ಟಾಟಾ ಮೋಟಾರ್ಸ್ ಭಾರತದ ಕಾರು ಮಾರುಕಟ್ಟೆಯಲ್ಲಿ ಕ್ರಾಂತಿ ಮಾಡುತ್ತಿದೆ. ಹೊಸ ಹೊಸ ಕಾರು ಬಿಡುಗಡೆ ಮಾಡೋ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ಹಳೇ ಟಾಟಾ ಸಿಯೆರಾ ಕಾನ್ಸೆಪ್ಟ್ ಕಾರು ಹೊಸ ಅವತಾರದಲ್ಲಿ ಅನಾವರಣ ಮಾಡಲಾಗಿದೆ. ನೂತನ ಕಾರಿನ ವಿಶೇಷತೆ ಇಲ್ಲಿದೆ.
ಗ್ರೇಟರ್ ನೋಯ್ಡಾ(ಫೆ.05): ಟಾಟಾ ಸಿಯೆರಾ ಹೆಸರು ಭಾರತದಲ್ಲಿ ಹೆಚ್ಚು ಜನಪಿಯವಾಗಿದೆ. 1991ರಿಂದ 2000 ವರೆಗೆ ಸಿಯಾರ SUV ಕಾರು ಭಾರತದಲ್ಲಿ ಸಕ್ರಿಯವಾಗಿತ್ತು. ಟಾಟಾ ಸಿಯೆರಾ ಭಾರತದಲ್ಲಿ ಮೊತ್ತ ಮೊದಲ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಡೀಸೆಲ್ ಎಂಜಿನ್ ಕಾರು 2000ದಲ್ಲಿ ಸ್ಥಗಿತಗೊಂಡಿತು. ಇದೀಗ ಇದೇ ಕಾರು ಎಲಕ್ಟ್ರಿಕ್ ಕಾರಾಗಿ ಅನಾವರಣಗೊಂಡಿದೆ.
A legend reborn- the Tata Sierra. pic.twitter.com/GCpJNKD64Z
— Tata Motors (@TataMotors)
undefined
ಇದನ್ನೂ ಓದಿ: ಬಿಗ್‌ಬಾಸ್ ಶೈನ್ ಶೆಟ್ಟಿ ಗೆದ್ದ ಟಾಟಾ ಅಲ್ಟ್ರೋಝ್ ಕಾರಿನ ಬೆಲೆ, ವಿಶೇಷತೆ ಇಲ್ಲಿದೆ!
ನೂತನ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರು ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ನೂತನ ಕಾರು ಅತ್ಯಂತ ಆಕರ್ಷಕ ಲುಕ್ ಹೊಂದಿದೆ. ALFA ARC ಪ್ಲಾಟ್‌ಫಾರ್ಮ್‌ನಲ್ಲಿ ನೂತನ ಸಿಯೆರಾ ಎಲೆಕ್ಟ್ರಿಕ್ ಕಾರು ನಿರ್ಮಾಣಗೊಂಡಿದೆ.
ಇದನ್ನೂ ಓದಿ: ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಲಾಂಚ್, ಹ್ಯುಂಡೈ MGಗೆ ನಡುಕ!
ಲ್ಯಾಂಡ್ ರೋವರ್ ಡಿಫೆಂಡರ್ ಕಾರಿನಂತೆ ಹೋಲುತ್ತಿರುವ ಸಿಯೆರಾ ಕಾರು ತನ್ನ ಹಳೇ ಗ್ಲಾಸ್ ವಿನ್ಯಾಸವನ್ನು ಉಳಿಸಿಕೊಂಡಿದೆ. ಹಳೇ ಸಿಯೆರಾ ಕಾರಿನಲ್ಲೂ ಇದೇ ರೀತಿಯ ಗ್ಲಾಸ್ ಬಳಸಲಾಗಿತ್ತು. ಹಿಂಭಾಗದಲ್ಲಿ ಸಿಂಗಲ್ ಸ್ಲೈಡ್ ಟೈಲ್ ಲ್ಯಾಂಪ್ ಬಳಲಸಾಗಿದ್ದು, ಹೊಸತವನ್ನು ಪರಿಚಯಿಸಿದೆ.