ಭಾರತದ ಶೇ.71 ರಷ್ಟು ರಸ್ತೆ ಅಪಘಾತಕ್ಕೆ ಒಂದೇ ಕಾರಣ; 2019ರ ವರದಿ ಬಹಿರಂಗ!

By Suvarna News  |  First Published Sep 20, 2020, 10:09 PM IST

ಭಾರತದ ರಸ್ತೆ ಅಪಘಾತದ ವರದಿ ಬಹಿರಂಗವಾಗಿದೆ. ಕಳೆದ ವರ್ಷ ದೇಶದಲ್ಲಿ ಸಂಭವಿಸಿದ ಎಲ್ಲಾ ರಸ್ತೆ ಅಪಘಾತಗಳ ಸಮಗ್ರ ವರದಿಯಲ್ಲಿ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಭಾರತದಲ್ಲಿ ಸಂಭವಿಸಿದ ಬಹುತೇಕ ಎಲ್ಲಾ ಅಪಘಾತಕಕ್ಕೆ ಒಂದೇ ಕಾರಣವಾಗಿದೆ.


ವದೆಹಲಿ(ಸೆ.20):  ಭಾರತದಲ್ಲಿ ರಸ್ತೆ ಅಪಘಾತದ ಪ್ರಮಾಣವೇ ಬೆಚ್ಚಿ ಬೀಳಿಸುವಂತಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತೀ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದೆ. ಭಾರತದಲ್ಲಿ ವರ್ಷಕ್ಕೆ ಸರಾಸರಿ 5 ಲಕ್ಷ ರಸ್ತೆ ಅಪಘಾತಗಳು ಸಂಭವಿಸುತ್ತಿದೆ. ಇದು ವಿಶ್ವದಲ್ಲೇ ಗರಿಷ್ಠವಾಗಿದೆ. ಇದೀಗ 2019ರ ರಸ್ತೆ ಅಪಘಾತ ವರದಿ ಬಿಡುಗೆಯಾಗಿದೆ. 2019ರಲ್ಲಿ ಭಾರತದಲ್ಲಿ ಸಂಭವಿಸಿದ ಶೇಕಡಾ 71 ರಷ್ಟು ಅಪಘಾತಗಳು ಅತೀ ವೇಗದ ಪರಿಣಾಮ ಆಗಿದೆ ಎಂದು ವರದಿ ಹೇಳುತ್ತಿದೆ.

3 ಸೆಕೆಂಡ್ ನಿಯಮ; ಚಾಲಕರು ಪಾಲಿಸಲೇಬೇಕು ಈ ರೂಲ್ಸ್!

Tap to resize

Latest Videos

undefined

2019ರಲ್ಲಿ ಭಾರತದಲ್ಲಿ 4,49,002 ರಸ್ತೆ ಅಪಘಾತಗಳು ನಡೆದಿದೆ.  ಇದರಲ್ಲಿ 3,19,028 ರಸ್ತೆ ಅಪಘಾತ ಅಂದರೆ ಶೇಕಡಾ 71 ರಷ್ಟು ಅಪಘಾತ ಅತೀ ವೇಗ ಚಾಲನೆಯಿಂದ ಆಗಿದೆ. ಹೀಗಾಗಿ ಆಯಾ ರಾಜ್ಯಗಳು ರಸ್ತೆ ಅಪಘಾತ ಹಾಗೂ ಎಚ್ಚರಿಕೆ ಕುರಿತು ಚಾಲಕರು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅರಿವು ಮೂಡಿಸಬೇಕು ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ರಾಜ್ಯ ಸಚಿವ ವಿಕೆ ಸಿಂಗ್ ಹೇಳಿದ್ದಾರೆ.

ಡ್ರೈವಿಂಗ್ ವೇಳೆ ಮೊಬೈಲ್ ಬಳಸಬಾರದು ಯಾಕೆ?-ಇಲ್ಲಿದೆ ವೀಡಿಯೋ!.

ಲಾಕ್‌ಡೌನ್ ಕಾರಣ ವಾಹನ ಓಡಾಟ ನಿರ್ಬಂಧಿಸಲಾಗಿತ್ತು. ಹೀಗಾಗಿ ಭಾರತದಲ್ಲಿ ಶೇಕಡಾ  35 ರಷ್ಟು ರಸ್ತೆ ಅಪಘಾತಗಳು ತಗ್ಗಿವೆ. ಪ್ರತಿ ವರ್ಷ ಸರಾಸರಿಯಂತೆ 5 ಲಕ್ಷ ಅಪಘಾತ ಸಂಭವಿಸುತ್ತಿದ್ದು, ಇದರಲ್ಲಿ 1.5 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದಾರೆ. 3 ಲಕ್ಷ ಮಂದಿ ಗಾಯಗೊಂಡು ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ವಿಕೆ ಸಿಂಗ್ ಹೇಳಿದ್ದಾರೆ.

click me!