  0-100 ವೇಗ ತಲುಪಲು 4.2 ಸೆಕೆಂಡು ತೆಗೆದುಕೊಳ್ಳುತ್ತಿದೆ. ಟಾಪ್ ಸ್ಪೀಡ್ 250 ಪ್ರತಿ ಗಂಟೆಗೆ.

click me!