10 ತಿಂಗಳಲ್ಲಿ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ದಾಖಲೆ; ಭಾರತದ EV ಲೋಕದಲ್ಲಿ ಹೊಸ ಸಂಚಲನ!

By Suvarna News  |  First Published Dec 3, 2020, 3:48 PM IST

ಭಾರತದ ಎಲೆಕ್ಟ್ರಿಕ್ ಕಾರು ವಿಭಾಗದಲ್ಲಿ ಟಾಟಾ ಈಗಾಗಲೇ ಹಲವು ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದೆ. ಕೈಗೆಟುಕುವ ದರದಲ್ಲಿ, ಗರಿಷ್ಟ ಮೈಲೇಜ್, 5 ಸ್ಟಾರ್ ಸೇಫ್ಟಿ ಸೇರಿದಂತ ಅತ್ಯುತ್ತಮ ಎಲೆಕ್ಟ್ರಿಕ್ ಕಾರು ನೀಡಿದ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಪಾತ್ರವಾಗಿದೆ. ನೆಕ್ಸಾನ್ EV ಬಿಡುಗಡೆಯಾಗಿ 10 ತಿಂಗಳು ಕಳೆದಿದೆ. ಇದೀಗ ಮತ್ತೊಂದು ದಾಖಲೆ ಬರೆದಿದೆ.


ಮುಂಬೈ(ಡಿ.03): ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ದೇಶದ EV ವಿಭಾಗದಲ್ಲಿ ಹೊಸ ಅಧ್ಯಾಯ ಆರಂಭಿಸಿದ ಕಾರಾಗಿದೆ. ಹ್ಯುಂಡೈ ಕೋನಾ, ಎಂಜಿ ZX ಸೇರಿದಂತೆ  25 ಲಕ್ಷ, 20 ಲಕ್ಷ ರೂಪಾಯಿಗಳ ಎಲೆಕ್ಟ್ರಿಕ್ ಕಾರುಗಳಿಗೆ ಪೈಪೋಟಿಯಾಗಿ ಸರಿಸುಮಾರು 14 ಲಕ್ಷ ರೂಪಾಯಿಗೆ ಬಿಡುಗಡೆಯಾದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ದೇಶದ ಅತ್ಯಂತ ಭರವಸೆಯ ಎಲೆಕ್ಟ್ರಿಕ್ ಕಾರಾಗಿ ಮಾರ್ಪಟ್ಟಿದೆ.

ಲೀಸ್ ಮೂಲಕ ಕಾರು; ಟಾಟಾ ನೆಕ್ಸಾನ್ EV ಮೇಲೆ ಭರ್ಜರಿ ಆಫರ್!

Latest Videos

ಟಾಟಾ ನೆಕ್ಸಾನ್ EV ಬಿಡುಗಡೆಯಾಗಿ ಇದೀಗ 10 ತಿಂಗಳು ಪೂರೈಸಿದೆ. 10 ತಿಂಗಳಲ್ಲಿ 2,000 ಕಾರುಗಳು ಮಾರಾಟವಾಗಿದೆ.  ನವೆಂಬರ್ ಅಂತ್ಯಕ್ಕೆ ಟಾಟಾ ನೆಕ್ಸಾನ್ 2,200 ಕಾರುಗಳು ಮಾರಾಟವಾಗಿದೆ. ಈ ಮೂಲಕ ದೇಶದಲ್ಲಿ ಕಡಿಮೆ ಅವಧಿಯಲ್ಲಿ ಗರಿಷ್ಟ ಮಾರಾಟವಾದ ಎಲೆಕ್ಟ್ರಿಕ್ SUV ಕಾರು ಅನ್ನೋ ಹೆಗ್ಗಳಿಗೆಗೆ ಟಾಟಾ ನೆಕ್ಸಾನ್ ಪಾತ್ರವಾಗಿದೆ.

ಲೀಸ್ ಮೂಲಕ ಕಾರು; ಟಾಟಾ ನೆಕ್ಸಾನ್ EV ಮೇಲೆ ಭರ್ಜರಿ ಆಫರ್!..

ಆಗಸ್ಟ್ ತಿಂಗಳಲ್ಲಿ 1,000 ಎಲೆಕ್ಟ್ರಿಕ್ ನೆಕ್ಸಾನ್ ಕಾರು ಮಾರಾಟವಾಗಿತ್ತು. ಇನ್ನು ಕೊರೋನಾ ಬಳಿಕ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೇಡಿಕೆ ಹೆಚ್ಚಾಗಿದೆ ಆಗಸ್ಟ್‌ನಿಂದ ನವೆಂಬರ್ ವರೆಗೆ ಕಳೆದ 3 ತಿಂಗಳಲ್ಲಿ 1,000 ಕಾರುಗಳು ಮಾರಾಟವಾಗಿದೆ. ಈ ಮೂಲಕ ದೇಶದಲ್ಲಿ ಬಹುಬೇಡಿಕೆಯ ಹಾಗೂ ಗರಿಷ್ಠ ಮಾರಾಟವಾದ ಎಲೆಕ್ಟ್ರಿಕ್ ಕಾರು ಅನ್ನೋ ದಾಖಲೆ ಬರೆದಿದೆ.

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆ 13.99 ಲಕ್ಷ ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇನ್ನು ಗರಿಷ್ಠ ಬೆಲೆ 16.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 127 PS ಪವರ್ ಹಾಗೂ 245 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿ.ಮೀ ಪ್ರಯಾಣದ ರೇಂಜ್ ನೀಡಲಿದೆ.
 

click me!