ಟ್ರಕ್ ಚಾಲಕರಿಗೆ ಆಹಾರ, ವೈದ್ಯಕೀಯ ನೆರವು ಒದಗಿಸಿದ ಟಾಟಾ ಮೋಟಾರ್ಸ್!

By Suvarna News  |  First Published Jun 20, 2020, 2:16 PM IST

ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಸರ್ಕಾರದ ಜೊತೆ ಕೈಜೋಡಿಸಿರುವ ಟಾಟಾ ಮೋಟಾರ್ಸ್ ಈಗಾಗಲೇ ಹಲವು ಹಂತದಲ್ಲಿ ನೆರವು ನೀಡಿದೆ. ಟಾಟಾ ಸಮೂಹ ಒಟ್ಟು 1500 ಕೋಟಿ ರೂಪಾಯಿ ದೇಣಿಗೆ ನೀಡಿದೆ. ಇದೀಗ ಟ್ರಕ್ ಚಾಲಕರಿಗೆ ಟಾಟಾ ಮೋಟಾರ್ಸ್ ನೆರವು ನೀಡಿದೆ.


ಮುಂಬೈ(ಜೂ.20):  ಭಾರತದ ಅತಿದೊಡ್ಡ ವಾಣಿಜ್ಯ ವಾಹನಗಳ ಉತ್ಪಾದಕರಾದ ಟಾಟಾ ಮೋಟಾರ್ಸ್ ಎಲ್ಲಾ ಅಗತ್ಯವಾದ ವಸ್ತುಗಳ ಸರಬರಾಜು ತಡೆಯಿಲ್ಲದೆ ಮತ್ತು ಸುಗಮವಾಗಿ ದೇಶಾದ್ಯಂತ ನಡೆಯುವಂತೆ ಮಾಡಲು ಸಾರಿಗೆ ವ್ಯವಸ್ಥೆಗೆ ಸಮಗ್ರ ಬೆಂಬಲ ನೀಡಿದೆ. ಟ್ರಕ್ ಚಾಲಕರು, ಸಣ್ಣ ಸಾರಿಗೆಸಂಸ್ಥೆಗಳು, ಮಧ್ಯಮಗಾತ್ರದ ಸಾರಿಗೆ ನಿರ್ವಾಹಕರು ಮತ್ತು ವಾಹನಪಡೆ ಮಾಲಿಕರು ಕೊರೋನಾ ವೈರಸ್ ಕಠಿಣ ಸಂದರ್ಭದಲ್ಲೂ ಕೆಲಸ ಮಾಡುತ್ತಿದ್ದಾರೆ.  ಇದೀಗ ಇವರಿಗೆ ಟಾಟಾ ಮೋಟಾರ್ಸ್ ನೆರವು ನೀಡಿದೆ. 

ಟಾಟಾ ಅಲ್ಟ್ರೋಜ್ ಕಾರಿಗೆ ಬಂಪರ್ ಆಫರ್, EMI ಕೇವಲ 5,555 ರೂಪಾಯಿ!.

Tap to resize

Latest Videos

ಟ್ರಕ್ ಚಾಲಕರು ಮತ್ತು ಸಾರಿಗೆಸಂಸ್ಥೆಗಳೊಂದಿಗೆ ಸಹಯೋಗ:
ದೇಶಾದ್ಯಂತ ಸರಕನ್ನು ಸಾಗಿಸುತ್ತಿರುವ ಮುಂಚೂಣಿಯಲ್ಲಿರುವ ಹೀರೊ ಟ್ರಕ್  ಚಾಲಕರಿಗೆ, ಆಹಾರ, ಮಾಸ್ಕ್ ಮತ್ತು ಸ್ಯಾನಿಟೈಜರ್ ಗಳನ್ನು ಇಡೀ ಟಾಟಾ ಮೋಟಾರ್ಸ್ ಕಾರ್ಯಾಚರಣೆಯ ಜಾಲದಲ್ಲಿರುವ ವಿವಿಧ ಸಾರಥಿ ಆರಾಮ ಕೇಂದ್ರಗಳಲ್ಲಿ ಮತ್ತು ದೇಶದ ಅತ್ಯಂತ ರಾಷ್ಟ್ರ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿರುವ ಇಂಡಿಯನ್ ಆಯಿಲ್ ಘಟಕಗಳಲ್ಲಿ ಒದಗಿಸಲಾಗಿದೆ. ಈ ಸೇವೆಗಳಿಂದ ಹಾಗೂ ಸೌಲಭ್ಯಗಳಿಂದ ಸಾವಿರಾರು ಟ್ರಕ್ ಚಾಲಕರಿಗೆ ಲಾಭವಾಗಿದೆ.

65 ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಬುಕ್ ಮಾಡಿದ ಸರ್ಕಾರ!.

