ಆರ್ಥಿಕ ಹಿಂಜರಿತ ಸರಿಪಡಿಸಲು ಆನಂದ್ ಮಹೀಂದ್ರ ನೀಡಿದ್ರು ಸೂತ್ರ!

By Web Desk  |  First Published Aug 31, 2019, 7:26 PM IST

ಭಾರತದ ಆರ್ಥಿಕ ಹಿಂಜರಿತ ಸರಿದೂಗಿಸಲು ಆಟೋಮೊಬೈಲ್ ಕ್ಷೇತ್ರದ ದಿಗ್ಗಜ, ಮಹೀಂದ್ರ ಕಂಪನಿ ಮಾಲೀಕ ಆನಂದ್ ಮಹೀಂದ್ರ ಕೆಲ ಸೂಚನೆ ನೀಡಿದ್ದಾರೆ. ಕೇಂದ್ರ ಸರ್ಕಾರದ ನೀತಿಯಲ್ಲಿ ಬದಲಾವಣೆ ತರಲು ಆನಂದ್ ಮಹೀಂದ್ರ ಸೂಚಿಸಿದ್ದಾರೆ.


ಮುಂಬೈ(ಆ.31): ಭಾರತದ ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ. ದೇಶದ GDP ಗಣನೀಯವಾಗಿ ಇಳಿಕೆಯಾಗಿದೆ. ಆರ್ಥಿಕ ಹಿನ್ನಡೆ ಸರಿಪಡಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿದ್ದೆಗೆಡಿಸಿದೆ. ಇದರ ಬೆನ್ನಲ್ಲೇ ಭಾರತದ ಆರ್ಥಿಕ ಸ್ಥಿತಿ ಸರಿಪಡಿಸಲು ಮಹೀಂದ್ರ ಆಟೋಮೊಬೈಲ್ ಕಂಪನಿ ಮಾಲೀಕ ಆನಂದ್ ಮಹೀಂದ್ರ ಕೆಲ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಆಟೋಮೊಬೈಲ್‌ ಉದ್ಯಮದಲ್ಲಿ ಇನ್ನೂ 10 ಲಕ್ಷ ಉದ್ಯೋಗ ಕಡಿತ?

Tap to resize

Latest Videos

undefined

ಭಾರತದ ಆರ್ಥಿಕ ಸ್ಥಿತಿಗತಿಯನ್ನು ಸರಿದೂಗಿಸಲು ಆಟೋಮೊಬೈಲ್ ಮೇಲಿನ GST(ತೆರಿಗೆ) ಕಡಿತಗೊಳಿಸಬೇಕು ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. ದುಬಾರಿ GSTಯಿಂದ ಆಟೋಮೊಬೈಲ್ ಕೆಂಪನಿಗಳು ನಷ್ಟದಲ್ಲಿದೆ. ವಾಹನ ಮಾರಾಟವಾಗುತ್ತಿಲ್ಲ. ಇದರಿಂದ ಲಕ್ಷಕ್ಕೂ ಹೆಚ್ಚು ಜನರೂ ಉದ್ಯೋಗ ಕಳೆದುಕೊಂಡಿದ್ದಾರೆ. ವಾಹನ ಬಿಡಿ ಭಾಗ ಕಂಪನಿಗಳು, ಸಣ್ಣ ಕೈಗಾರಿಕೆ ಎಲ್ಲವೂ ನಷ್ಟ ಅನುಭವವಿಸುತ್ತಿದೆ.  ಹೀಗಾಗಿ ವಾಹನ ಮೇಲಿನ GST ಕಡಿಮೆ ಮಾಡಿದರೆ ಎಲ್ಲದಕ್ಕೂ ಪರಿಹಾರ ಸಿಗಲಿದೆ ಎಂದಿದ್ದಾರೆ.

ಇದನ್ನೂ ಓದಿ: ಕುಸಿದ ಮಾರಾಟಕ್ಕೆ ಚೇತರಿಕೆ; ವಾಹನ ಕಂಪನಿಗಳಿಗೆ ಹಣಕಾಸು ಸಚಿವೆ ಭರವಸೆ!

ಕಳೆದ 18 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭಾರತದ ಆಟೋಮೊಬೈಲ್ ಕ್ಷೇತ್ರ ಪಾತಾಳಕ್ಕೆ ಕುಸಿದಿದೆ. ಆಟೋ ಕ್ಷೇತ್ರಕ್ಕೆ ಉತ್ತೇಜನ ನೀಡಿದರೆ, ಹಲವು ಸಮಸ್ಯೆಗಳು ಪರಿಹಾರವಾಗಲಿದೆ ಎಂದು ಮಹೀಂದ್ರ ಹೇಳಿದ್ದಾರೆ. ಈಗಾಗಲೇ ಆಟೋಮೊಬೈಲ್ ಕಂಪನಿಗಳ ಮೇಲಿರುವ 28 ಶೇಕಡಾ GST(ತೆರಿಗೆ)ಯನ್ನು 18ಕ್ಕೆ ಇಳಿಸಲು ಮನವಿ ಮಾಡಲಾಗಿದೆ. ಆದರೆ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನದ ಮೇಲಿನ GST(ತೆರಿಗೆ) ಇಳಿಸಿದೆ. ಆಧರೆ ಇಂಧನ ವಾಹನಗಳ ಮೇಲಿನ GST(ತೆರಿಗೆ) ಇಳಿಸಿಲ್ಲ.
 

click me!