ಬಿಡುಗಡೆಗೆ ಸಜ್ಜಾಗುತ್ತಿದೆ ಟಾಟಾ ಗ್ರಾವಿಟಾಸ್, ಇಲ್ಲಿದೆ 7 ಸೀಟರ್ ಕಾರಿನ ವಿಶೇಷತೆ!

By Suvarna News  |  First Published May 24, 2020, 7:05 PM IST

ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಟಾಟಾ ಮೋಟಾರ್ಸ್ ಚಟುವಟಿಕೆ ಆರಂಭಗೊಂಡಿದೆ. 2020ರ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಿದ್ದ ಟಾಟಾ ಗ್ರಾವಿಟಾಸ್ ಕಾರು 7 ಸೀಟಿನ ಸಾಮರ್ಥ್ಯ ಹೊಂದಿದೆ. ಟಾಟಾ ಹ್ಯಾರಿಯರ್ ಕಾರು ಇದಾಗಿದ್ದು, ಗಾತ್ರ ಹಾಗೂ ಸೀಟ್ ಸಾಮರ್ಥ್ಯ ಹೆಚ್ಚಿದೆ. ನೂತನ ಕಾರು ಬಿಡುಗಡೆಗೆ ಸಜ್ಜಾಗಿದೆ.


ಮುಂಬೈ(ಮೇ.24): ಟಾಟಾ ಹ್ಯಾರಿಯರ್ ಯಶಸ್ಸಿನ ಬೆನ್ನಲ್ಲೇ ಟಾಟಾ ಮೋಟಾರ್ಸ್ 7 ಸೀಟಿನ ಹ್ಯಾರಿಯರ್ ಬಿಡುಗಡೆ ಮಾಡಲು ಮುಂದಾಗಿತ್ತು. ಇದಕ್ಕೆ ಪೂರಕವಾಗಿ 2020ರ ಆಟೋ ಎಕ್ಸ್‌ಪೋದಲ್ಲಿ 7 ಸೀಟಿನ ನೂತನ ಟಾಟಾ ಗ್ರಾವಿಟಾಸ್ ಕಾರನ್ನು ಪರಿಚಯಿಸಿತು. ಆದರೆ ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ಆಟೋಮೊಬೈಲ್ ಸೇರಿದಂತೆ ಎಲ್ಲಾ ಕ್ಷೇತ್ರಗಳು ಸ್ಥಗಿತಗೊಂಡಿತು. ಹೀಗಾಗಿ ಟಾಟಾ ಮೋಟಾರ್ಸ್ ಕಂಪನಿಯ ಹಲವು ಯೋಜನೆಗಳು ವಿಳಂಬಗೊಂಡಿತು.

ಲಾಕ್‌ಡೌನ್ ಸಂಕಷ್ಟ; ಗ್ರಾಹಕರಿಗೆ ವಾರಂಟಿ ವಿಸ್ತರಣೆ ಸೇರಿ ಹಲವು ಸೌಲಭ್ಯ ಘೋಷಿಸಿದ ಟಾಟಾ ಮೋಟಾರ್ಸ್!

Tap to resize

Latest Videos

undefined

ಲಾಕ್‌ಡೌನ್ ಸಡಿಲಿಕೆ ಮಾಡಿದ ಬೆನ್ನಲ್ಲೇ ಇದೀಗ ಟಾಟಾ ಮೋಟಾರ್ಸ್ 7 ಸೀಟಿನ ಟಾಟಾ ಗ್ರಾವಿಟಾಸ್ ಕಾರು ಬಿಡುಗಡೆ ತಯಾರಿ ಮಾಡುತ್ತಿದೆ. ಗ್ರಾವಿಟಾಸ್ ಕಾರಿನ ರೋಡ್ ಟೆಸ್ಟ್ ಬಹುತೇಕ ಪೂರ್ಣಗೊಂಡಿದೆ. ಎಲ್ಲಾ ಪರೀಕ್ಷೆಗಳಲ್ಲೂ ಟಾಟಾ ಗ್ರಾವಿಟಾಸ್ ಯಶಸ್ವಿಯಾಗಿದೆ. ಇತ್ತೀಚೆಗೆ ಬೆಂಗಳೂರು-ಚೆನ್ನೈ ಹೈವೇಯಲ್ಲಿ ಟಾಟಾ ಗ್ರಾವಿಟಾಸ್ ರೋಡ್ ಟೆಸ್ಟ್ ನಡೆಸಿತು.

ಹ್ಯುಂಡೈ, MG ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು!.

ನೂತನ ಗ್ರಾವಿಟಾಸ್ ಕಾರು BS6 ಎಮಿಶನ್ ಎಂಜಿನ್ ಹೊಂದಿದೆ. 2.0-ಲೀಟರ್  ಡೀಸೆಲ್ ಮೋಟಾರ್ ಹೊಂದಿದೆ.  ಪವರ್‌ಫುಲ್ ಎಂಜಿನ್ ಹೊಂದಿರುವ ಗ್ರಾವಿಟಾಸ್ 168bhp ಪವರ್ ಹಾಗೂ 350Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  6 ಸ್ಪೀಡ್ ಮಾನ್ಯುಯೆಲ್ ಹಾಗೂ 6 ಸ್ಪೀಡ್ TC ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ. 

ಮಹಿಂದ್ರ XUV500, ಬಿಡುಗಡೆಯಾಗಲಿರುವ ಎಂಜಿ ಹೆಕ್ಟರ್ ಪ್ಲಸ್ ಸೇರಿದಂತೆ 7 ಸೀಟರ್ ಕಾರಿಗೆ ಪ್ರತಿಸ್ಪರ್ಧಿಯಾಗಿ ಟಾಟಾ ಗ್ರಾವಿಟಾಸ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

click me!