ಇಕೋ ಸ್ಪೋರ್ಟ್, ಮಹೀಂದ್ರ ಹಿಂದಿಕ್ಕಿದ ಟಾಟಾ ನೆಕ್ಸಾನ್!

By Web Desk  |  First Published Apr 7, 2019, 10:42 AM IST

ಟಾಟಾ ನೆಕ್ಸಾನ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟವಾದ ಬಳಿಕ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ SUV ಕಾರುಗಳ ಪೈಕಿ 2ನೇ ಸ್ಥಾನ ಪಡೆದುಕೊಂಡಿದೆ. ಹಾಗಾದರೆ ಮೊದಲ ಸ್ಥಾನ ಯಾವ ಕಾರು ಪಡೆದುಕೊಂಡಿದೆ. ಟಾಟಾ ನೆಕ್ಸಾನ್ ಕಾರಿಗೆ ಗ್ರಾಹಕರ ಪ್ರತಿಕ್ರಿಯೆ ಹೇಗಿದೆ? ಇಲ್ಲಿದೆ ವಿವರ.
 


ನವದೆಹಲಿ(ಏ.07): ಭಾರತದಲಲ್ಲಿ SUV ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ.  2018ರ ಡಿಸೆಂಬರ್‌ನಲ್ಲಿ ಟಾಟಾ ನೆಕ್ಸಾನ್ ಸುರಕ್ಷತಾ ಪರೀಕ್ಷೆಯಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಮೊದಲ ಕಾರು ಅನ್ನೋ ಹೆಗ್ಗಳಿಕೆಗೆ ಪಾಾತ್ರವಾಯಿತು.  ಗ್ಲೋಬಲ್ NCAP ಫಲಿತಾಂಶ ಪ್ರಕಟಿಸಿದ ಬೆನ್ನಲ್ಲೇ ಟಾಟಾ ನೆಕ್ಸಾನ್ ಕಾರುಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡಿದೆ. ಇದೀಗ ಭಾರತದಲ್ಲಿ ಮಾರಾಟವಾಗೋ SUV ಕಾರುಗಳ ಪೈಕಿ 2ನೇ ಸ್ಥಾನ ಅಲಂಕರಿಸಿದೆ.

ಇದನ್ನೂ ಓದಿ: 100ಕ್ಕೂ ಹೆಚ್ಚು ಲಕ್ಸುರಿ ಕಾರಿನಲ್ಲಿ ಲೋಕಸಭಾ ಚುನಾವಣಾ ಪ್ರಚಾರ!

Latest Videos

undefined

ಜನವರಿಯಿಂದ ಮಾರ್ಚ್‌ವರೆಗಿನ ಮಾರಾಟದಲ್ಲಿ ಟಾಟಾ ನೆಕ್ಸಾನ್ ಕಾರು ಪ್ರತಿ ತಿಂಗಳು ಸರಾಸರಿ 5,000 ಕಾರುಗಳು ಮಾರಾಟವಾಗುತ್ತಿದೆ. ಈ ಮೂಲಕ 2ನೇ ಸ್ಥಾನ ಪಡೆದುಕೊಂಡಿದೆ. ಆದರೆ ಟಾಟಾ ನೆಕ್ಸಾನ್ ಕಾರು ಮಾರಾಟದಲ್ಲಿ ಫೋರ್ಡ್ ಇಕೋಸ್ಪೋರ್ಟ್, ಮಹೀಂದ್ರ XUV300, ಹೊಂಡಾ WRV ಹಾಗೂ ಮಹೀಂದ್ರ TVU300 ಕಾರುಗಳನ್ನ ಹಿಂದಿಕ್ಕಿದೆ.

ಇದನ್ನೂ ಓದಿ: ಹೊಸ ಕಾರು ಖರೀದಿಸಿದ ಹಾರ್ದಿಕ್ ಪಾಂಡ್ಯ- ಬೆಲೆ 2.19 ಕೋಟಿ!

ಟಾಟಾ ನೆಕ್ಸಾನ್ ಜನವರಿಯಲ್ಲಿ 5,095 ಕಾರುಗಳು ಮಾರಾಟವಾಗಿದ್ದರೆ, ಫೆಬ್ರವರಿಯಲ್ಲಿ 5,263 ಕಾರುಗಳು ಮಾರಾಟವಾಗಿದೆ. ಮಾರ್ಚ್ ತಿಂಗಳಲ್ಲಿ 5,615 ಕಾರುಗಳು ಮಾರಾಟವಾಗಿದೆ. SUV ಕಾರು ಮಾರಾಟಜಲ್ಲಿ ಮೊದಲ ಸ್ಥಾನವನ್ನು ಮಾರುತಿ ಬ್ರೆಜಾ ಕಾರು ಆಕ್ರಮಿಸಿಕೊಂಡಿದೆ. ಮಾರುತಿ ಬ್ರೆಜಾ ಕಳೆದ ಮೂರು ತಿಂಗಳಲ್ಲಿ 38,966 ಕಾರುಗಳು ಮಾರಾಟವಾಗಿದೆ. ಇನ್ನು ಟಾಟಾ ನೆಕ್ಸಾನ್ 15,974 ಕಾರು ಮಾರಾಟವಾಗಿದೆ.

click me!