ಲಾಕ್‍ಡೌನ್ ನ ಅವಧಿಯಲ್ಲಿ ಒಂದು 24x7  ಸಹಾಯವಾಣಿ 1800 209 7979  ನ್ನು ಟ್ರಕ್ ಚಾಲಕರಿಗೆ ಮತ್ತು ಸಾರಿಗೆ ಸಂಸ್ಥೆಗಳಿಗೆ ಸ್ಥಾಪಿಸಲಾಗಿದೆ. ಬರುವ ಕೋರಿಕೆಗಳನ್ನು ಕ್ಷಿಪ್ರವಾಗಿ ಪೂರೈಸಲು, 900 ತುರ್ತು ಪ್ರತಿಕ್ರಿಯಾ ತಂಡಗಳನ್ನು ಸೃಷ್ಟಿಸಿ, ಅವುಗಳನ್ನು ಪ್ರಮುಕ ಸಾರಿಗೆ ಕೇಂದ್ರಗಳು ಮತ್ತು ಮಾರ್ಗಗಳಲ್ಲಿ ನಿಯೋಜಿಸಲಾಗಿದೆ. ಈ ತಂಡಗಳನ್ನು ಟಾಟಾ ಮೋಟಾರ್ಸ್‍ನ ದೇಶವ್ಯಾಪಿ 1400 ಕಾರ್ಯಾಗಾರಗಳಿಂದ ಆರಿಸಲಾದ 4000 ತರಬೇತಿಪಡೆದ ಮತ್ತು ಅನುಭವಿ ತಂತ್ರಜ್ಞರನ್ನು ನಿರ್ವಹಿಸಿದ್ದು, ವಾಹನಗಳ ಕ್ಷಿಪ್ರ ದುರಸ್ತಿಗೆ ಬಿಡಿಭಾಗಗಳು ಬೇಗನೆ ಲಭ್ಯವಾಗಿರುವಂತೆ 21 ಪೂರ್ಣ ಸುಸಜ್ಜಿತ ಉಗ್ರಾಣಗಳನ್ನೂ ಸ್ಥಾಪಿಸಲಾಗಿದೆ. ವಾಹನ ಸಂಬಂಧಿತ ನೆರವನ್ನು ಕೋರಿ ಪಡೆಯಲಾದ 10000 ಕೋರಿಕೆಗಳನ್ನು ಕೂಡಲೇ ಪುರೈಸಲಾಗಿದ್ದು, ವಾಹನಗಳ ಒಡಾಟವನ್ನು ಬೆಂಬಲಿಸಲಾಗಿದೆ.

 ರಾಷ್ಟ್ರೀಯ ಲಾಕ್‍ಡೌನ್ ಅವಧಿಯಲ್ಲಿ ಕೊನೆಯಾಗುತ್ತಿದ್ದ ವಾಣಿಜ್ಯ ವಾಹನಗಳ ವ್ಯಾರಂಟಿಗಳನ್ನು ವಿಸ್ತರಿಸಲಾಗಿದೆ. ಅದೇ ರೀತಿ, ಟಾಟಾ ಸುರಕ್ಷಾದ ವಾರ್ಷಿಕ ನಿರ್ವಹಣೆಯ ಅವಧಿಯನ್ನೂ ವಿಸ್ತರಿಸಿ, ಗ್ರಾಹಕರಿಗೆ ಲಾಭ ನೀಡಲಾಗಿದೆ.

ಟ್ರಕ್ ಚಾಲಕರು ಮತ್ತು ಸಾರಿಗೆಸಂಸ್ಥೆಗಳು ಅಗ್ರ ನಾಯಕರಾಗಿದ್ದಾರೆ, ಏಕೆಂದರೆ ಅವರು ಎಲ್ಲಾ ಸರಬರಾಜುಗಳ ಸುಗಮವಾದ ಸಾರಿಗೆಯನ್ನು ಮುಂದುವರೆಸಲು ರಾಷ್ಟ್ರದ ವಾಹನಗಳು ಸಾಗುತ್ತಿರಲು ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಭಾರತದ ಅಗ್ರ ವಾಣಿಜ್ಯ ವಾಹನಗಳ ಉತ್ಪಾದಕರಾಗಿ, ಅವರಲ್ಲಿ ಬಹಳಷ್ಟು ಜನರು ನಮ್ಮ ವಾಹನಗಳನ್ನು ಬಳಸುತ್ತಾರೆ, ಮತ್ತು ಅವರಿಗೆ ನೆರವಾಗಲು ನಾವು ಮೊದಲ ಬಿಂದುವಾಗಿದ್ದೇವೆ. ಈ ಅನಿರೀಕ್ಷಿತ ಸಮಯದಲ್ಲಿ, ನಾವು ಬದ್ಧ ಪಾಲುದಾರರಾಗಿದ್ದೇವೆ, ಮತ್ತು ಅವರಿಗೆ ಮತ್ತು ಅವರ ವಾಹನಗಳಿಗೆ ಎಲ್ಲಾ ಕಾರ್ಯಸಾಧ್ಯ ನೆರವನ್ನು ಒದಗಿಸುತ್ತಿದ್ದೇವೆ. ನಾವು ನಮ್ಮ ಪರಿಶ್ರಮಗಳಲ್ಲಿ ಸರ್ವಾಂಗೀಣ ವಿಧಾನವನ್ನು ಅನುಸರಿಸಿದ್ದು, ಅವರ ಕಷ್ಟಕರ ಕೆಲಸ ಮತ್ತು ಜೀವನವನ್ನು ಸ್ವಲ್ಪ ಆರಾಮವಾಗಿಸಿದ್ದೇವೆ ಎಂದು ಟಾಟಾ ಮೋಟಾರ್ಸ್ ಗ್ರಾಹಕ ಆರೈಕೆಯ ಮುಖ್ಯಸ್ಥರಾದ ಆರ್ ರಾಮಕೃಷ್ಣನ್ ಹೇಳಿದರು. 
 

click me!