COVID-19 ಪರಿಹಾರ ನಿಧಿಗೆ 1000 ಕೋಟಿ ನೀಡಿದ ಟಾಟಾ ಸನ್ಸ್; ಇದು ಗರಿಷ್ಠ ದೇಣಿಗೆ!

By Suvarna NewsFirst Published Mar 29, 2020, 4:11 PM IST
Highlights

ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಉದ್ಯಮಿಗಳು, ಸೆಲೆಬ್ರೆಟಿಗಳು, ಕ್ರಿಕೆಟಿಗರು, ಕ್ರೀಡಾ ತಾರೆಯರು ಸಹಾಯ ಹಸ್ತ ಚಾಚಿದ್ದಾರೆ. ಈಗಾಗಲೆ ಟಾಟಾ ಗ್ರೂಪ್ 500 ಕೋಟಿ ರೂಪಾಯಿ ನೀಡಿದೆ. ಇದರ ಬೆನ್ನಲ್ಲೇ ಟಾಟಾ ಸನ್ಸ್ ಬರೋಬ್ಬರಿ 1,000 ರೂಪಾಯಿ ನೀಡಿದೆ. ಇದು ಗರಿಷ್ಠ ದೇಣಿಗೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
 

ಮುಂಬೈ(ಮಾ.29): ಟಾಟಾ ಮೋಟಾರ್ಸ್ ಗ್ರೂಪ್ ಇದೀಗ ಕೊರೋನಾ ವೈರಸ್ ವಿರುದ್ಧದ ಹೋರಾಟಕ್ಕೆ ಗರಿಷ್ಠ ದೇಣಿಗೆ ನೀಡಿದೆ. ಟಾಟಾ ಗ್ರೂಪ್ ಟ್ರಸ್ಟ್ 500 ಕೋಟಿ ಘೋಷಿಸಿದ ಬೆನ್ನಲ್ಲೇ ಇದೀಗ ಟಾಟಾ ಸನ್ಸ್ ಪ್ರವೈಟ್ ಲಿಮಿಟೆಡ್ 1,000 ರೂಪಾಯಿ ನೀಡಿದೆ. ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದೆ. ಇಷ್ಟೇ ಅಲ್ಲ ಕೊರೋನಾ  ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಟಾಟಾ ಸನ್ಸ್ ಕೈಜೋಡಿಸಲಿದೆ. ಸರ್ಕಾರಕ್ಕೆ ಎಲ್ಲಾ ಅಗತ್ಯ ನೆರವು ನೀಡಲಿದೆ ಎಂದಿದೆ.

ಕಾರು ತಯಾರಿಕೆ ನಿಲ್ಲಿಸಿ ವೆಂಟಿಲೇಟರ್ ಉತ್ಪಾದನೆಗೆ ಮುಂದಾದ ಮಹೀಂದ್ರ!

ಟಾಟಾ ಸನ್ಸ್ ಪ್ರವೇಟ್ ಲಿಮಿಟೆಡ್ ಚೇರ್ಮೆನ್ ಚಂದ್ರಶೇಖರನ್ ಪರಿಹಾರ ಮೊತ್ತ ಘೋಷಿಸಿದ್ದಾರೆ. ಟಾಟಾ ಟ್ರಸ್ಟ್ ಈಗಾಗಲೇ 500 ಕೋಟಿ ರೂಪಾಯಿ ನೀಡಿದೆ. ಇದೀಗ ಟಾಟಾ ಸನ್ಸ್ 1000 ಕೋಟಿ ನೀಡುತ್ತಿದೆ.  ಟಾಟಾ ಸನ್ಸ್ ಪ್ರವೈಟ್ ಲಿಮಿಟೆ್ಡ್ ಶೀಘ್ರದಲ್ಲೇ ವೆಂಟಿಲೇಟರ್ ತಯಾರಿಕೆ ಆರಂಭಿಸಲಿದೆ ಎಂದು ಚಂದ್ರಶೇಖರನ್ ಸ್ಪಷ್ಟಪಡಿಸಿದ್ದಾರೆ.

ಟಾಟಾ ಸಮೂಹದಿಂದ 1500 ಕೋಟಿ ನೆರವು!.

ಭಾರತೀಯ ಆಟೋಮೊಬೈಲ್ ಕಂಪನಿಗಳು ಈಗಾಗಲೇ ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಹಣ ನೀಡಿದೆ. ಮಹೀಂದ್ರ ಕಂಪನಿ ಕಡಿಮೆ ಬೆಲೆಗೆ ವೆಂಟೀಲೇಟರ್ ತಯಾರಿಕೆ ಆರಂಭಿಸಿದೆ. ಇತ್ತ ಬಜಾಜ್ ಕಂಪನಿ 100 ಕೋಟಿ ರೂಪಾಯಿ ನೀಡಿದೆ. ಎಂಜಿ ಮೋಟಾರ್ಸ್ ಇಂಡಿಯಾ 2 ಕೋಟಿ ರೂಪಾಯಿ ನೀಡಿದೆ. ಇನ್ನು ಹ್ಯುಂಡೈ ಮೋಟಾರ್ಸ್ ಕೋವಿಡ್ ಟೆಸ್ಟ್ ಕಿಡ್ ನೀಡುತ್ತಿದೆ. 
 

click me!